About Us Advertise with us Be a Reporter E-Paper

Breaking Newsಪ್ರಚಲಿತಸಿನಿಮಾಸ್

ನಿರ್ದೇಶಕ ಎ.ಆರ್.ಬಾಬು ನಿಧನ

ಬೆಂಗಳೂರು: ಕನ್ನಡದ ಖ್ಯಾತ ನಿರ್ದೇಶಕ ಎ.ಆರ್.ಬಾಬು ನಿಧನ ಹೊಂದಿದ್ದಾರೆ. ಅನೇಕ ದಿನಗಳಿಂದ ಕಿಡ್ನಿ ಸಮಸ್ಯೆೆಯಿಂದ ಬಳಲುತ್ತಿದ್ದ ಬಾಬು, ಮಂಗಳವಾರ ಬೆಳಗ್ಗೆ 8.50ರ ಸುಮಾರಿಗೆ ಬೆಂಗಳೂರಿನ ಅಪೋಲೋ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ.

ಬಾಬು ‘ಹಲೋ ಯಮ’, ’ಕಾಸಿದ್ದವನೇ ಬಾಸು’, ’ಯಾರದ್ದೋ ದುಡ್ಡು ಯಲಮ್ಮನ ಜಾತ್ರೆ’ ’ಆಂಧ್ರ ಹೆಂಡತಿ’, ’ಆಗೋದೆಲ್ಲ ಒಳ್ಳೆಯದಕ್ಕೆ’, ’ಚಮ್ಕಾಯ್ಸಿ ಚಿಂದಿ ಉಡಾಯ್ಸಿ’, ‘ಸಪ್ನೊಂಕಿ ರಾಣಿ’ ಸೇರಿದಂತೆ ಅನೇಕ ಚಿತ್ರಗಳಿಗೆ ಆಕ್ಷನ್ ಕಟ್ ಹೇಳಿದ್ದರು.

ನಿರ್ದೇಶಕ ಜೋಗಿ ಪ್ರೇಮ್ ಸೇರಿದಂತೆ ಕೆಲ ಪ್ರತಿಭಾವಂತರನ್ನು ಚಿತ್ರರಂಗಕ್ಕೆ ಪರಿಚಯ ಮಾಡಿದ್ದ ಖ್ಯಾತಿ ಇವರ ದ್ದು. ’ಹಲೋ ಯಮ’ ಸಿನಿಮಾದಲ್ಲಿ ಪ್ರೇಮ್ ಇವರ ಬಳಿ ಕೆಲಸ ಮಾಡಿದ್ದರು. ಈ ಚಿತ್ರದ ‘ತೆರಿಯಾದು ಪೋಯಾ..’ ಡೈಲಾಗ್ ಇಂದಿಗೂ ಜನಪ್ರಿಯವಾಗಿದೆ. ಎ.ಆರ್.ಬಾಬು ನಿಧನಕ್ಕೆ ನವರಸನಾಯಕ ಜಗ್ಗೇಶ್ ಸೇರಿದಂತೆ ಸ್ಯಾಂಡಲ್‌ವುಡ್ ತಾರೆಯರು ಸಂತಾಪ ಸೂಚಿಸಿದ್ದಾರೆ.

Tags

Related Articles

Leave a Reply

Your email address will not be published. Required fields are marked *

Language
Close