About Us Advertise with us Be a Reporter E-Paper

Breaking Newsಪ್ರಚಲಿತರಾಜ್ಯ
Trending

ಸಿದ್ದು ಅವಧಿಯಲ್ಲಿ 35000 ಕೋಟಿ ರೂಪಾಯಿ ಭ್ರಷ್ಟಚಾರ…?!

ರಾಜ್ಯ ಬಿಜೆಪಿ ನಾಯಕರ ಗಂಭೀರ ಆರೋಪ

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧಿಕಾರಾವಧಿಯಲ್ಲಿ 35000 ಕೋಟಿ ರೂಪಾಯಿ ಭ್ರಷ್ಟಚಾರ ನಡೆದಿದೆ ಎಂದು ಬಿಜೆಪಿ ಆರೋಪಿಸಿದೆ. ಈ ಕುರಿತು ನಿಯಂತ್ರಕರು ಮತ್ತು ಮಹಾ ಲೇಖಪಾಲರ (ಸಿಎಜಿ) ವರದಿಯಲ್ಲಿ ಕಾಂಗ್ರೆಸ್ ಭ್ರಷ್ಟಾಚಾರದ ಬಗ್ಗೆ ಸಾಕಷ್ಟು ಮಾಹಿತಿ ಬಹಿರಂಗವಾಗಿದೆ.

ವಿಧಾನಸೌಧದಲ್ಲಿ ಗುರುವಾರ ಸಿಎಜಿ ವರದಿ ಬಿಡುಗಡೆ ಮಾಡಿ ಮಾತನಾಡಿದ ಬಿಜೆಪಿ ಪ್ರಧಾನ ಕಾರ್ಯದರ್ಶಿ ರವಿ ಕುಮಾರ್, 2016-17 ರ ಸಿಎಜಿ ವರದಿಯಲ್ಲಿ 35 ಸಾವಿರ ಕೋಟಿ ರೂಪಾಯಿ ಲೆಕ್ಕ ಸಿಗುತ್ತಿಲ್ಲ. ಸರಕಾರದ ವಿವಿಧ ಇಲಾಖೆಗಳಲ್ಲಿ ಅಕ್ರಮ ನಡೆದಿದೆ. ಇಲಾಖೆಯ ರಶೀದಿ ಮತ್ತು ಖರ್ಚಿಗೆ ತಾಳೆ ಆಗುತ್ತಿಲ್ಲ. ಮಾಜಿ ಸಿಎಂ ಸಿದ್ದರಾಮಯ್ಯ ಅವಧಿಯಲ್ಲಿ 35 ಕೋಟಿ ರೂಪಾಯಿಗೆ ಲೆಕ್ಕವಿಲ್ಲ. ಹಿಂದಿನ ಸರಕಾರದಲ್ಲಿ ಉಳಿಕೆಯಾದ ಹಣದ ಬಗ್ಗೆಯೂ ದಾಖಲಿಸಿಲ್ಲ ಎಂದು ಆರೋಪಿಸಿದ್ದಾರೆ.

ಸಿದ್ದರಾಮಯ್ಯ ಸರಕಾರದಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಮಾಹಿತಿಯುಳ್ಳ 36 ಪುಟಗಳ ಕಿರುಹೊತ್ತಿಗೆ ಬಿಡುಗಡೆ ಮಾಡಿ, 788 ಕೆರೆಗಳಿಗೆ ಬಳಸಲು ಬಿಡುಗಡೆಯಾಗಿದ್ದ 1433.31 ಕೋಟಿ ರು. ಕಾಂಗ್ರೆಸ್ ಅವಧಿಯಲ್ಲಿ ಲೂಟಿಯಾಗಿದೆ. ಲ್ಯಾಪ್‌ಟಾಪ್ ಹಗರಣದಲ್ಲಿ 115 ಕೋಟಿ ರೂಪಾಯಿ ಅವ್ಯವಹಾರ ನಡೆದಿದೆ. 254 ಕೋಟಿ ರೂಪಾಯಿ ಬಳಕೆಗೆ ಯಾವುದೇ ಪ್ರಮಾಣ ಪತ್ರವೇ ಇಲ್ಲ ಅನುಮೋದನೆ ಇಲ್ಲದೇ ಹಲವು ಯೋಜನೆಗಳಿಗೆ ಸಾವಿರಾರು ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಲಾಗಿದೆ. 2016-2017 ಅವಧಿಯ ಬಜೆಟ್‌ನಲ್ಲಿ ವೆಚ್ಚ ಮತ್ತು ಸ್ವೀಕೃತಿಯಲ್ಲಿ ಲೆಕ್ಕ ತಾಳೆ ಆಗುತ್ತಿಲ್ಲ ಎಂದು ಬಿಜೆಪಿ ದೂರಿದೆ. ಇದಲ್ಲದೆ ಸುಳ್ಳು ಸೃಷ್ಟಿ ಮಾಡಿ ಹಣ ದೋಚಲಾಗಿದೆ. ಬಡ್ಡಿ ಹಣದಲ್ಲಿ ಅಧಿಕಾರಿಗಳು ಮೋಜು ಮಾಡಿದ್ದಾರೆ ಎಂದು ಆರೋಪಿಸಿದೆ.

