About Us Advertise with us Be a Reporter E-Paper

Breaking Newsದೇಶಪ್ರಚಲಿತ

ಚೆನ್ನೈನ 2 ರೂಪಾಯಿ ಡಾಕ್ಟರ್ ವಿಧಿವಶ

ಚೆನ್ನೈ: ತಮ್ಮ ಆಸ್ಪತ್ರೆಗೆ ಬರುವ ರೋಗಿಗಳ ಬಳಿ ಎರಡು ರೂಪಾಯಿ ಮಾತ್ರ ಶುಲ್ಕ ಪಡೆದು ಚಿಕಿತ್ಸೆ ನೀಡುತ್ತಿದ್ದ ಖ್ಯಾತ ವೈದ್ಯ ಎಸ್.ಜಯಚಂದ್ರನ್ ಅವರು ಅನಾರೋಗ್ಯದಿಂದ ಮೃತಪಟ್ಟಿದ್ದಾರೆ.

ಬುಧವಾರ ಬೆಳಗ್ಗೆ 5.15ರ ಸುಮಾರಿಗೆ ಗ್ರೀಮ್ಸ್ ರೋಡ್ ರಸ್ತೆಯಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ಜಯಚಂದ್ರನ್ ಅವರು ವಿಧಿವಶರಾಗಿದ್ದಾರೆ ಎಂದು ಅವರ ಮೊದಲ ಮಗ ಡಾ. ಜ ಶರವಣ್ ಜಗನ್ ತಿಳಿಸಿದ್ದಾರೆ. ಜಯಚಂದ್ರನ್ ಅವರು ಮೃತಪಟ್ಟಿದ್ದಾ ರೆ ಎಂದು ತಿಳಿಯುತ್ತಿದ್ದಂತೆ ಅವರನ್ನು ನೋಡಲು ಸಾವಿರಾರು ಸಂಖ್ಯೆಯಲ್ಲಿ ಜನರು ಅಂತಿಮ ದರ್ಶನ ಪಡೆದು ಕಣ್ಣೀರು ಹಾಕಿದರು.

ಮದ್ರಾಸ್ ಮೆಡಿಕಲ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮುಗಿಸಿದ್ದ ಜಯಚಂದ್ರನ್ ಅವರು 1970ರಲ್ಲಿ ಚೆನ್ನೈನಲ್ಲಿ ಪ್ರಾಕ್ಟಿಸ್ ಶುರು ಮಾಡಿದ್ದರು. ಮೊದಲಿಗೆ ಜಯಚಂದ್ರನ್ ಅವರು 25 ಪೈಸೆ ಮಾತ್ರ ರೋಗಿಗಳ ಹತ್ತಿರ ಪಡೆಯುತ್ತಿದ್ದರು.

 

 

Tags

Related Articles

Leave a Reply

Your email address will not be published. Required fields are marked *

Language
Close