About Us Advertise with us Be a Reporter E-Paper

ಅಂಕಣಗಳು

ಶೈಕ್ಷಣಿಕ ಸಮಾನತೆಯೇ ಸಾಮಾಜಿಕ ನ್ಯಾಯಕ್ಕೆ ಮೊದಲ ಮೆಟ್ಟಿಲು

- ಸಿದ್ಧಾರ್ಥ ವಾಡೆನ್ನವರ, ಲೇಖಕರು

ಕನ್ನಡ ನಾಡಲ್ಲಿ ಜನಿಸಿದ ಮತ್ತು ಕನ್ನಡ ನಾಡಲ್ಲಿ ಬದುಕುವ ಎಲ್ಲರೂ ಕನ್ನಡ ಕಲಿಯಬೇಕು ಮತ್ತು ಕನ್ನಡ ಮಾತನಾಡಬೇಕು. ಗಾಳಿ, ನೀರು, ಅನ್ನ, ಆಶ್ರಯ ಎಲ್ಲವನ್ನೂ ಇಲ್ಲಿಂದಲೇ ಪಡೆದು ಅನ್ಯ ಪ್ರಶಂಸಿಸಿದರೆ ಅದು ಕನ್ನಡ ನಾಡಿಗೆ ಬಗೆದ ದ್ರೋಹ. ಸಾಹಿತಿಗಳು ಮತ್ತು ರಾಜಕಾರಣಿಗಳು ಒಂದನ್ನು ಚಿಂತಿಸಬೇಕಾಗಿದೆ. ಅದೇನೆಂದರೆ, ಕನ್ನಡ ಮಾಧ್ಯಮ ಕೇವಲ ಬಡವರು, ರೈತರು, ದಲಿತರು ಮತ್ತು ಅಲ್ಪಸಂಖ್ಯಾತರು ಇವರ ಮಕ್ಕಳಿಗೆ ಮಾತ್ರ ಸೀಮಿತವಾಗಬಾರದು. ಶ್ರೀಮಂತರು, ರಾಜಕಾರಣಿಗಳು ಮತ್ತು ಅಧಿಕಾರಿಗಳು ಇವರ ಮಕ್ಕಳೂ ಪ್ರಥಮ ಹಂತದಿಂದಲೇ ಕನ್ನಡ ಮಾಧ್ಯಮದಲ್ಲಿ ಕಲಿಯುವಂತಾಗಬೇಕು. ಈ ನೆಲದಲ್ಲಿ ನೆಲೆಸಿರುವ ಎಲ್ಲಾ ಮಕ್ಕಳೂ ಒಂದನೇ ತರಗತಿಯಿಂದಲೇ ಕನ್ನಡ ಭಾಷೆ ಕಲಿಯುವಂತಾಗಬೇಕು. ಇರುವ ಕಾನೂನುಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ಉಳ್ಳವರ ಮಕ್ಕಳು ಇಂಗ್ಲಿಷ್ ಮಾಧ್ಯಮ, ಉಳಿದವರ ಮಕ್ಕಳು ಕನ್ನಡ ಮಾಧ್ಯಮ ಈ ವ್ಯವಸ್ಥೆ ಸರಿಯಲ್ಲ. ನಾಡಿನ ಜನರಿಗೆ ಮಾಡುತ್ತಿರುವ ಅನ್ಯಾಯವೆಂದರೆ ಇದೇ.

ಕನ್ನಡ ಭಾಷೆಯನ್ನು ಉಳಿಸಬೇಕಾದದ್ದು ನಮ್ಮೆಲ್ಲರ ಕರ್ತವ್ಯ. ಕನ್ನಡ ಭಾಷೆ ಉಳಿಯಬೇಕೆಂದು ಕೇವಲ ರೈತರು, ಬಡವರು, ದಲಿತರು ಮತ್ತು ಅಲ್ಪಸಂಖ್ಯಾತರ ಮೇಲೆ ಒತ್ತಡ ತರುವುದು ಎಷ್ಟು ಸರಿ? ಕನ್ನಡ ಭಾಷೆ ‘ಕಲಿಯಲು ಮತ್ತು ಬೆಳೆಸಲು’ ಸರಕಾರ ಮತ್ತು ಜನರ ಪ್ರೋತ್ಸಾಹ ಅತಿ ಮುಖ್ಯ. ಈ ನೆಲದಲ್ಲಿ ಕಲಿಯುವ ಮಗು ಎಲ್.ಕೆ.ಜಿ-ಯು.ಕೆ.ಜಿಯಿಂದಲೇ ಕನ್ನಡ ಭಾಷೆ ಕಲಿಕೆ ಕಡ್ಡಾಯವಾಗಬೇಕು. ಕನ್ನಡ ಕಲಿಕೆ ಕಡ್ಡಾಯವಾಗಬೇಕೆಂದು ಹೇಳುವವರ ಮಕ್ಕಳೇ ಮಮ್ಮಿ, ಡ್ಯಾಡಿ, ಅಂಕಲ್ ಎಂದು ಕರೆಯುತ್ತಿದ್ದಾರೆ, ಇದು ಸರಿಯಲ್ಲ. ಉನ್ನತ ಹುದ್ದೆಯಲ್ಲಿರುವ ಅಧಿಕಾರಿಗಳು ಮತ್ತು ರಾಜಕಾರಣಿಗಳು ಕಾನೂನುಗಳನ್ನು ಮೊದಲು ಪಾಲಿಸಬೇಕು. ಅಂದಾಗಲೇ ಜನ ಅವರನ್ನು ಆದರ್ಶವಾಗಿಟ್ಟುಕೊಂಡು ಕಾನೂನಿನ ನಿಯಮಗಳನ್ನು ಪಾಲಿಸುತ್ತಾರೆ. ಸರಕಾರದ ನಿಯಮಗಳು ಲಾಭದಾಯಕವಾಗಿದ್ದರೆ ಅವುಗಳ ಪಾಲನೆ ಮಾಡುತ್ತಾರೆ. ಹಕ್ಕುಗಳಿಗಾಗಿ ಹಾತೊರೆಯುತ್ತಾರೆ, ಕರ್ತವ್ಯಗಳ ಪಾಲನೆ ಇಲ್ಲ.

