About Us Advertise with us Be a Reporter E-Paper

Breaking Newsಪ್ರಚಲಿತರಾಜ್ಯ

ವಾರ್ಡ್ ಮರುವಿಂಗಡಣೆ ವಿವಾದ: ತೀರ್ಪು ಕಾಯ್ದಿರಿಸಿದ ಹೈಕೋರ್ಟ್

ಬೆಂಗಳೂರು: ಸ್ಥಳೀಯ ಸಂಸ್ಥೆಗಳ ಕ್ಷೇತ್ರ ಪುರ್ನ ವಿಂಗಡಣೆ ಹಾಗೂ ಕ್ಷೇತ್ರ ಮೀಸಲು ನಿಗದಿಗೊಳಿಸಿ ಅಂತಿಮ ಅಧಿಸೂಚನೆ ಹೊರಡಿಸಿರುವ ಸರಕಾರದ ಕ್ರಮವನ್ನು ಪ್ರಶ್ನಿಸಿ ಸಲ್ಲಿಸಿದ್ದ 30ಕ್ಕೂ ಹೆಚ್ಚು ರಿಟ್ ಅರ್ಜಿಗಳ ವಿಚಾರಣೆ ಪೂರ್ಣಗೊಳಿಸಿರುವ ಹೈಕೋರ್ಟ್ ತೀರ್ಪು ಕಾಯ್ದಿರಿಸಿದೆ.

ಸ್ಥಳೀಯ ಸಂಸ್ಥೆಗಳ ಕ್ಷೇತ್ರ ಪುರ್ನ ವಿಂಗಡಣೆ ಹಾಗೂ ಮೀಸಲು ಕ್ರಮ ಪ್ರಶ್ನಿಸಿ ವಿವಿಧ ಪಟ್ಟಣ, ನಗರಗಳ ನಿವಾಸಿಗಳು ಸಲ್ಲಿಸಿದ್ದ ಅರ್ಜಿಗಳನ್ನು ನ್ಯಾ. ಎಸ್.ಸುನಿಲ್ ದತ್ ಯಾದವ್ ಅವರಿದ್ದ ಏಕಸದಸ್ಯ ಪೀಠ ಗುರುವಾರ ವಿಚಾರಣೆ ಪೂರೈಸಿದ್ದು, ಆದೇಶ ಕಾಯ್ದಿರಿಸಿರುವುದಾಗಿ ಪ್ರಕಟಿಸಿದೆ. ಇದೇ ವೇಳೆ ರಾಜ್ಯ ಚುನಾವಣಾ ಆಯೋಗದ ಪರ ವಕೀಲರು, ಆರು ಮಹಾನಗರ ಪಾಲಿಕೆಗಳೂ ಸೇರಿದಂತೆ 101 ನಗರ ಸ್ಥಳೀಯ ಸಂಸ್ಥೆೆಗಳ ಚುನಾವಣಾ ವೇಳಾಪಟ್ಟಿಯನ್ನು 2019ರ ಜನವರಿ 16ರವರೆಗೆ ಪ್ರಕಟಿಸುವುದಿಲ್ಲ ಎಂದು ಪೀಠಕ್ಕೆ ತಿಳಿಸಿದ್ದಾರೆ.

ರಾಜ್ಯದಾದ್ಯಂತ 26 ಜಿಲ್ಲೆಗಳಲ್ಲಿನ 2,593 ಸ್ಥಳೀಯ ಸಂಸ್ಥೆಯ ವಾರ್ಡುಗಳಿಗೆ 2019ರ ಮಾರ್ಚ್ನಲ್ಲಿ ಅಧಿಕಾರವಧಿ ಪೂರ್ಣಗೊಳ್ಳುತ್ತಿದ್ದು, ಆಯೋಗ ಚುನಾವಣೆ ನಡೆಸಬೇಕಾದ ಹೊಣೆ ಹೊತ್ತಿದೆ. ಈ ನಡುವೆ ಕ್ಷೇತ್ರ ಮರು ವಿಂಗಡಣೆ ಹಾಗೂ ಮೀಸಲು ನಿಗದಿಪಡಿಸುವಾಗ ಸರಕಾರ ಮಾರ್ಗಸೂಚಿಗಳನ್ನು ಅನುಸರಿಸಿಲ್ಲ. ಸಂವಿಧಾನದ ವಿಧಿ 243 (ಟಿ) ಮೀಸಲು ನಿಯಮಗಳನ್ನು ಸರಕಾರ ಪಾಲನೆ ಮಾಡಿಲ್ಲ ಎಂದು ಆಕ್ಷೇಪಿಸಿ ಅರ್ಜಿ ಸಲ್ಲಿಸಿದ್ದರು.

Tags

Related Articles

Leave a Reply

Your email address will not be published. Required fields are marked *

Language
Close