About Us Advertise with us Be a Reporter E-Paper

ಗೆಜೆಟಿಯರ್

ಸುರಕ್ಷತೆಗೊಂದು ಕೀಲಿಕೈ ತೆರೆಯಲೊಲ್ಲದ 404

ಸಂತೋಷ್ ಕುಮಾರ್ ಮೆಹಂದಳೆ

ಜಾಲತಾಣದಲ್ಲಿ ಸುರಕ್ಷತೆ ಎನ್ನುವುದರ ಕಡೆಗೆ ಗಮನ ಕೊಡುವಾಗ, ಅಂತ ರ್ಜಾಲದ ಪುಟದ ಎಡಭಾಗದ ಮೇಲ್ತುದಿಗೆ ನಮಗೆ ಗೊತ್ತಿಲ್ಲದೆ ಲಕ್ಷ್ಯ ಹರಿದಿರುತ್ತದೆ. ಅದರಲ್ಲೂ ಬ್ಯಾಂಕಿಂಗ್ ವ್ಯವಹಾರ, ಹಣ ಪಾವತಿ, ಇನ್ಯಾರಿ ಗಾದರೂ ಹಣ ಕಳುಹಿಸುವಾಗ ಇಲ್ಲೆಲ್ಲಾ ತೀವ್ರ ನಿಗಾ ವಹಿಸುತ್ತಿರುತ್ತೇವೆ. ಕೆಲವೊಮ್ಮೆ ಮೊದಲು ಕೇವಲ ಹತ್ತೇ ರೂಪಾಯಿ ಕಳುಹಿಸಿ, ಅದು ಸರಿಯಾಗಿ ತಲುಪಿದೆಯಾ,  ಅಕೌಂಟಿನಲ್ಲಿ ಏನಾದರೂ ಗಡಿಬಿಡಿ ಆಗಿದೆಯಾ ಎಂದೆಲ್ಲಾ ಖಾತ್ರಿ ಪಡಿಸಿಕೊಂಡು ಸರಿಯಾಗಿದೆ ಅನ್ನಿಸಿದ ಮೇಲೆ ದೊಡ್ಡ ಮೊತ್ತಕ್ಕೆ ಕೈಹಾಕುವವರು ಬೇಕಾದಷ್ಟು ಮಂದಿ ಇದ್ದಾರೆ.  ಇವರೆಲ್ಲಾ ಈ ಎಡಮೇಲ್ತುದಿಯ ಬೀಗ ಮತ್ತು ಅದರ ಮುಂದೆ ಎರಡು ಬಲ ಲಂಬದಡ್ಡಗೆರೆ ಬಂದಿದೆಯಾ ನೋಡಿಕೊಂಡು, ಅದರಾಚೆಗೆ ಸ್ಪಷ್ಟವಾಗಿ ಹೈಪರ್ ಟೆಕ್‌ಸ್ಟ್ ಟ್ರಾನ್‌ಸ್ಫರ್ ಪ್ರೊಟೊ ಕಾಲ್‌ನ ಹ್ರಸ್ವ ರೂಪವಾದ ‘https://’  ಬಂದಿದೆಯಾ ಗಮನಿಸಿ ಕಾರ್ಯಕ್ಕಿಳಿಯುತ್ತಾರೆ. ಇಲ್ಲಿ ಮತ್ತೊಂದು ಎಸ್ ಬಂದಿದೆಯಲ್ಲ?  ಇದನ್ನು ಗಮನಿಸೋರು ಕಡಿಮೆ.  ಪ್ರಸ್ತುತ  ಜಾಲತಾಣದ ವ್ಯವಹಾರ ಅಪರತಪರಾ ಆಗದಂತೆ ಕಾಲೂರಿ ನಿಂತು, ಹೊರಗಿನ ಲಕ್ಷಾಂತರ ದಗಾಕೋರರಿಂದ ನಮ್ಮ ಪುಟಗಳ ಮಾಹಿತಿಗೆ ಕನ್ನ ಬೀಳದಂತೆ ನೋಡಿಕೊಳ್ಳುವ ಹಾಗೂ  ಇದ್ದಕ್ಕಿದ್ದಂತೆ ನಮ್ಮ ವ್ಯವಹಾರ ಮಾಹಿತಿ, ಹಣ, ಅಮೂಲ್ಯ ದಾಖಲಾತಿಗಳು, ಜಾಲತಾಣದಲ್ಲಿ ವ್ಯವಹರಿಸು ವಾಗ ಆಗಬಹುದಾದ ದರೋಡೆಗಳಿಂದ ರಕ್ಷಿಸುತ್ತಿರುವುದೇ ಈ ‘ಎಸ್’ ಎಂಬ ಕೀಲಿ ಕೈ.

