About Us Advertise with us Be a Reporter E-Paper

Breaking Newsಪ್ರಚಲಿತರಾಜ್ಯ

ದೇವರಿಗೆ ಹಚ್ಚಿದ ದೀಪ ಉರುಳಿ ಮನೆಗೆ ಬೆಂಕಿ

ಹುಬ್ಬಳ್ಳಿ: ದೇವರ ಫೋಟೋ ಮುಂದೆ ಹಚ್ಚಿದ ದೀಪ ಉರುಳಿ ಬಿದ್ದು ಮನೆಗೆ ಬೆಂಕಿ ಹತ್ತಿಕೊಂಡ ಘಟನೆ ಈಶ್ವರ ನಗರದಲ್ಲಿ ನಡೆದಿದೆ.

ನಾಗರಾಜ್ ಎಂಬುವವರ ಮನೆಯಲ್ಲಿ ಈ ಘಟನೆ ಸಂಭವಿಸಿದೆ. ದೇವರ ಮುಂದೆ ದೀಪ ಹಚ್ಚಿ ಮನೆ ಮಂದಿ ಹೊರಗೆ ಹೋಗಿದ್ದರು. ಈ ವೇಳೆ ದೀಪ ಉರುಳಿ ಬಿದ್ದು, ಬೆಂಕಿ ಮನೆಯನ್ನು ಆವರಿಸಿಕೊಂಡಿದೆ. ಬೆಂಕಿಯಿಂದಾಗಿ ಮನೆಯಲ್ಲಿದ್ದ ಪರಿಕರಿಗಳು ಸುಟ್ಟು ಕರಕಲಾಗಿವೆ.

ಅಕ್ಕಪಕ್ಕದವ ಮನೆಯವರು ಬೆಂಕಿ ಹತ್ತಿಕೊಂಡಿದ್ದನ್ನು ಕಂಡು ಅಗ್ನಿಶಾಮಕ ದಳಕ್ಕೆ ಮಾಹಿತಿ ರವಾನಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಲ್ಲದೇ ಅಕ್ಕಪಕ್ಕದ ಮನೆಗೆ ಆಗಬಹುದಾಗಿದ್ದ ಅನುಹುತವನ್ನೂ ತಪ್ಪಿಸಿದ್ದಾರೆ.

Tags

Related Articles

Leave a Reply

Your email address will not be published. Required fields are marked *

Language
Close