About Us Advertise with us Be a Reporter E-Paper

Breaking Newsದೇಶಪ್ರಚಲಿತ

ಪ್ರತಿಪಕ್ಷಗಳು ಸಾಮ್ರಾಜ್ಯ ಕಟ್ಟುವಲ್ಲಿ ನಿರತವಾದರೆ ಬಿಜೆಪಿ ದೇಶದ ಜನರ ಸಬಲೀಕರಣಕ್ಕಾಗಿ ಶ್ರಮಿಸುತ್ತಿದೆ: ಮೋದಿ

ದೆಹಲಿ: ಬಿಜೆಪಿ ದೇಶದ ಹಿತ ಕಾಪಾಡುತ್ತಿದ್ದರೆ ಪ್ರತಿಪಕ್ಷಗಳು ಅವಕಾಶವಾದಿ ಹೊಂದಾಣಿಕೆ ಮತ್ತು ವಂಶಪಾರಂಪರೆ ರಾಜಕಾರಣದಲ್ಲಿ ನಿರತವಾಗಿವೆ ಎಂದು ಪ್ರಧಾನಿ ನರೇಂದ್ರ ಮೋದಿ ವಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಭಾನುವಾರ ಅವರು ತಮಿಳುನಾಡಿನ ಬೂತ್ ಮಟ್ಟದ ಬಿಜೆಪಿ ಕಾರ್ಯಕರ್ತರೊಂದಿಗೆ ವಿಡಿಯೋ ಸಂವಾದ ನಡೆಸಿದರು. ಬಿಜೆಪಿ ವಿರುದ್ದ ರಚಿಸಿಕೊಳ್ಳಲಾಗುತ್ತಿರುವ ಮೈತ್ರಿ ತಮ್ಮ ತಮ್ಮ ಉಳಿವಿಗಾಗಿ ಮತ್ತು ಈ ಮೈತ್ರಿ ಅಲ್ಪ ಆಯಸ್ಸು ಹೊಂದಿದೆ. ಅವರು ತಮ್ಮ ಸಾಮ್ರಾಜ್ಯ ಕಟ್ಟುವಲ್ಲಿ ನಿರತವಾಗಿದ್ದರೆ ಬಿಜೆಪಿ ದೇಶದ ಜನರ ಸಬಲೀಕರಣಕ್ಕಾಗಿ ಶ್ರಮಿಸುತ್ತಿದೆ ಎಂದರು. ಇತರ ಪಕ್ಷಗಳಂತೆ ನಾವು ಒಡೆದು ಆಳುವ ಮತ್ತು ವೋಟ್ ಬ್ಯಾಂಕ್ ರಾಜಕಾರಣ ಮಾಡುತ್ತಿಲ್ಲ. ಪ್ರತಿಯೊಂದು ಆಯಾಮದಿಂದಲೂ ದೇಶ ಸೇವೆ ಮಾಡುತ್ತಿದ್ದೇವೆ ಎಂದರು.

ಅಭಿವೃದ್ಧಿಯ ದೃಷ್ಟಿಯಿಂದ ಮುಂಬರುವ ಚುನಾವಣೆ ದೇಶ ಮತ್ತು ಪಕ್ಷಕ್ಕೆ ಮಹತ್ವವುಳ್ಳದ್ದಾಗಿದೆ. ಒಂದು ಕಡೆ ಅಭಿವೃದ್ಧಿಯ ಅಜೆಂಡಾ ಹಿಡಿದಿರುವ ಬಿಜೆಪಿ ಇದ್ದರೆ ಅವಕಾಶವಾದಿ ಹೊಂದಾಣಿಕೆ ಮತ್ತು ವಂಶ ಪಾರಂಪರೆ ಪಕ್ಷಗಳು ಮತ್ತೊಂದು ಕಡೆ ನಿಂತಿವೆ ಎಂದು ಯಾವುದೇ ಪಕ್ಷಗಳ ಹೆಸರೇಳದೆ ಅವರು ಟೀಕಿಸಿದರು. ದೆಶದ ರೈತರು, ಮಹಿಳೆಯರು ಮತ್ತು ಯುವಕರು ಬಿಜೆಪಿಯೊಂದಿಗೆ ಉತ್ತಮ ಸಂಬಂಧ ಹೊಂದಿದ್ದಾರೆ ಎಂದೂ ಅವರು ತಿಳಿಸಿದರು.

ಮೋದಿ ಕೆಟ್ಟವನಾಗಿದ್ದು, ಸರಕಾರ ತನ್ನ ಕರ್ತವ್ಯ ನಿರ್ವಹಿಸುತ್ತಿಲ್ಲ ಎಂದಾದರೆ ಹೊಂದಾಣಿಕೆಯ ಅವಶ್ಯಕತೆ ಏಕೆ? ನಿಮ್ಮಲ್ಲಿ ನಿಮಗೆ ವಿಶ್ವಾಸ ಇಲ್ಲವೇ? ಇದು ಉತ್ತಮ ಆಡಳಿತ ನೀಡುತ್ತಿರುವ ಸರಕಾರ ಎನ್ನುವುದು ಅವರಿಗೂ ತಿಳಿದಿದೆ. ಅದಕ್ಕಾಗಿಯೇ ಮೈತ್ರಿ ರಾಜಕಾರಣದಲ್ಲಿ ತೊಡಗಿದ್ದಾರೆ.
– ನರೇಂದ್ರ ಮೋದಿ ಪ್ರಧಾನಿ

Tags

Related Articles

Leave a Reply

Your email address will not be published. Required fields are marked *

Language
Close