ಈ ಮೊದಲೆ ತಿಳಿಸಿದ ಪ್ರೋಟೊಕಾಲ್ ಎನ್ನುವುದು ನಮ್ಮ ವ್ಯವಹಾರ ನಡೆಯುವಾಗ ಸಂಪರ್ಕ ಆಗುವ ಸಂವಹನದ ಪುಟಗಳ ಮಧ್ಯೆ ನಡೆಯುವ ನಿಸ್ತಂತು  ಪ್ರಸರಣದ ಹೆದ್ದಾರಿಯ ಸಂಪೂರ್ಣ ರಸ್ತೆಯನ್ನೇ ರಕ್ಷಿಸುವ ಶಿಷ್ಠಾಚಾರದ ಸುರಕ್ಷಾ ಪಥ. ಇದರ ಮೂಲಕ ನಡೆಯುವ ಸಂವಹನ ಪ್ರತಿ ಬಾರಿಯೂ ಅದರದ್ದೇ ಆದ ರೀತಿಯಲ್ಲಿ ಸುರಕ್ಷಿತ ಪಥದಲ್ಲೇ ಚಲಿಸಿ ಡೇಟಾ ಪೂರೈಕೆಯಾಗುತ್ತಿರುತ್ತದೆ. ನಾವು ಹುಡುಕುವ ಪುಟದ ಅಡ್ರೆಸ್ಸು ಹಾಕಿದ ಕೂಡಲೇ ಅದು ಜಾಗತಿಕವಾಗಿರುವ ಸರ್ವರ್‌ನ ಮೂಲ ನೆಲೆಗೇ ಹೋಗಿ ಅದರಲ್ಲಿರುವ ಅಧಿಕೃತ ಮಾಹಿತಿಯನ್ನೇ ಆಯ್ದು ನಿಮಗೆ ತೆರೆದು ತೋರಿಸುವ ಕೆಲಸವನ್ನು ಮಾಡುವುದಿದೆಯಲ್ಲ ಅದೊಂದು ಶಿಷ್ಠಾಚಾರ. ಎರಡೂ ಕಡೆಯಲ್ಲಿ ಸರಿಯಾದ ಸಂಪರ್ಕ  ಅನಿರಿಕ್ಷಿತ ದಾಳಿ ಎರಡನ್ನೂ ನಿರ್ವಹಿಸುತ್ತಾ, ಪ್ರತೀ ಕೆಲಸವೂ ಹೀಗೆ ಆಗಬೇಕೆನ್ನುವುವ ಒಂದು ನಿಯಮವಿದೆಯಲ್ಲ ಅದು ಶಿಷ್ಟಾಚಾರ. ಅದೇ ‘http://’

