About Us Advertise with us Be a Reporter E-Paper

Breaking Newsಪ್ರಚಲಿತರಾಜ್ಯ

ದೋಸ್ತಿ ಸರಕಾರಕ್ಕೆ ಯಾವುದೇ ರೀತಿಯ ಆತಂಕವಿಲ್ಲ: ಎಚ್.ಡಿ. ರೇವಣ್ಣ

ಹಾಸನ: ಸಂಕ್ರಾಂತಿಯ ನಂತರ ಸಮ್ಮಿಶ್ರ ಸರಕಾರ ಪತನವಾಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ. ಆದರೆ ದೋಸ್ತಿ ಸರಕಾರಕ್ಕೆ ಯಾವುದೇ ರೀತಿಯ ಆತಂಕವಿಲ್ಲ. ಅವರು ಮಾತನಾಡಿಕೊಳ್ಳಲಿ ಬಿಡಿ ಎಂದು ಲೋಕೋಪಯೋಗಿ ಸಚಿವ ಎಚ್.ಡಿ. ರೇವಣ್ಣ ಹೇಳಿದರು.

ಹಾಸನನದಲ್ಲಿ ಮಾತನಾಡಿದ ಅವರು, ಸರಕಾರ ಸುಭದ್ರವಾಗಿದೆ. ಈ ಬಗ್ಗೆ ತಲೆ ಕೆಡಿಸಿಕೊಳ್ಳುವುದು ಬೇಡ ಎಂದರು. ಇದೇ ವೇಳೆ ಮಾಜಿ ಸಚಿವ ಎ. ಮಂಜು ಎಚ್.ಡಿ. ರೇವಣ್ಣ ಅವರ ಕಾರ್ಯ ವೈಖರಿಯ ಬಗ್ಗೆ ಟೀಕಿಸಿ ಮಾತನಾಡಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಕಾಂಗ್ರೆಸ್ ಮುಖಂಡರು ಮಾಡುವ ಯಾವುದೇ ಆರೋಪಕ್ಕೂ ಉತ್ತರಿಸುವ ಅಗತ್ಯ ನನಗಿಲ್ಲ, ಟೀಕೆ ಟಿಪ್ಪಣೆಗಳಿಗೆ ಉತ್ತರಿಸುತ್ತಾ ಕುಳಿತರೆ ಪೊಳ್ಳು ಎನಿಸಿಕೊಳ್ಳಬೇಕಾಗುತ್ತದೆ.

ಮಾಜಿ ಸಚಿವ ಎ. ಮಂಜು ಅವರು ನನ್ನ ಮೇಲೆ ಇಲ್ಲಸಲ್ಲದ ಆರೋಪ ಮಾಡಿದ್ದಾರೆ. ಕೆಲವರು ಅವರ ಹೊಟ್ಟೆೆಪಾಡಿಗಾಗಿ ಮಾತನಾಡುವಾಗ ನಾನ್ಯಾಕೆ ಪ್ರತಿಕ್ರಿಯಿಸಲಿ, ಸಮಯ ವ್ಯರ್ಥ ಅಷ್ಟೇ ಎಂದರು. ವಿಧಾನ ಪರಿಷತ್‌ಗೆ ಸಚಿವರ ವಿಶೇಷಾಧಿಕಾರಿ ತಿಪ್ಪೇಸ್ವಾಮಿ ಹೆಸರು ಕಳಿಸಿದ್ದೇವೆ. ಆದರೆ ಈ ಕುರಿತು ದೇವೇಗೌಡರು ತೀರ್ಮಾನ ಮಾಡುತ್ತಾರೆ ಎಂದರು.

Tags

Related Articles

Leave a Reply

Your email address will not be published. Required fields are marked *

Language
Close