About Us Advertise with us Be a Reporter E-Paper

Breaking Newsಪ್ರಚಲಿತರಾಜ್ಯ

ಜನವರಿಯಲ್ಲೇ ಏಪ್ರಿಲ್ ಫೂಲ್ ಮಾಡುತ್ತಿರುವ ಬಿಜೆಪಿಗರು…!

ಹಾಸನ: ಕಾಂಗ್ರೆಸ್‌ನ 10 ಶಾಸಕರು ದೆಹಲಿಯಲ್ಲಿದ್ದಾರೆ ಎಂಬ ಕುರಿತು ನಾನು ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಹೇಳಿದರು.

ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಈ ಬಗ್ಗೆ ನಾನು ತಲೆ ಕೆಡೆಸಿಕೊಳ್ಳಲು ಹೋಗುವುದಿಲ್ಲ. ಮೈತ್ರಿ ಸರಕಾರಕ್ಕೆ ಯಾವ ಧಕ್ಕೆ ಇಲ್ಲ. ರಾಜ್ಯದಲ್ಲಿ 5 ವರ್ಷ ಜೆಡಿಎಸ್ ಅಧಿಕಾರ ನಡೆಸಲಿದೆ. ಯಾವುದೇ ಕಾಂಗ್ರೆಸ್ ನಾಯಕರು ಕೈ ಬಿಟ್ಟು ಹೋಗುವುದಿಲ್ಲ. ಸಂಕ್ರಾಂತಿ ಹಬ್ಬಕ್ಕೆ ಸರಕಾರ ಪತನ ಎಂದು ಜನವರಿಯಲ್ಲೇ ಏಪ್ರಿಲ್ ಫೂಲ್ ಮಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ಬಿಜೆಪಿ ಮುಖಂಡರು ಮೊದಲು ರಾಜ್ಯದ ಹಿತ ಕಾಪಾಡಲು ಕಲಿಯಲಿ. ಕೇಂದ್ರದಿಂದ ರಾಜ್ಯ ಸರಕಾರಕ್ಕೆ ಯಾವ ಅನುದಾನ ಬರಬೇಕು ಎಂಬುದರ ಅಭಿವೃದ್ಧಿ ಕೆಲಸದತ್ತ ಗಮನ ನೀಡಲಿ ಎಂದು ಸಲಹೆ ನೀಡಿದರು. ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಹಾಸನ ಜಿಲ್ಲೆಯ ಲೋಕಸಭಾ ಚುನಾವಣೆಗೆ ಅಭ್ಯರ್ಥಿಯಾಗಿ ಪ್ರಜ್ವಲ್ ರೇವಣ್ಣನ ಹೆಸರು ಹೆಚ್ಚು ಕೇಳಿ ಬಂದಿದೆ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ರೇವಣ್ಣ , ಈ ಬಗ್ಗೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು, ಸಹೋದರ ಎಚ್.ಡಿ. ಕುಮಾರಸ್ವಾಮಿ ಚರ್ಚೆ ಮಾಡಿ ನಿರ್ಧರಿಸಲಿದ್ದಾರೆ ಎಂದರು.

Tags

Related Articles

Leave a Reply

Your email address will not be published. Required fields are marked *

Language
Close