About Us Advertise with us Be a Reporter E-Paper

Breaking Newsದೇಶಪ್ರಚಲಿತ

ರಫೇಲ್ ಪ್ರಕರಣದಿಂದ ಮೋದಿಯನ್ನು ರಕ್ಷಿಸಲು ಸಾಧ್ಯವಿಲ್ಲ: ರಾಹುಲ್‌‌ ಗಾಂಧಿ

ದೆಹಲಿ: ರಫೇಲ್ ಯುದ್ಧ ವಿಮಾನ ಖರೀದಿ ಒಪ್ಪಂದದ ತನಿಖೆಯಿಂದ ಪ್ರಧಾನಿ ನರೇಂದ್ರ ಮೋದಿ ಅವರನ್ನು ರಕ್ಷಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.

ಈ ಪ್ರಕರಣದಲ್ಲಿ ಮೋದಿ ಅವರು ದೇಶದ ಜನರಿಗೆ ಸೇರಿದ 30,000 ಕೋಟಿ ರು.ಗಳನ್ನು ತೆಗೆದು ತಮ್ಮ ಸ್ನೇಹಿತ ಅನಿಲ್ ಅಂಬಾನಿಗೆ ನೀಡಿದ್ದಾರೆ ಎಂಬ ತಮ್ಮ ಆರೋಪವನ್ನು ರಾಹುಲ್ ಪುನರುಚ್ಚರಿಸಿದ್ದಾರೆ.

ಸಂಸತ್‌ಭವನದ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರಫೇಲ್ ಹಗರಣದಲ್ಲಿ ತನಿಖೆ ಆರಂಭಿಸುತ್ತಾರೆ ಎಂಬ ಭಯದಿಂದ ಸಿಬಿಐ ನಿರ್ದೇಶಕರನ್ನು ಮಧ್ಯರಾತ್ರಿ 1 ಗಂಟೆಯಲ್ಲಿ ರಜೆಯ ಮೇಲೆ ಕಳುಹಿಸಲಾಗಿದೆ. ಆದರೂ ಪ್ರಧಾನಿ ಮೋದಿ ಮತ್ತು ಅವರ ಸರಕಾರ ಈ ಒಪ್ಪಂದದಲ್ಲಿ ಓಡಿಹೋಗಲು ಸಾಧ್ಯವಿಲ್ಲ ಎಂದರು.

ರಫೇಲ್ ಒಪ್ಪಂದ ಕುರಿತು ತನಿಖೆ ಆರಂಭಿಸಲಿದ್ದಾರೆ ಎಂಬ ಕಾರಣದಿಂದ ಸಿಬಿಐ ಮುಖ್ಯಸ್ಥರನ್ನು ಮಧ್ಯರಾತ್ರಿ 1ಗಂಟೆಗೆ ತೆಗೆದು ಹಾಕಲಾಯಿತು ಇದೀಗ ಮತ್ತೆ ಅವರನ್ನು ಮುಂದುವರಿಸಲಾಗಿದ್ದು, ನಮಗೆ ನೆಮ್ಮದಿ ದೊರೆತಂತಾಗಿದೆ. ಮುಂದೆ ಏನಾಗಲಿದೆ ಎಂದು ನೋಡೋಣ ಎಂದು ರಾಹುಲ್ ಹೇಳಿದರು.

ಕಳೆದ ವರ್ಷ ಅ.23ರಂದು ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ಅವರನ್ನು ಅಧಿಕಾರದಿಂದ ದೂರವಿಟ್ಟಿದ್ದ ಕೇಂದ್ರ ಸರಕಾರದ ನಿರ್ಧಾರವನ್ನು ಸುಪ್ರೀಂ ಕೋರ್ಟ್ ಮಂಗಳವಾರ ರದ್ದುಗೊಳಿಸಿದೆ.

Tags

Related Articles

Leave a Reply

Your email address will not be published. Required fields are marked *

Language
Close