About Us Advertise with us Be a Reporter E-Paper

Breaking Newsದೇಶಪ್ರಚಲಿತ

ದೆಹಲಿಯಲ್ಲಿ ಪ್ರತಿದಿನ 5 ಮಹಿಳೆಯರು ಅತ್ಯಾಚಾರಕ್ಕೊಳಗಾಗುತ್ತಿದ್ದಾರೆ…!

ದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ದಿನವೊಂದಕ್ಕೆ ಕನಿಷ್ಠ 5ಮಹಿಳೆಯರು ಅತ್ಯಾಚಾರಕ್ಕೊಳಗಾಗುತ್ತಿದ್ದಾರೆ ಎಂಬ ಕಳವಳಕಾರಿ ವಿಚಾರ ಬುಧವಾರ ಪೊಲೀಸ್ ಇಲಾಖೆ ಬಿಡುಗಡೆಗೊಳಿಸಿರುವ ಅಂಕಿ ಅಂಶಗಳಿಂದ ತಿಳಿದು ಬಂದಿದೆ.

ವಿಶೇಷವೆಂದರೆ ಹೆಚ್ಚಿನ ಅತ್ಯಾಚಾರಗಳನ್ನು ಸ್ನೇಹಿತರು ಇಲ್ಲ ಸಂತ್ರಸ್ತೆಯ ಪರಿಚಯಸ್ಥರೇ ಮಾಡುತ್ತಿದ್ದಾರೆ ಎಂದು ವರದಿಯಾಗಿದೆ. ಕಳೆದ 2 ವರ್ಷಗಳಲ್ಲಿ ಈ ರೀತಿಯ ಅತ್ಯಾಚಾರ ಪ್ರಕರಣಗಳಲ್ಲಿ ಗಣನೀಯ ಏರಿಕೆ ಕಂಡು ಬಂದಿದೆ ಎಂದು ಅಂಕಿ ಅಂಶಗಳಿಂದ ತಿಳಿದು ಬಂದಿದೆ.

2017 ರಲ್ಲಿ 39 %(802)ಅತ್ಯಾಚಾರಗಳನ್ನು ಪರಿಚಯಸ್ಥರೇ ಮಾಡಿದ್ದು, 2018 ರಲ್ಲಿ 44%(888) ಪ್ರಕರಣಗಳು ದಾಖಲಾಗಿವೆ. ಈ ಪ್ರಕರಣಗಳಲ್ಲಿ ಆರೋಪಿ ಸಂತ್ರಸ್ತೆಯ ಸ್ನೇಹಿತ ಇಲ್ಲ ಗೆಳೆಯನಾಗಿದ್ದಾನೆ. ಈ ರೀತಿಯ ಪ್ರಕರಣಗಳಲ್ಲಿ ಎಫ್‌ಐಆರ್ ದಾಖಲಾದ ಬಳಿಕ 95% ಪ್ರಕರಣಗಳನ್ನು ಬಗೆಹರಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. 2018 ರಲ್ಲಿ 2,043 ಅತ್ಯಾಚಾರ ಪ್ರಕರಣಗಳು ದಾಖಲಾಗಿದ್ದು , 2017 ಕ್ಕೆ ತುಲನೆ ಮಾಡಿದರೆ 2,057 ರೇಪ್ ಕೇಸ್‌ಗಳು ದಾಖಲಾಗಿದ್ದವು.

Tags

Related Articles

Leave a Reply

Your email address will not be published. Required fields are marked *

Language
Close