About Us Advertise with us Be a Reporter E-Paper

Breaking Newsದೇಶಪ್ರಚಲಿತ

ದಲಿತರಿಗಾಗಿ ಪತ್ರಿಕೋದ್ಯಮ ಕಾಲೇಜು

ದೆಹಲಿ: ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ ದಲಿತ ಮತ್ತು ಬುಡಕಟ್ಟು ಯುವಕರಿಗಾಗಿ ಇದೇ ಮೊದಲ ಬಾರಿಗೆ ಪತ್ರಿಕೋದ್ಯಮ ಶಾಲೆಯನ್ನು ಆರಂಭಿಸಿದೆ. ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ಥಾವರ್‌ಚಂದ್ ಗೆಹ್ಲೋಟ್ ಗುರುವಾರ ದಲಿತ ಮತ್ತು ಬುಡಕಟ್ಟು ವಿದ್ಯಾರ್ಥಿಗಳಿಗೆ ತರಬೇತಿ ನೀಡುವ ಪತ್ರಿಕೋದ್ಯಮ ಶಾಲೆಗೆ ಚಾಲನೆ ನೀಡಿದರು.

ಈ ಶಾಲೆಗೆ ಡಾ. ಬಿ. ಆರ್. ಅಂಬೇಡ್ಕರ್ ಅವರ ಹೆಸರನ್ನಿಡಲಾಗಿದ್ದು, ಪುಣೆ, ಅಸ್ಸಾಂ, ಅರುಣಾಚಲ ಪ್ರದೇಶ, ಉತ್ತರಾಖಂಡ ಮತ್ತು ಇತರ ರಾಜ್ಯಗಳಲ್ಲಿ ಕಾಲೇಜುಗಳು ಆರಂಭವಾಗಲಿವೆ.

ಅನೇಕ ಪ್ರಮುಖ ಪತ್ರಕರ್ತರು, ಸಂಪಾದಕರು, ದಲಿತ ಮತ್ತು ಬುಡಕಟ್ಟು ಹೋರಾಟಗಾರರು ಸರಕಾರದ ಈ ನಿರ್ಧಾರವನ್ನು ಸ್ವಾಗತಿಸಿದ್ದಾರೆ. ದಲಿತ ಹೋರಾಟಗಾರ ರಾಜ್ಯಸಭಾ ಸದಸ್ಯ ಅಮರ್ ಸಬ್ಲೆ ಈ ಕಾಲೇಜುಗಳ ಸಮನ್ವಾಧಿಕಾರಿಯಾಗಿ ನೇಮಕಗೊಂಡಿದ್ದಾರೆ.

ಡಾ. ಬೀಮರಾವ್ ರಾಮ್‌ಜೀ ಅಂಬೇಡ್ಕರ್ ಸ್ಕೂಲ್ ಆಫ್ ಮೀಡಿಯಾ ಎಂಪವರ್‌ಮೆಂಟ್(ಅಸ್ಮೀ) ವೆಬ್‌ಸೈಟ್‌ನಲ್ಲಿ ಸಮಾಜದಲ್ಲಿ ಸಮಾನತೆಯನ್ನು ಹುಟ್ಟು ಹಾಕಲು ಮಾಧ್ಯಮವನ್ನು ಬಳಸಿಕೊಳ್ಳಲಾಗುತ್ತಿದೆ. ಈ ಯೋಜನೆ ಅಂಬೇಡ್ಕರ್ ಮತ್ತು ದೀನ್‌ದಯಾಳ್ ಉಪಾಧ್ಯಾಯರ ಸಾಧನೆಗಳಿಂದ ಪ್ರೇರಿತಗೊಂಡಿದೆ ಎಂದು ಹೇಳಲಾಗಿದೆ.

ಪತ್ರಿಕೋದ್ಯಮ, ಮಾಸ್ ಕಮ್ಯೂನಿಕೇಶನ್, ಕೃತಕ ಬುದ್ದಿಮತ್ತೆ, ಸೈಬರ್ ಭದ್ರತೆ ಸೇರಿದಂತೆ ಎಲ್ಲ ರೀತಿಯ ತರಬೇತಿ ನೀಡಲಾಗುತ್ತದೆ. ಮಾಧ್ಯಮ ಕ್ಷೇತ್ರದಲ್ಲಿ ದಲಿತ ಮತ್ತು ಬುಡಕಟ್ಟು ಯುವಕರ ಪ್ರಾತಿನಿಧ್ಯದ ಕೊರತೆಯಿದ್ದು, ಅವರನ್ನು ಪ್ರೋತ್ಸಾಹಿಸಲು ಈ ಕಾಲೇಜುಗಳನ್ನು ಆರಂಭಿಸಲಾಗಿದೆ.

Tags

Related Articles

Leave a Reply

Your email address will not be published. Required fields are marked *

Language
Close