About Us Advertise with us Be a Reporter E-Paper

Breaking Newsದೇಶಪ್ರಚಲಿತ
Trending

ರಾಜಕೀಯ ಮೇಲಾಟದ ವಿರುದ್ಧ ತೊಡೆ ತಟ್ಟಿದ ಸೇನಾ ಸಿಬ್ಬಂದಿ

ದೆಹಲಿ: ಹಿಂದೆಂದೂ ಕೇಳರಿಯದ ಬೆಳವಣಿಗೆಯಲ್ಲಿ, ಸೇನೆಯ 300ಕ್ಕೂ ಹೆಚ್ಚು ಯೋಧರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ.

“ದೇಶದ ಸಾರ್ವಭೌಮತೆ, ಘನತೆ ಹಾಗೂ ಭದ್ರತೆಯನ್ನು ಕಾಪಾಡುವ ವಿಚಾರವಾಗಿ ಯೋಧರ ನೈತಿಕ ಬಲ ಕುಗ್ಗಿಸುವ ಕೆಲಸಕ್ಕೆ ಮುಂದಾಗಬೇಡಿ” ಎಂಬ ಅರ್ಥದ ಈ ಮನವಿಯು ದೇಶದ ಗಮನ ಸೆಳೆದಿದೆ.

ಕರ್ನಲ್‌ ಅಮಿತ್‌ ಕುಮಾರ್‌ ವಸರ್ಸ್‌ ಯೂನಿಯನ್‌ ಆಫ್‌ ಇಂಡಿಯಾ ಹೆಸರಿನ 156 ಪುಟಗಳ ಈ ಅರ್ಜಿಯಲ್ಲಿ, “ಸಶಸ್ತ್ರ ಪಡೆಗಳ ವಿಶೇಷ ಕಾಯಿದೆಯು ದೇಶದ ಭದ್ರತೆಯ ಅವಿಭಾಜ್ಯ ಅಂಶವಾಗಿದೆ.ತಮ್ಮ ಕರ್ತವ್ಯ ನಿರ್ವಹಣೆ ಸಂದರ್ಭ ಯಾವುದೇ ಸೈನಿಕ ತೆಗೆದುಕೊಳ್ಳುವ ಹೆಜ್ಜೆಗಳ ವಿರುದ್ಧ ಕ್ರಿಮಿನಲ್ ತನಿಖೆಗಳನ್ನು ನಡೆಸುವ ಮೂಲಕ ಆತನ ನೈತಿಕ ಸ್ಥೈರ್ಯ ಕುಗ್ಗಿಸಲು ಯತ್ನಿಸಬಾರದು” ಎಂದು ಅರ್ಜಿಯಲ್ಲಿ ಹೇಳಿರುವ ಸಾರವಾಗಿದೆ.

ತಮ್ಮ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದ ವೇಳೆ, ತಮ್ಮ ತುಕಡಿಗಳ ಮೇಲೆ ಮಾರಣಾಂತಿಕವಾಗಿ ಕಲ್ಲು ತೂರಾಟ ನಡೆಸಲು ಬಂದಿದ್ದ ದಂಗೆಕೋರರ ವಿರುದ್ಧ ಆತ್ಮರಕ್ಷಣೆ ದೃಷ್ಟಿಯಿಂದ ಗುಂಡು ಹಾರಿಸಿದ್ದ ಮೇಜರ್‌ ಆದಿತ್ಯಾ ವಿರುದ್ಧ ಎಫ್‌ಐಆರ್‌ ದಾಖಲಿಸಿದ್ದ ಮೆಹಬೂಬಾ ಮುಫ್ತಿ ನೇತೃತ್ವದ ಜಮ್ಮು ಕಾಶ್ಮೀರ ಸರಕಾರದ ನಡೆಯಂಥ ಕೆಲಸಗಳನ್ನು ಪ್ರಶ್ನಿಸಲಾಗಿದೆ.

ಶಾಂತಿ ಪಾಲನೆ ಹಾಗು ಶತ್ರುಗಳಿಂದ ರಾಷ್ಟ್ರ ರಕ್ಷಣೆ ಸಂದರ್ಭ ತಮ್ಮ ಕರ್ತವ್ಯ ನಿರ್ವಹಣೆ ವೇಳೆ ಈಶಾನ್ಯ ರಾಜ್ಯಗಳಲ್ಲಿ ನಡೆದ ಎನ್‌ಕೌಂಟರ್‌ಗಳನ್ನು ನಕಲಿ ಎಂದು ಎಫ್‌ಐಆರ್‌ ದಾಖಲು ಮಾಡಲು ಮುಂದಾದ ಸಿಬಿಐ, ಕೇಂದ್ರ ಗೃಹ ಸಚಿವಾಲಯ ಹಾಗು ರಕ್ಷಣಾ ಸಚಿವಾಲಯದ ನಡೆಯನ್ನು ಪ್ರಶ್ನಿಸಿರುವ ಈ ಯೋಧರು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದಾರೆ.

ಈ ವಿಚಾರವನ್ನು ಮುಂದಿನ ವಾರಕ್ಕೆ ಆಲಿಕೆ ಮಾಡಲಾಗುವುದು ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಸೂಕ್ಷ್ಮ ಪ್ರದೇಶಗಳಲ್ಲಿ ತಮ್ಮ ಕರ್ತವ್ಯ ನಿರ್ವಹಣೆಗೆ ಅನುವಾಗಲೆಂದು ಜಾರಿ ಮಾಡಿರುವ ಸಶಸ್ತ್ರ ಪಡೆಗಳ ವಿಶೇಷ ಕಾಯಿದೆಯನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂಬ ಆಪಾದನೆ ಮೇರೆಗೆ ಸೈನ್ಯದ ವಿರುದ್ಧ ಸಾಕಷ್ಟು ಬಾರಿ ಆಂತರಿಕ ಹಾಗು ಇತರ ಸಂಸ್ಥೆಗಳ ತನಿಖೆಗೆ ಆದೇಶ ನೀಡುತ್ತಾ ಬರಲಾಗುತ್ತಿದೆ.

ಈ ರೀತಿಯ ಉಪಟಳದಿಂದ ಸೇನೆಯ ನೈತಿಕ ಸ್ಥೈರ್ಯ ಕುಗ್ಗಲಿದ್ದು, ರಾಷ್ಟ್ರದ ಭದ್ರತೆಯೊಂದಿಗೆ ಮಾಡಿಕೊಳ್ಳುವ ಘನಘೋರ ರಾಜಿಯಾಗಿದೆ ಎಂದು ಈ ಸಿಬ್ಬಂದಿ ಆಪಾದನೆ ಮಾಡಿದ್ದಾರೆ.

Tags

Related Articles

Leave a Reply

Your email address will not be published. Required fields are marked *

Language
Close