ಆದರೆ ಅದಷ್ಟೆ ಸಾಕಾಗದೆ ಹೋದಾಗ ಇದರ ಸುರಕ್ಷೆಗೆ ಇನ್ನೊಂದೇನಾದರೂ ಬೇಕೆನಿಸಿದಾಗ ಸೇರಿ ಆಗಿದ್ದು  ‘http://’  ಬಹುಶ: ಎಡ ಮೇಲ್ತುದಿಗೆ ಬೀಗದ ಚಿತ್ರ ಇರುವ ಪುಟದ ಆರಂಭ ನಿಮ್ಮ ಗಮನಕ್ಕೆ ಬಂದಿರುತ್ತದಲ್ಲ ಅದು ಸೆಕ್ಯೂರ್ ಅಂತಾ. ವಿಶೇಷವಾಗಿ ಬ್ಯಾಂಕಿನ ಪುಟದ ಆರಂಭದಲ್ಲಿ ಇದು ಇದ್ದೇ ಇರುತ್ತದೆ. ಇಲ್ಲಿ ಕೊಡಲಾಗಿರುವ ಪ್ರೊಟೊಕಾಲ್  ಪುಟಕ್ಕೆ ನೀವು ಇಳಿಯುವ ಮೊದಲೇ, ನೀವು ನೀಡುವ ಮಾಹಿತಿ ಮತ್ತು ಈಗಾಗಲೇ ಸರ್ವರ್‌ನಲ್ಲಿ ಸೆಕ್ಯೂರ್ಡ್ ಆಗಿ ದಾಖಲಿಸಿರುವ ಮಾಹಿತಿ ಎರಡೂ ತಾಳೆಯಾಗುತ್ತದಾ ಎಂದು ನೋಡುವುದೇ ಈ ಸೆಕ್ಯೂರ್ಡ್ ಲೇಯರ್ ಕೆಲಸ. (ಸೆಕ್ಯೂರ್ಡ್ ಸಾಕೆಟ್ ಲೇಯರ್ ಎಂಬ ಹೆಚ್ಚುವರಿ ಸುರಕ್ಷಾ ಪದರವಾಗಿ ಇದು ಕೆಲಸ ಮಾಡುತ್ತಾ, ಗ್ರಾಹಕ ಮತ್ತು ಸರ್ವರ್‌ನ ಸಂಪರ್ಕದ ಹೆದ್ದಾರಿಯನ್ನು ಸಂರಕ್ಷಿಸುತ್ತದೆ) ಸುರಕ್ಷತೆಯ ಹೊರಾವರಣದ ಭದ್ರತೆ ನೀಡಿರುವುದರಿಂದಲೇ ಅದಕ್ಕೆ ಬೀಗದ ಗುರುತಿನ ಚಿತ್ರವೂ ಬಂದಿರುತ್ತದೆ. ಆ ಪುಟ  ಭದ್ರ ನಿಮ್ಮ ಮಾಹಿತಿ ಸೋರಿಕೆ ಆಗುವುದಿಲ್ಲ ಅಥವಾ ಕದಿಯಲಾಗುವುದಿಲ್ಲ ಎನ್ನುವ ಮನವರಿಕೆಗಾಗಿ ಮೊದಲೇ ಖಚಿತಪಡಿಸಲಾಗಿರುತ್ತದೆ. ಹಾಗಾಗೇ ಅಂತಹ ಪುಟಗಳು ಹೈಪರ್ ಟೆಕ್‌ಸ್ಟ್ ಟ್ರಾನ್‌ಸ್ಫರ್ ಪ್ರೊಟೊಕಾಲ್ ಸೆಕ್ಯೂರ್ಡ್ ಎನ್ನಿಸಿಕೊಳ್ಳುತ್ತವೆ. ನಿಮ್ಮ ಬ್ಯಾಂಕ್ ವ್ಯವಹಾರ ಅತ್ಯಂತ ಸುರಕ್ಷಿತವೇ, ಫೋನ್ ಮೂಲಕ ನೀವಾಗೇ ಕೇಳಿದ ವರಿಗೆಲ್ಲಾ  ದಡ್ಡರಂತೆ ನಿಮ್ಮ ಮಾಹಿತಿ ಕೊಡುವವರೆಗೂ.

