About Us Advertise with us Be a Reporter E-Paper

Breaking Newsದೇಶಪ್ರಚಲಿತ

ಅವಧಿ ಮುಗಿದ ಔಷಧಿ ಸೇವಿಸಿ 9 ಮಕ್ಕಳು ಅಸ್ವಸ್ಥ

ಬಾಣ್ಸ್ವಾರ: ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮಕ್ಕಳಿಗೆ ಅವಧಿ ಮುಗಿದ ಔಷಧಿ ನೀಡಿದ ಕಾರಣಕ್ಕೆ 9 ಮಕ್ಕಳು ಅಸ್ವಸ್ಥಗೊಂಡಿರುವ ಘಟಣೆ ರಾಜಸ್ತಾನದ ಬಾಣ್ಸ್ವಾರದಲ್ಲಿ ನಡೆದಿದೆ.

ಬಾಣ್ಸ್ವಾರದ ಪಲಕ್ಪ್ರರ ಗ್ರಾಮದ ಸ್ಥಳೀಯರು ಔಷಧ ತಿಂದು 9 ಮಕ್ಕಳು ಅಸ್ವಸ್ಥಕ್ಕೀಡಾದ ನಂತರ ದೂರು ನೀಡಿದ ನಂತರ ಪ್ರಕರಣ ಬೆಳಕಿಗೆ ಬಂದಿದೆ. ಅಸೌಖ್ಯಕ್ಕೀಡಾದ ಮಕ್ಕಳು ಕುಶಾಲ್ ಗರ್ ಪ್ರಾಥಮಿಕ ಕೇಂದ್ರಕ್ಕೆ ದಾಖಲಾಗಿದ್ದಾರೆ.

ಜಿಲ್ಲಾ ಪ್ರಾಥಮಿಕ ಕೇಂದ್ರ ಪ್ರಕರಣದ ವರದಿಯನ್ನು ತರಿಸಿಕೊಂಡು ಅವಧಿ ಮುಗಿದ ಔಷಧಿ ಬಗ್ಗೆ ತನಿಖೆಗೆ ಆದೇಶ ನೀಡಿದೆ.
ಔಷಧಿಯನ್ನು ಸಂಗ್ರಹಿಸಿ ತನಿಖೆಗೆ ಒಪ್ಪಿಸುವಂತೆ ಉಪ ಮುಖ್ಯ ಆರೋಗ್ಯಾಧಿಕಾರಿ ರಮೇಶ್ ಶರ್ಮಾ ಆದೇಶ ನೀಡಿದ್ದಾರೆ.

ಮಕ್ಕಳ ತಜ್ಞರು ಪರೀಕ್ಷೆ ಮಾಡಿದ್ದು ಮೂವರು ಮಕ್ಕಳು ಜಿಲ್ಲಾಸ್ಪತ್ರೆಗೆ ಮತ್ತು ಇತರರು ಆರೋಗ್ಯ ಕೇಂದ್ರಗಳಿಗೆ ದಾಖಲಾಗಿದ್ದಾರೆ. ವೈದ್ಯರು ಮತ್ತು ದಾದಿಯರು ಮಕ್ಕಳ ಪರೀಕ್ಷೆ ನಡೆಸಲಿದ್ದಾರೆ ಎಂದರು. ಜಿಲ್ಲಾಧಿಕಾರಿಗಳು ಘಟನೆಯ ವರದಿ ತರಿಸಿಕೊಂಡು ತನಿಖೆಗೆ ಆದೇಶಿಸಿದ್ದಾರೆ.

Tags

Related Articles

Leave a Reply

Your email address will not be published. Required fields are marked *

Language
Close