About Us Advertise with us Be a Reporter E-Paper

Breaking Newsದೇಶಪ್ರಚಲಿತ

ಬಿಜೆಪಿ ರ‍್ಯಾಲಿಗೆ ಅನುಮತಿ ನಿರಾಕರಿಸಿದ ಮಮತಾ

ಕೋಲ್ಕತಾ: ಕೂಚ್ ಜಿಲ್ಲೆಯಲ್ಲಿ ರಥಯಾತ್ರೆ ನಡೆಸಲು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರಿಗೆ ಪಶ್ಚಿಮ ಬಂಗಾಳ ಹೈಕೋರ್ಟ್ ಅನುಮತಿ ನಿರಾಕರಿಸಿದೆ. ಈ ಯಾತ್ರೆಯಿಂದ ಕೋಮು ಗಲಭೆ ನಡೆಯಬಹುದೆಂದು ರಾಜ್ಯ ಸರಕಾರ ನ್ಯಾಯಾಲಯದ ಗಮನಕ್ಕೆ ತಂದ ನಂತರ ಹೈಕೋರ್ಟ್ ಈ ನಿರ್ಧಾರ ಪ್ರಕಟಿಸಿದೆ. ಶುಕ್ರವಾರ ಈ ರಥಯಾತ್ರೆ ಆರಂಭವಾಗಬೇಕಿತ್ತು.

ರಾಜ್ಯದ ಅಡ್ವೋಕೇಟ್ ಜನರಲ್ ಕಿಶೋರ್ ದತ್ತಾ, ಕೂಚ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಬಿಜೆಪಿ ಅಧ್ಯಕ್ಷರ ರಥಯಾತ್ರೆಗೆ ಅನುಮತಿ ನಿರಾಕರಿಸಿದ್ದಾರೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು. ಶುಕ್ರವಾರದಿಂದ ಅಮಿತ್ ಶಾ ಪ್ರಜಾಪ್ರಭುತ್ವ ಉಳಿಸಿ ರ‍್ಯಾಲಿಗೆ ಚಾಲನೆ ನೀಡಬೇಕಿತ್ತು. ಪಕ್ಷವು ಮತ್ತೆ ವಿಭಾಗೀಯ ಪೀಠದ ಮೊರೆ ಹೋಗಿದೆ. ಈ ಜಿಲ್ಲೆಗೆ ಕೋಮು ಗಲಭೆಯ ಕರಾಳ ಇತಿಹಾಸವಿದೆ.

ಈಗಾಗಲೇ ಕೋಮು ಗಲಭೆಗೆ ಪ್ರಚೋದನೆ ನೀಡುವವರು ಮತ್ತು ರೌಡಿಗಳು ಜಿಲ್ಲೆಯಲ್ಲಿ ಸಕ್ರಿಯರಾಗಿದ್ದಾರೆ. ಹಿರಿಯ ಬಿಜೆಪಿ ಮುಖಂಡರು ಮತ್ತು ಇತರ ರಾಜ್ಯಗಳಿಂದಲೂ ಮುಖಂಡರು ಆಗಮಿಸುವುದರಿಂದ ಕೋಮು ಸೌಹಾರ್ದತೆಗೆ ಧಕ್ಕೆ ಉಂಟಾಗಲಿದೆ ಎಂದು ಜಿಲ್ಲಾ ಎಸ್‌ಪಿ ಮಾಹಿತಿ ನೀಡಿದ್ದಾರೆ.

ಶಾಂತಿಯನ್ನು ಕಾಪಾಡುವ ಹೊಣೆ ಯಾರದ್ದು ಎಂದು ನ್ಯಾಯಧೀಶರಾದ ತಪಬ್ರಾತಾ ಚಕ್ರವರ್ತಿಪ್ರಶ್ನಿಸಿದಾಗ ಬಿಜೆಪಿ ಪರ ವಕೀಲರು, ಬಿಜೆಪಿ ಶಾಂತಿಯುತವಾಗಿ ರ‍್ಯಾಲಿ ನಡೆಸಲಿದೆ. ಆದರೆ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವುದು ರಾಜ್ಯ ಸರಕಾರದ ಜವಬ್ದಾರಿ ಎಂದರು.

ಸುಳ್ಳು ಹೇಳುವ ಪಕ್ಷ ಬಿಜೆಪಿ
ಹಿಂದೂಗಳ ಹೆಸರಿನಲ್ಲಿ ಬಿಜೆಪಿ ಸುಳ್ಳು ಹೇಳುವ ಪಕ್ಷವಾಗಿದೆ ಎಂದು ಸಿಎಂ ಮಮತಾ ಬ್ಯಾನರ್ಜಿ ಟೀಕಿಸಿದ್ದಾರೆ. ಪುರ್ಬಾ ಮೇದಿನಿಪುರ್‌ದಲ್ಲಿ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಿದ ಅವರು ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಅಸ್ಸಾಂನಲ್ಲಿ 40 ಲಕ್ಷ ನಾಗರೀಕರ ಹೆಸರನ್ನು ಮತದಾರರ ಪಟ್ಟಿಯಿಂದ ತೆಗೆಯಲಾಗಿದೆ. ಅದರಲ್ಲಿ 23 ಲಕ್ಷ ಹಿಂದೂ, ಬೆಂಗಾಳಿಯರೇ ಆಗಿದ್ದು, ಹಿಂದೂಗಳ ಹೆಸರಲ್ಲಿ ಯಾರು ಸುಳ್ಳು ಹೇಳುತ್ತಿದ್ದಾರೆ ಎಂದು ಅರ್ಥ ಮಾಡಿಕೊಳ್ಳಬೇಕು ಎಂದು ಹರಿಹಾಯ್ದಿದಿದ್ದಾರೆ.

ಇತಿಹಾಸ ತಿರುಚುವದರಲ್ಲಿ ಬಿಜೆಪಿ ಪರಿಣಿತಿ ಪಡೆದಿದೆ. ಹೆಸರುಗಳನ್ನು ಬದಲಿಸಬಹುದು, ಆದರೆ ಗೇಮ್ ಚೇಂಜರ್ ಆಗಲು ಸಾಧ್ಯವಿಲ್ಲ ಎಂದು ಬಿಜೆಪಿ ಮುಖಮಡರಿಗೆ ಟಾಂಗ್ ನೀಡಿದರು. ಸಧ್ಯ ಆಪತ್ತಿನಲ್ಲಿರುವ ದೇಶವನ್ನು ರಕ್ಷಿಸಲು 2019ರ ಲೋಕ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲು ಎಲ್ಲ ವಿರೋಧ ಪಕ್ಷಗಳು ಒಂದಾಗಬೇಕು ಎಂದು ಕರೆ ನೀಡಿದರು.

Tags

Related Articles

Leave a Reply

Your email address will not be published. Required fields are marked *

Language
Close