ಈ ಮಧ್ಯೆ ಸರಿಯಾದ ಮಾಹಿತಿಯನ್ನೇ ಈ ಪುಟಗಳು ನೀಡುತ್ತಿವೆ ಮತ್ತು ಸಂವಹನಕ್ಕೆ ತೆರೆದುಕೊಂಡಿವೆ ಎಂದು ಪ್ರಮಾಣೀಕರಿಸಲೇ ವ್ಯವಸ್ಥೆ ಇದ್ದು ಆ  ದೃಢೀ ಕರಣವೂ ಆಗುತ್ತಿರುತ್ತದೆ. ಇದೆಲ್ಲಾ ಒಂದೆಡೆಯಾದರೆ ಇದು ಮಾಡುತ್ತಿರು ವುದೆಲ್ಲಾ ಸರಿನೇ ಅಥವಾ ತೋರಿಸು ತ್ತಿರುವು ದೆಲ್ಲಾ ಸರಿಯಾಗೇ ಇದ್ದಾಗಲೂ ಅದರಲ್ಲೇ ಏನಾ ದರೊ ಎಡವಟ್ಟು ಆಗಬಾರದು ಎಂದಿದೆಯಾ..? ತಪ್ಪು ಘಟಿ ಸೋದು ಸಹಜ ಅಲ್ವೇ ಆಗ ಇದ್ದಕ್ಕಿದ್ದಂತೆ ನಮ್ಮ ಪರದೆಯ ಮೇಲೆ  //404 Not Found ಎಂದು ಬಿತ್ತರಗೊಳ್ಳು ವುದು ಗಮನಿಸಿರಬಹುದು. ಅದರರ್ಥ ಎನೋ ತಪ್ಪಾಗಿದೆ ಅಥವಾ ನಾವು ತಪ್ಪು ಮಾಡಿದ್ದೇವೆ ಎಂದಲ್ಲ. ಪುಟ ಮತ್ತು ಸರ್ವರ್  ಅಥವಾ ಗ್ರಾಹಕ ಮತ್ತು ಬಟವಾಡೆ ಯಾಗ ಬೇಕಿರುವ ಮಾಹಿತಿಯ ಮಧ್ಯದಲ್ಲಿ ಇದ್ದಕ್ಕಿದ್ದಂತೆ ಆಗುವ ತಾಂತ್ರಿಕ ತೊಂದರೆಗಳನ್ನು ಈ ಮೊದಲೇ ಹೇಳಿದ ಪ್ರಮಾ ಣೀಕೃತ ಸಂವಹನದ ದೃಢೀಕರಿಸುವ ವ್ಯವಸ್ಥೆ ಹಿಡಿದು ಹಾಕಿ, ಕೂಡಲೇ ದೋಷಪೂರಿತ ಪುಟವಾಗಿ ಮಾರ್ಪಡಿಸಿ ನಿಮ್ಮೆದುರಿಗೆ ತೋರಿಸುತ್ತದೆ. ಅದರರ್ಥ ಎಲ್ಲಾ ತಪ್ಪಾಗಿದೆ ಎಂದಲ್ಲ.

