About Us Advertise with us Be a Reporter E-Paper

Breaking Newsದೇಶಪ್ರಚಲಿತ

ವಿವಿಧ ದೇಶಗಳ ಜೈಲಿನಲ್ಲಿ 8,445 ಭಾರತೀಯರು ಸೆರೆವಾಸ ಅನುಭವಿಸುತ್ತಿದ್ದಾರೆ

ದೆಹಲಿ: ಜಗತ್ತಿನ 68 ದೇಶಗಳಲ್ಲಿ 8,445 ಭಾರತೀಯರು ಸೆರೆವಾಸ ಅನುಭವಿಸುತ್ತಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಜ.ವಿ.ಕೆ.ಸಿಂಗ್ ಲೋಕಸಭೆಗೆ ತಿಳಿಸಿದ್ದಾರೆ.

ಮುಂಬೈ ಮೂಲದ ಸಾಫ್ಟ್‌‌ವೇರ್ ಇಂಜಿನಿಯರ್ ಹಮೀದ್ ನಿಹಾಲ್ ಅನ್ಸಾರಿ ಗೂಢಚರ್ಯೆ ನಡೆಸುತ್ತಿದ್ದಾರೆಂಬ ಆರೋಪದ ಮೇಲೆ ಪಾಕಿಸ್ತಾನ 6 ವರ್ಷಗಳ ಹಿಂದೆ ಅವರನ್ನು ಬಂಧಿಸಿತ್ತು. ಐದು ವರ್ಷಗಳ ಶಿಕ್ಷೆೆ ಅನುಭವಿಸಿದ ನಂತರ ಅನ್ಸಾರಿ, ಮಂಗಳವಾರ ಬಿಡುಗಡೆಯಾಗಿ ಬುಧವಾರ ಭಾರತಕ್ಕೆ ಮರಳಿದ್ದರು.

ಈ ಹಿನ್ನಲೆಯಲ್ಲಿ ಗುರುವಾರ ಲೋಕಸಭೆಯಲ್ಲಿ ವಿವರಣೆ ನೀಡಿರುವ ಸಚಿವರು, 68 ದೇಶಗಳಲ್ಲಿ 8,445 ಭಾರತೀಯರು ಸೆರೆವಾಸ ಅನುಭವಿಸುತ್ತಿದ್ದಾರೆ. 40 ಭಾರತೀಯರು ಜೈಲುಶಿಕ್ಷೆೆ ಅವಧಿಯಲ್ಲಿಯೇ ಮೃತಪಟ್ಟಿದ್ದಾರೆಂದು ತಿಳಿಸಿದರು.

Tags

Related Articles

Leave a Reply

Your email address will not be published. Required fields are marked *

Language
Close