About Us Advertise with us Be a Reporter E-Paper

Breaking Newsಪ್ರಚಲಿತಸಿನಿಮಾಸ್

ಪ್ರೀತಮ್ ಗುಬ್ಬಿಯ ‘ಗೋಲ್ಡನ್’ ಸಿನಿಮಾ

ಬೆಂಗಳೂರು: ‘ಮಳೆಯಲಿ ಜೊತೆಯಲಿ’ ಮೂಲಕ ಒಂದಾಗಿದ್ದ ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ಪ್ರೀತಂ ಗುಬ್ಬಿ ಜೋಡಿ ‘99’ ಚಿತ್ರದ ಮೂಲಕ ಮತ್ತೆ ಒಂದಾಗಲಿದೆ.

ಟಾಲಿವುಡ್‌ನಲ್ಲಿ ದೊಡ್ಡ ಮಟ್ಟದ ಪ್ರೇಕ್ಷಕರ ಪ್ರೀತಿ ಪಡೆದಿದ್ದ ‘96’ ಸಿನಿಮಾ ಕನ್ನಡಕ್ಕೆ ರಿಮೇಕ್ ಆಗುತ್ತಿದ್ದು, ‘ರಾಮು ಬ್ಯಾನರ್’ನಲ್ಲಿ ಸಿನಿಮಾ ನಿರ್ಮಾಣವಾಗಲಿದೆ. ತಮಿಳಿನಲ್ಲಿ ವಿಜಯ್ ಸೇತುಪತಿ ಮತ್ತು ತ್ರಿಶಾ ’96’ ಚಿತ್ರದಲ್ಲಿ ಅಭಿನಯಿಸಿದ್ದು, ಈ ಪ್ರೇಮಕತೆ ಪ್ರೇಕ್ಷಕರ ಹೃದಯ ಗೆದ್ದಿತ್ತು. ಇಂತಹ ಸೂಪರ್ ಹಿಟ್ ಸಿನಿಮಾ ಕನ್ನಡಕ್ಕೆ ರಿಮೇಕ್ ಆಗುತ್ತಿರುವುದು ಎಲ್ಲರ ಗಮನಸೆಳೆದಿದೆ.

ವಿಜಯ್ ಸೇತುಪತಿಯ ಪಾತ್ರವನ್ನು ಕನ್ನಡದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯಿಸಲಿದ್ದು, ನಾಯಕಿಯ ಆಯ್ಕೆಯಷ್ಟೇ ಆಗಬೇಕಿದೆ. ಈಗಾಗಲೇ ಅನೇಕ ಪ್ರೇಮಕತೆಗಳನ್ನು ಹೇಳಿ ಗೆದ್ದಿರುವ, ಪ್ರೀತಮ್ ಗುಬ್ಬಿ ಮತ್ತೊಂದು ಲವ್ ಸ್ಟೋರಿ ಮೂಲಕವೇ ಕಮ್ ಬ್ಯಾಕ್ ಆಗಿರುವುದು ವಿಶೇಷ. ಪ್ರೀತಂ ಗುಬ್ಬಿ ಮತ್ತು ಗಣೇಶ್ ಕಾಂಬಿನೇಷನ್ನಿನ ಎರಡನೇ ಚಿತ್ರ ಇದಾಗಿದ್ದು, ಪ್ರೇಕ್ಷಕರಲ್ಲಿ ನಿರೀಕ್ಷೆ ಹೆಚ್ಚಿಸಿದೆ. ಮುಂದಿನ ವರ್ಷ ಚಿತ್ರ ಸೆಟ್ಟೇರುವ ಸಾಧ್ಯತೆ ಇದೆ.

Tags

Related Articles

Leave a Reply

Your email address will not be published. Required fields are marked *

Language
Close