About Us Advertise with us Be a Reporter E-Paper

Breaking Newsದೇಶಪ್ರಚಲಿತ

ಕಣಿವೆ ರಾಜ್ಯದಲ್ಲಿ ಶೀತಲ ಮಾರುತ: ಉಷ್ಣಾಂಶ 8 ಡಿಗ್ರಿ

ಶ್ರೀನಗರ: ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಶೀತ ಮಾರುತದ ಪ್ರಭಾವಕ್ಕೆ ಒಳಗಾಗಿದ್ದು ಗುರುವಾರ ಲಡಾಕ್ ರಾಜ್ಯದ ಅತ್ಯಂತ ಶೀತಲ ಪ್ರದೇಶವಾಗಿ ಗಮನ ಸೆಳಿದಿದೆ. ಲೆಹ್‌ನಲ್ಲಿ -8.6 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ.

ನೀರು ಹೆಪ್ಪುಗಟ್ಟುವ ಉಷ್ಣಾಂಶಕ್ಕಿಂತಲೂ ಕಡಿಮೆ ಉಷ್ಣತೆಯಿಂದ ಕಾಶ್ಮೀರ ಕಣಿವೆ ಪ್ರದೇಶ ಜಡವಾಗಿದೆ. ಶ್ರೀನಗರದಲ್ಲಿ -2.6 ಡಿಗ್ರಿ ಸೆಲ್ಸಿಯಸ್, ಪಹಲ್‌ಗಾಮ್‌ನಲ್ಲಿ-4ಡಿಗ್ರಿ ಹಾಗೂ ಗುಲ್ಮರ್ಗ್‌ನಲ್ಲಿ -4.6ಡಿಗ್ರಿ ಸೆಲ್ಸಿಯಸ್ ಉಷ್ಣಾಂಶವಿದ್ದು, ಶೀತ ಮಾರುತ ಮುಂದುವರಿಯಲಿದ್ದು. ಕಾಶ್ಮೀರದ ಎತ್ತರ ಪ್ರದೇಶದಲ್ಲಿ ಡಿ.9ಮತ್ತು10 ರಂದು ಸಾಧಾರಣ ಹಿಮ ಮಳೆಯಾಗುವ ಸಾಧ್ಯತೆಯಿದೆ.

ಮುಂದಿನ 24ಗಂಟೆಗಳವರೆಗೂ ಮೋಡ ಮುಸುಕಿದ ವಾತಾವರಣವಿರಲಿದೆ ಹಾಗೂ ಶೀಲದ ಪ್ರಮಾಣ ಹೆಚ್ಚಲಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿರುವುದಾಗಿ ಅನೇಕ ಭಾಗಗಳಲ್ಲಿ ವಿದ್ಯತ್ ಸಂಪರ್ಕದಲ್ಲಿ ವ್ಯತ್ಯಯ ಉಂಟಾಗಿದೆ.

ಇಲ್ಲಿನ ಸರಕಾರಿ ಮತ್ತು ಖಾಸಗಿ ಶಾಲೆಗಳು ಗುರುವಾರದಿಂದಲೇ ಮುಚ್ಚಿವೆ. ಕಾಶ್ಮೀರದ ಶಾಲಾ ಶಿಕ್ಷಣ ನಿರ್ದೇಶನಾಯದ ಪ್ರಕಾರ, ಎಂಟನೇ ತರಗತಿ ವಿದ್ಯಾಾರ್ಥಿಗಳಿಗೆ ಡಿ.6ರಿಂದ ಮಾರ್ಚ್ 2ರ ವರೆಗೂ ಚಳಿಗಾಲದ ರಜೆ ನೀಡಲಾಗಿದೆ ಹಾಗೂ ಹೈಸ್ಕೂಲ್ ವಿದ್ಯಾರ್ಥಿಗಳಿಗೆ ಡಿ.17ರಿಂದ ಫೇ.23ರ ವರೆಗೂ ರಜೆ ಇರಲಿದೆ.

ಬಟೊಟೆಯಲ್ಲಿ 2.7 ಡಿಗ್ರಿ ಸೆಲ್ಸಿಯಸ್, ಬಿನ್ನಿಹಾನ್‌ನಲ್ಲಿ 0.2 ಡಿಗ್ರಿ ಸೆಲ್ಸಿಯಸ್ ಹಾಗೂ ಜಮ್ಮು ನಗರದಲ್ಲಿ 8.8ಡಿಗ್ರಿ ಸೆಲ್ಸಿಯಸ್ ಉಷ್ಣಾಂಶವಿದ್ದು, ಈಗಾಗಲೇ ಜನರು ಚಳಿಗಾಲದ ಶೀತದಿಂದ ರಕ್ಷಣೆಗಾಗಿ ಉಣ್ಣೆ ಬಟ್ಟೆಗಳನ್ನು ಸಿದ್ಧಪಡಿಸಿಕೊಳ್ಳುತ್ತಿದ್ದಾರೆ.

Tags

Related Articles

Leave a Reply

Your email address will not be published. Required fields are marked *

Language
Close