Breaking Newsದೇಶಪ್ರಚಲಿತ
ಹೆಸರು ಬದಲಾವಣೆಯಲ್ಲಿ ಯೋಗಿ ಬ್ಯುಸಿ

ಮುಂಬೈ: ಬುಲಂದ್ಶಹರ್ನಲ್ಲಿ ನಡೆದ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರ ವಿರುದ್ಧ ಟೀಕೆ ಮಾಡಿರುವ ಶಿವಸೇನೆ, ‘ಯೋಗಿ ಆದಿತ್ಯನಾಥ ಅವರು ನಗರಗಳ ಹೆಸರು ಬದಲಾವಣೆಯಲ್ಲಿ ನಿರತರಾಗಿದ್ದಾರೆ’ ಎಂದು ಕಿಡಿ ಕಾರಿದೆ.
ಪಕ್ಷದ ಪತ್ರಿಕೆಯಾಗಿರುವ ಸಾಮನದಲ್ಲಿ ಈ ವಿಚಾರವಾಗಿ ಬರೆಯಲಾಗಿದ್ದು, ‘ದೇಶದ ಯೋಧರು ಹಾಗೂ ಪೊಲೀಸರಿಗೆ ಯಾವುದೇ ಧರ್ಮವಿರುವುದಿಲ್ಲ. ಅದೇರೀತಿ ಅಧಿಕಾರದಲ್ಲಿರುವವರು ಕೂಡ ಧರ್ಮದ ತಾರತಮ್ಯ ಮಾಡದೇ ತಮ್ಮ ಜವಾಬ್ದಾರಿಗಳನ್ನು ಪೂರ್ಣಗೊಳಿಸುವತ್ತ ಗಮನ ಹರಿಸಬೇಕು’ ಎಂದು ತಿಳಿಸಿದೆ.
ಯೋಗಿ ಅವರ ಆಡಳಿತ ಅವಧಿಯಲ್ಲಿ ಹಿಂಸಾಚಾರಗಳು ನಡೆಯುತ್ತಿವೆ. ಗೋ ಮಾಂಸಕ್ಕೆ ಸಂಬಂಧಿಸಿದ ಗಲಭೆಯಲ್ಲಿ ಪೊಲೀಸ್ ಅಧಿಕಾರಿಯ ಬಲಿಯಾಗಿದೆ. ಯೋಧರು ಹಾಗೂ ಪೊಲೀಸರಿಗೆ ಯಾವುದೇ ಧರ್ಮದ ಅಂತರ ಇಪುವುದಿಲ್ಲ ಎಂದು ತಿಳಿಸಿದೆ.
ಹೈದರಾಬಾದ್ ಭಾಗ್ಯನಗರವಾಗಿ ಬದಲಾಗುವುದು ಯಾವಾಗ ಎಂದು ಹಾಕಿರುವ ಪ್ರಶ್ನೆಗೆ ಟೀಕೆ ಮಾಡಿರುವ ಶಿವಸೇನೆ, ‘ಯೋಗಿ ತಮ್ಮ ರಾಜ್ಯದ ವಿಚಾರಗಳ ಬಗ್ಗೆೆ ತಲೆ ಕೆಡಿಸಿಕೊಳ್ಳದೇ ಬೇರೆ ರಾಜ್ಯಗಳ ವಿಚಾರಕ್ಕೆ ಮೂಗು ತೂರಿಸುತ್ತಿದ್ದಾರೆ. ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ರಾಮ ಮಂದಿರ ಯಾವಾಗ ನಿರ್ಮಾಣವಾಗುತ್ತದೆ ಎಂಬುದರ ಬಗ್ಗೆ ಯೋಗಿ ಅವರು ಮೊದಲು ಉತ್ತರಿಸಲಿ’ ಎಂದು ಕುಟುಕಿದೆ.
.