ಸಿಎಜಿ ವರದಿಯಿಂದಲೇ 2ಜಿ ಸ್ಕ್ಯಾಮ್, ಆದರ್ಶ ಹಗರಣ, ಕಲ್ಲಿದ್ದಲು ಹಗರಣ ಹೊರ ಬಂದಿದ್ದು, ಈಗ 35 ಸಾವಿರ ಕೋಟಿ ಹಣಕ್ಕೆ ಲೆಕ್ಕ ಇಲ್ಲ. ಕೆರೆಗಳಿಗೆ ನೀರು ತುಂಬಲು 1433.41 ಕೋಟಿ ಖರ್ಚು ಮಾಡಿದ್ದಾರೆ. ಎಲ್ಲಿ ಕೆರೆಗಳು ತುಂಬಿವೆ. ಹಣ ಯಾರ ಜೇಬು ಸೇರಿದೆ ಎಂದು ಪ್ರಶ್ನಿಸಿದರು. 2016-17 ರ ಸಿಎಜಿ ಯಲ್ಲಿರುವ ಅಕ್ರಮದ ಚರ್ಚೆ ನಡೆಯಬೇಕು. ಅಧಿವೇಶನ ವೇಳೆ 2016-17 ರ ವೆಚ್ಚ ಮತ್ತು ಸ್ವೀಕೃತಿ ಬಗ್ಗೆ ಚರ್ಚೆ ನಡೆಯಬೇಕು. ಶಾಲಾ ಸಮವಸ್ತ್ರದಲ್ಲಿ ಹಗರಣ ನಡೆದಿದೆ ಎಂದು ಅವರು ದೂರಿದರು.

115 ಕೋಟಿ ಲ್ಯಾಪ್‌ಟಾಪ್ ಖರೀದಿಗೆ ಮೀಸಲಿಟ್ಟ ಹಣ 1 ವರ್ಷ ಬ್ಯಾಂಕ್‌ನಲ್ಲಿ ಇಡಲಾಗಿತ್ತು. 7378.34 ಕೋಟಿಯ ಕಾಮಗಾರಿಗೆ ಸಂಪುಟದ ಅನುಮೋದನೆ ಇಲ್ಲದೇ ಟೆಂಡರ್ ನೀಡಲಾಗಿತ್ತು. 254 ಕೋಟಿ ರು. ಬಳಕೆ ಪ್ರಮಾಣ ಪತ್ರ ಕೊಟ್ಟಿಲ್ಲ. ಕುಡಿಯುವ ನೀರಿಗೆ ಮೀಸಲಿಟ್ಟ 612 ಕೋಟಿ ಬಳಕೆಯಾಗಿಲ್ಲ. ಮೀಸಲಿಟ್ಟ ಹಣದ ಬಡ್ಡಿಯೂ ಖರ್ಚಿಲ್ಲ. ಖರ್ಚಾಗದೇ ಉಳಿದಿರುವ ಹಣದ ಲೆಕ್ಕ ಎಲ್ಲಿ. ಎಲ್ಲಿ ಹೋಗಿದೆ ಈ ಹಣ. ಯಾರ ಇಲಾಖೆಯಲ್ಲಿ ಈ ಹಣ ಇದೆ. ಏಕೆ ಸಿಎಂ ಕುಮಾರಸ್ವಾಮಿ ಈ ಮಾಹಿತಿ ಮುಚ್ಚಿಟ್ಟಿದ್ದಾರೆ. 11, 950 ಕೋಟಿ ರು. ಹಣ ಎಲ್ಲಿ ಹೋಗಿದೆ. ಈ ಬಗ್ಗೆ ಅಧಿವೇಶನದಲ್ಲಿ ಚರ್ಚೆ ನಡೆಯಬೇಕು ಎಂದು ಆಗ್ರಹಿಸಿದರು.