ಆದರೆ ನೀವು ಟೈಪಿಸಿರುವುದೇ ತಪ್ಪಿರಬಹುದು, ಲಾಗಿನ್ ತಪ್ಪಾಗಿ ಆಗಿರುವುದು, ಪಾಸ್‌ವರ್ಡ್‌ನ್ನು ನಿಗದಿತ ಮಿತಿಗಿಂತ ಹಲವು ಬಾರಿ ಹಾಕಿ ಪುಟದ ಪ್ರವೇಶಕ್ಕೆ ಪ್ರಯತ್ನಿಸಿರುವುದು, ಅಕ್ಷರದ  ಮೇಲೆ ಕೆಳಗೆ ಮಾಡಿರುವುದು ಹೀಗೆ ನಿಮ್ಮಿಂದ ಅಥವಾ ಇದನ್ನೆಲ್ಲ ಗಣಿಸುವ ಸರ್ವರ್‌ನ ಟೈಮಿಂಗ್‌ನಲ್ಲಿ ವ್ಯತ್ಯಾಸ ಹೀಗೆ ಅನಿರೀಕ್ಷಿತ ಮತ್ತು ಅಲ್ಲಿವರೆಗೆ ಗಣಿಕೆಗೆ ಲಭ್ಯವಿಲ್ಲದ ಎರರ್ ಬಂದು ಬಿಡುತ್ತದೆ. ಹಾಗೆ ಹೊರ ದೋಷವನ್ನು ಕಂಡ ಕೂಡಲೇ ಸರ್ವರ್‌ನಲ್ಲಿನ ಸುರಕ್ಷತೆಗಾಗಿ, ಪರದೆಯ ಮೇಲೆ ಮತ್ತು ಪರದೆಯ ಹಿಂದೆ ನಡೆಯುತ್ತಿರುವ (ಡಾರ್ಕ್ ನೆಟ್‌ವರ್ಕ್-ಕತ್ತಲೆಯ ಲೋಕದ ಅದ್ಭುತ ಕತೆ ಮತ್ತೊಮ್ಮೆ ಬರೆಯುತ್ತೇನೆ)ಸಂವಹನದ ಕಾರ್ಯಕ್ರಮಕ್ಕೆ ಫುಲ್‌ಸ್ಟಾಪ್ ಹಾಕಿ, ಯಾವುದೇ ಮೂಲಪುಟದಲ್ಲೂ ಏನೂ ದತ್ತಾಂಶಗಳು ಕಾಣೆಯಾಗದಂತೆ ನೋಡಿಕೊಂಡು,  ಸುಪರ್ದಿಯಲ್ಲಿರುವ ಮಾಲಿಕನ ಮತ್ತು ಗ್ರಾಹಕ ಡೆಟಾದಲ್ಲಿ ಆಗ ಬಹುದಾದ, ಆಗತೊಡುಗುವ ಕನ್ಫೂಸ್‌ನ ವಿಚಲಿತತೆ ಯನ್ನು ತಡೆದು, ಹೊಸ ಸಮಸ್ಯೆಗಳು ಇಣುಕಿ ಆ ಮೂಲ ಆಸ್ತಿಗೆ ಧಕ್ಕೆ ಬರದಂತೆ ಅದನ್ನು ಸೆಕ್ಯೂರ್ಡ್ ಮಾಡಿಕೊಂಡು ತನ್ನ ಕಾರ್ಯ ವಿಧಾನದ ಕೋಟೆಯನ್ನು ಭದ್ರಪಡಿಸಿ ಕೊಳ್ಳುತ್ತಿರು ತ್ತದೆ. ಹೀಗೆ ಇದೆಲ್ಲಾ ಕ್ಷಣಾರ್ಧದಲ್ಲಿ ಪರದೆ ಹಿಂದೆ ಕತ್ತಲಲೋಕ ದಲ್ಲಿ ಕೇವಲ ಸಂಜ್ಞೆಗಳ ಮೂಲಕ ನಡೆಯುವಾಗ ಪರದೆ ಎದುರಿಗೆ ಸಹನೆ ಕಳೆದುಕೊಳ್ಳುತ್ತಾ ಕೂತಿರುತ್ತೀರಲ್ಲ ನಿಮಗೂ ಏನಾದರೂ ಹೇಳಬೇಕಲ್ಲ.  ಅದು ಕೂಡಲೇ ತನ್ನ ಪಾಡಿಗೆ ಎಲ್ಲಾ ವ್ಯವಸ್ಥೆ ಮಾಡಿಕೊಳ್ಳುವಾಗ ನಿಮಗೆ ಮೊದಲ ಕ್ಷಣದಲ್ಲೆ  //404 Not Found ಎಂದು ಬಿತ್ತರಿಸಿ ತೆಪ್ಪಗೆ ಕೂರಿಸಿ ಬಿಡುತ್ತದೆ. ಹಾಗಾದಾಗ ನಾವು ಕೂಡಾ ಬ್ಯಾಕ್‌ಸ್ಲಾಷ್ ಹೊಡೆದು ಇನ್ನೆಲ್ಲೋ ಹೊರಟು ಹೋಗಿರುತ್ತೇವೆ. ಅಷ್ಟು ಸಮಯದಲ್ಲಿ ಸರ್ವರ್ ತನ್ನ ಕೆಲಸ ಪೂರೈಸಿಕೊಂಡಿರುತ್ತದೆ. ಅದಕ್ಕಾಗೇ ಮೊದಲೇ ಹೇಳಿದಂತೆ ಇನ್ಮೇಲೆ ನಿಮ್ಮ ಎಲ್ಲಾ ವ್ಯವಹಾರ(?) ಸುರಕ್ಷಿತ ಎಂದಾಗಬೇಕಾದರೆ ಬರೀ ಮನೆ ಯಲ್ಲ, ಪುಟದ ಮೊದಲ ಸಾಲಿನಲ್ಲೇ ಬೀಗವೂ ಇರಲೇಬೇಕು

Tags

Related Articles

Leave a Reply

Your email address will not be published. Required fields are marked *

Language
Close