About Us Advertise with us Be a Reporter E-Paper

Breaking Newsದೇಶಪ್ರಚಲಿತ

ದೆಹಲಿಯಲ್ಲಿ ಕನಿಷ್ಠ ತಾಪಮಾನ: ಜನ ಜೀವನ ಅಸ್ತವ್ಯಸ್ತ

ದೆಹಲಿ: ದೇಶದ ರಾಜಧಾನಿಯಲ್ಲಿ ಶುಕ್ರವಾರ ಬೆಳಗ್ಗೆೆಯಿಂದಲೂ 5 ಡಿಗ್ರಿ ಸೆಲ್ಸಿಯಷ್ಟು ಕಡಿಮೆ ತಾಪಮಾನ ವರದಿಯಗಿರುವುದರಿಂದ ಜನ ಜೀವನ ಅಸ್ತವ್ಯಸ್ತಗೊಂಡಿದೆ ಎಂದು ಹವಮಾನ ಇಲಾಖೆ ವರದಿಯಲ್ಲಿ ತಿಳಿಸಿದೆ. ಇದು ಈ ವರ್ಷದ ಕನಿಷ್ಠ ತಾಪಮಾನ ಎಂದು ಗುರುತಿಸಲಾಗಿದೆ.

ವೀಪರಿತ ತಣ್ಣನೆ ಗಾಳಿ ಬೀಸುತ್ತಿರುವುದರಿಂದ ವಯಸ್ಸಾದವರು ಮತ್ತು ಮಕ್ಕಳು ಆದಷ್ಟು ಬೆಚ್ಚಗಿನ ಪ್ರದೇಶದಲ್ಲಿ ಇರಲು ಸೂಚಿಸಿದ್ದು, ಕಡಿಮೆ ಕೆಲಸ ಮತ್ತು ಹೆಚ್ಚಿನ ವಿಶ್ರಾಂತಿಯ ಅಗತ್ಯತೆ ದೆಹಲಿ ಜನಕ್ಕೀಗ ಅವಶ್ಯಕತೆ ಇದೆ ಎಂದು ಹವಮಾನ ಇಲಾಖೆ ಸೂಚನೆ ನೀಡಿದೆ.

ಅಸ್ತಮಾ ರೋಗಿಗಳು ಮುಂಜಾಗ್ರತಾ ಕ್ರಮವಾಗಿ ಔಷಧಗಳನ್ನು ತೆಗೆದುಕೊಳ್ಳಬೇಕು ಏಕೆಂದರೆ ಅತಿ ಕನಿಷ್ಠ ತಾಪಮಾನವಿರುವುದರಿಂದ ಹೃದಯ ಸಂಬಂಧಿ ರೋಗಿಗಳಿಗೂ ಹೆಚ್ಚಿನ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದೆ.

ಹರಿಯಾಣ, ನರ್‌ನಾವುಲ್ ಪ್ರದೇಶಗಳು 2.5 ರಷ್ಟು ಕನಿಷ್ಠ ತಾಪಮಾನವನ್ನು ಹೊಂದಿದ್ದು, ಅಂಬಾಲ, ಹಿಸಾರ್, ಕರ್ನಲ್, ರೋಟಕ್, ಬಿವಾನಿ ಮತ್ತು ಸಿರ್ಸಾ ಪ್ರದೇಶಗಳಲ್ಲಿ ಕಡಿಮೆ ತಾಪಮಾನ ಇನ್ನು ಮುಂದುವರಿದಿದೆ.

ಪಶ್ಚಿಮ ಘಟ್ಟಗಳಿಂದ ಬೀಸುತ್ತಿರುವ ಗಾಳಿಯಿಂದ ಉತ್ತರ ಭಾರತ ಪ್ರದೇಶಗಳು ಮತ್ತಷ್ಟು ಕನಿಷ್ಠ ತಾಪಮಾನ ಹೊಂದಿ ಜನಜೀವನ ಅಸ್ತವ್ಯಸ್ತಗೊಳ್ಳುತ್ತದೆ ಎಂದು ಹವಮಾನ ಇಲಾಖೆ ತಿಳಿಸಿದೆ.

Tags

Related Articles

Leave a Reply

Your email address will not be published. Required fields are marked *

Language
Close