11 ಇಲಾಖೆಗಳಿಂದ 18.11 ಕೋಟಿ ದುರುಪಯೋಗ ಆಗಿದೆ ಎಂದು ಸಿಎಜಿ ವರದಿ ನೀಡಿದೆ. ಇಲಾಖೆಯ ಆಧುನೀಕರಣದಲ್ಲಿ 68.5 ಕೋಟಿ ರು. ಬಾಕಿ ಉಳಿಸಿಕೊಂಡಿದ್ದಾರೆ. ಪೊಲೀಸ್ ವ್ಯವಸ್ಥೆ ಆಧುನೀಕರಣಕ್ಕೆ ಕೇಂದ್ರ ಸರಕಾರ 290.98 ಕೋಟಿ ನೀಡಿದೆ. ಆದರೆ ಸಿದ್ದರಾಮಯ್ಯ ಸರಕಾರ ಪೊಲೀಸ್ ಇಲಾಖೆಗೆ 222.48 ಕೋಟಿ ಮಾತ್ರ ಬಿಡುಗಡೆ. ಬಾಕಿ 68.5 ಕೋಟಿ ರು. ಹಣ ಉಳಿಕೆಯಾಗಿದೆ ಎಂದು ಹೇಳಿದರು.

ಡಿಕೆಶಿ ಸಚಿವರಾಗಿದ್ದಾಗ ಸರಕಾರಕ್ಕೆ 1.17 ಕೋಟಿ ನಷ್ಟ: ಆಗಿನ ಇಂಧನ ಸಚಿವ ಡಿಕೆ ಶಿವಕುಮಾರ್ ಇಲಾಖೆಯಲ್ಲಿ ಕಾಮಗಾರಿ ಮೇಲ್ವಿಚಾರಣೆ ಕೊರತೆಯಿಂದ ಕೋಟಿ ನಷ್ಟವಾಗಿದೆ. ಈ ಕುರಿತು ಸಚಿವ ಡಿಕೆ ಶಿವಕುಮಾರ್ ರಾಜ್ಯದ ಜನರಿಗೆ ಉತ್ತರಿಸಬೇಕು. ಕಾವೇರಿ ನಿಗಮ ನಿಯಮಿತ ಸಂಸ್ಥೆ ಮೂಲಕ ಕುಡಿಯುವ ನೀರು ಕೆರೆ ಭರ್ತಿ ಮಾಡಲು 6,884.54 ಕೋಟಿ ಮೀಸಲು. ಆದರೆ ರಾಜ್ಯದ 788 ಕೆರೆಗಳಿಗೆ ನೀರನ್ನೇ ತುಂಬಿಲ್ಲ. ಹಾಗಾದರೆ ಖರ್ಚಾಗದೇ 1433.41 ಕೋಟಿ ಯಾರ ಜೇಬಿಗೆ ತುಂಬಿದೆ ಎಂದು ತಿಳಿಸಬೇಕು. ಸರಕಾರಕ್ಕೆ ಬರಬೇಕಿರೋ ಹಣವನ್ನು ಕೆಲ ಅಧಿಕಾರಿಗಳು ತಡೆದಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುವುದು ಹೀಗಾಗಿ ಬೆಳಗಾವಿ ಅಧಿವೇಶನದಲ್ಲಿ ಈ ಬಗ್ಗೆ ಚರ್ಚೆಗೆ ಅವಕಾಶ ನೀಡಬೇಕು ಎಂದರು.

ಇಲಾಖಾವಾರು ಅಕ್ರಮ ಆರೋಪದ ವಿವರ

ಜಲಸಂಪನ್ಮೂಲ -375.55 ಕೋಟಿ ರು.
ಲೋಕೋಪಯೋಗಿ -166.43 ಕೋಟಿ ರು.
ಶಿಕ್ಷಣ ಇಲಾಖೆ -54.35 ಕೋಟಿ ರು.
ನಗರಾಭಿವೃದ್ಧಿ -249.08 ಕೋಟಿ ರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ -31.73 ಕೋಟಿ ರು.

Tags

Related Articles

Leave a Reply

Your email address will not be published. Required fields are marked *

Language
Close