About Us Advertise with us Be a Reporter E-Paper

Breaking Newsದೇಶಪ್ರಚಲಿತ

ಲಾಟರಿ ಖರೀದಿಗೆ ನಾಣ್ಯಗಳನ್ನು ಲಪಟಾಯಿಸಿದ ವ್ಯವಸ್ಥಾಪಕ ಸಿಬ್ಬಂದಿ

ಮಿಡ್ನಾಪುರ: ಲಾಟರಿ ಟಿಕೆಟ್ ಖರೀದಿಸುವ ಚಟ್‌ಕ್ಕೆ ಎಸ್‌ಬಿಐನ ಬ್ಯಾಂಕ್ ಹಿರಿಯ ಸಹಾಯಕ ವ್ಯವಸ್ಥಾಪಕ, ಬ್ಯಾಂಕ್ ಖಜಾನೆಯಿಂದ ಸುಮಾರು 84 ಲಕ್ಷ ರುಪಾಯಿ ನಾಣ್ಯಗಳನ್ನು ಲಪಟಾಯಿಸಿ ಪೊಲೀಸ್‌ರ ಅತಿಥಿಯಾಗಿದ್ದಾರೆ.

ಪಶ್ಚಿಮ ಬಂಗಾಳದ ಪೂರ್ವ ಬರ್ದ್ವಾನ್ ಜಿಲ್ಲೆಯ ಮೆಮರಿಯ ಎಸ್‌ಬಿಐ ಶಾಖೆಯ ವ್ಯವಸ್ಥಾಪಕ ತಾರಕ್ ಜೈಸ್ವಾಲ್‌‌ಗೆ (35) ಲಾಟರಿ ವ್ಯಸನ. ಇಂದಲ್ಲಾ ನಾಳೆ ಲಕ್ಷ ಲಕ್ಷ ರುಪಾಯಿ ಅದೃಷ್ಟ ಬರುತ್ತದೆ ಎಂಬ ಕುರುಡು ನಂಬಿಕೆ. ಹೀಗಾಗಿ ಜೈಸ್ವಾಲ್ ತಮ್ಮ ಹಣದ ಜತೆಗೆ ಬ್ಯಾಂಕ್‌ನ ಹಣವನ್ನೂ ಲಾಟರಿ ಖರೀದಿಗೆ ಬಳಸುತ್ತಿದ್ದರು.

ಅಚ್ಚರಿಯ ವಿಷಯವೆಂದರೆ ಅವರು ಕಳವು ಮಾಡಿರುವುದು ಯಾರಿಗೂ ಅನುಮಾನ ಬಾರದಿರಲಿ ಎಂದು ಬರಿ ನಾಣ್ಯಗಳನ್ನು ದೊಚುತ್ತಿದ್ದರು. ಖಜಾನೆ ಕೀಲಿಕೈ ಅವರ ಬಳಿ ಇರುತ್ತಿದ್ದ ಕಾರಣ ಪ್ರತಿದಿನ ಮನೆಗೆ ಹೋಗುವಾಗ ನಾಣ್ಯಗಳನ್ನು ಕಳವು ಮಾಡುತ್ತಿದ್ದರು. ಸುಮಾರು 17 ತಿಂಗಳು ಈ ರೀತಿ ದೊಚಿದ ಮೊತ್ತ 84 ಲಕ್ಷ ರು.!

ಪತ್ತೆಯಾಗಿದ್ದು ಹೇಗೆ? 

ಕಳೆದ ನ.27ರಂದು ಆಡಿಟಿಂಗ್ ಮಾಡಲಾಯಿತು. ಎಷ್ಟೆ ಲೆಕ್ಕಾಹಾಕಿದರೂ 84 ಲಕ್ಷ ಕೊರತೆ ಕಾಣುತ್ತಿತ್ತು. ಆಡಿಟಿಂಗ್ ನಡೆಯುವಾಗ ಮ್ಯಾನೇಜರ್ ಜೈಸ್ವಾಲ್ ಕಚೇರಿಗೆ ಗೈರಾಗುತ್ತಿದ್ದರು. ಇದರಿಂದ ಅನುಮಾನಗೊಂಡ ಎಸ್‌ಬಿಐ ಪ್ರಾದೇಶಿಕ ಕಚೇರಿಯ ಹಿರಿಯ ಅಧಿಕಾರಿಗಳು, ಕಡ್ಡಾಯವಾಗಿ ಹಾಜರಾಗುವಂತೆ ಜೈಸ್ವಾಲ್‌ಗೆ ಸೂಚಿಸಿದರು. ಸಿಕ್ಕಿ ಬೀಳುವ ಭಯದಲ್ಲಿದ್ದ ಜೈಸ್ವಾಲ್ ಬ್ಯಾಂಕ್‌ಗೆ ಬರಲಿಲ್ಲ. ಪತ್ನಿ ಮೂಲಕ ತಿಜೊರಿ ಕೀಗಳನ್ನು ಕಳುಹಿಸಿದ್ದರು. ಅನುಮಾನ ಬಲಗೊಂಡ ಹಿನ್ನೆಲೆಯಲ್ಲಿ ಹಿರಿಯ ಅಧಿಕಾರಿಗಳು ಪೊಲೀಸರಿಗೆ ದೂರು ನೀಡಿದ್ದರು.

Tags

Related Articles

Leave a Reply

Your email address will not be published. Required fields are marked *

Language
Close