About Us Advertise with us Be a Reporter E-Paper

Breaking Newsದೇಶಪ್ರಚಲಿತ

ರಾಹುಲ್ ಭಾರತದ ಪ್ರಧಾನಿಯಾಗುವುದು ಅಸಾಧ್ಯ: ಸುಬ್ರಮಣಿಯನ್ ಸ್ವಾಮಿ

ಹೈದರಾಬಾದ್: ರಾಹುಲ್ ಗಾಂಧಿ ಒಬ್ಬ ಬ್ರಿಟಿಷ್ ಪ್ರಜೆ. ಅವರು ಭಾರತದ ಪ್ರಧಾನಿಯಾಗುವುದು ಅಸಾಧ್ಯ. ಅವರ ಭಾರತದ ಪೌರತ್ವ ಕೂಡ ರದ್ದಾಗಲಿದೆ. ಅವರು ಸಂಸದ ಕೂಡ ಆಗಲು ಸಾಧ್ಯವಿಲ್ಲ ಎಂದು ರಾಜ್ಯಸಭೆ ಸದಸ್ಯ ಸುಬ್ರಮಣಿಯನ್ ಸ್ವಾಮಿ ಆರೋಪಿಸಿದ್ದಾರೆ.

ಹೈದರಾಬಾದ್ ಇಂಡಿಯನ್ ಸ್ಕೂಲ್ ಆಫ್ ಬ್ಯುಸಿನೆಸ್‌ನಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸುಬ್ರಮಣಿಯನ್ ಸ್ವಾಮಿ 2019 ರ ಲೋಕಸಭೆ ಚುನಾವಣೆ ಕುರಿತು ಮಾತನಾಡುತ್ತಾ ರಾಹುಲ್ ಗಾಂಧಿ ಭಾರತದ ಪ್ರಜೆಯಲ್ಲ. ಬ್ರಿಟನ್‌ನ ಕಂಪನಿಯೊಂದರ ನಿರ್ದೇಶಕ ಹುದ್ದೆಗಾಗಿ ರಾಹುಲ್ ಬ್ರಿಟಿಷ್ ನಾಗರಿಕ ಎಂದು ಘೋಷಿಸಿಕೊಂಡಿದ್ದಾರೆ ಎಂದು ಸುಬ್ರಮಣಿಯನ್ ಸ್ವಾಮಿ ಕೆಂಡಕಾರಿದರು.

ಹಾಗೆಯೇ ಪ್ರಧಾನಿ ನರೇಂದ್ರ ಮೋದಿ ಸರಕಾರದ ವಿರುದ್ಧ ರಾಷ್ಟ್ರದಲ್ಲಿ ಆಡಳಿತ ವಿರೋಧಿ ಅಲೆಯಿಲ್ಲ. ಮತ್ತೆ ಕೇಸರಿ ಪಕ್ಷ ಅಧಿಕಾರಕ್ಕೆ ಬರಲಿದೆ ಎಂದು ರಾಜ್ಯಸಭೆ ಸದಸ್ಯ ಸುಬ್ರಮಣಿಯನ್ ಸ್ವಾಮಿ ವಿಶ್ವಾಸ ವ್ಯಕ್ತ ಪಡಿಸಿದ್ದಾರೆ.

ರಾಮ ಮಂದಿರ ನಿರ್ಮಾಣ ವಿಚಾರಕ್ಕೆ ಸಂಬಂಧಿಸಿ ಮಾತನಾಡಿದ ಸುಬ್ರಮಣಿಯನ್ ಸ್ವಾಮಿ, ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗಬೇಕು ಎಂಬ ಆಶಯ ರಾಷ್ಟ್ರಾದ್ಯಂತ ಇದೆ. ತಮಿಳು ನಾಡಿನ ಜನತೆಯೂ ಅಯೋಧ್ಯೆಯಲ್ಲಿ ರಾಮ ಮಂದಿರ ಕಟ್ಟಬೇಕು ಎಂದು ಬಯಸುತ್ತಾರೆ. ನಾವು ನಿರ್ಮಿಸುತ್ತೇವೆ ಎಂಬ ಆಶ್ವಾಸನೆ ನೀಡಿದರು.

Tags

Related Articles

Leave a Reply

Your email address will not be published. Required fields are marked *

Language
Close