ಆಡಳಿತದಲ್ಲಿ ಶೇ.100ರಷ್ಟು ಕನ್ನಡ ಭಾಷೆಯ ಅಳವಡಿಕೆ ರಾಜ್ಯ ಸರಕಾರ ಮತ್ತು ಕೇಂದ್ರ ಸರಕಾರ ಇವುಗಳ ಕೊಂಡಿಯಾಗಿ ಅಧಿಕಾರಿಗಳು ಕೆಲಸ ಮಾಡಬೇಕಾಗುತ್ತದೆ. ದೇಶ ಶ್ರೀಮಂತವಾಗುತ್ತಿದೆ, ದೇಶದ ಕುಟುಂಬಗಳು ಶ್ರೀಮಂತ ಆಗುತ್ತಿಲ್ಲ. ಶೇ.40ರಷ್ಟು ಕುಟುಂಬಗಳಿಗೆ ಶಾಶ್ವತ ಆದಾಯವಿಲ್ಲ. ಶಾಶ್ವತ ಆದಾಯವೆಂದರೆ ಒಂದೂ ಜಮೀನು ಇರಬೇಕು, ಇಲ್ಲವೇ ಸರಕಾರಿ ನೌಕರಿ ಇರಬೇಕು ಅಥವಾ ಖಾಸಗಿ ನೌಕರಿ ಇರಬೇಕು. ಸರಕಾರಿ ನೌಕರಿ ಎಲ್ಲರಿಗೂ ಸಿಗುವುದಿಲ್ಲ. ಬಹುತೇಕರು ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡಬೇಕು, ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡಲು ಇಂಗ್ಲಿಷ್ ಬೇಕೇಬೇಕು. ಶಾಶ್ವತ ಸೃಷ್ಟಿಯಾಗಬೇಕಾದರೆ ಜ್ಞಾನಿಗಳಾಗಲೇಬೇಕು. ಮಕ್ಕಳಿಗೆ ಶ್ರೇಷ್ಠ ಮಟ್ಟದ ಶಿಕ್ಷಣ ನೀಡುತ್ತಿಲ್ಲ. ಹೆಚ್ಚಾಗಿ ರೈತ, ಬಡವ, ದಲಿತ, ಅಲ್ಪಸಂಖ್ಯಾತರ ಮಕ್ಕಳೇ ಕನ್ನಡ ಕಲಿಯುತ್ತಿದ್ದಾರೆ. ಸರಕಾರಿ ಕನ್ನಡ ಶಾಲೆಗಳಲ್ಲಿ ಓದುತ್ತಿರುವವರು ಯಾರು? ಹಣವಂತರು, ಅಧಿಕಾರಿಗಳು ಮತ್ತು ರಾಜಕಾರಣಿಗಳ ಮಕ್ಕಳು ಎಲ್.ಕೆ.ಜಿಯಿಂದಲೇ ಇಂಗ್ಲಿಷ್ ಕಲಿಯುತ್ತಿದ್ದಾರೆ. ಇದನ್ನು ನಗರಗಳಲ್ಲಿ ನೋಡಬಹುದು. ಕನ್ನಡ ನಾಡಿನ ನೆಲದಲ್ಲಿ ಅಧ್ಯಯನ ಮಾಡುವ ಎಲ್ಲರಿಗೂ ಒಂದೇ ಪಠ್ಯಕ್ರಮ ಇರಬೇಕು.

ಪತ್ರಿಕೆಗಳಲ್ಲಿ ಪ್ರಕಟವಾಗಿರುವಂತೆ ಮೈಸೂರು ಮೂಲದ Grassroots Research and Advocacy Movement (GRAAM) ವಿಶ್ಲೇಷಣೆಯ ಪ್ರಕಾರ ಕಳೆದ ಏಳು ವರ್ಷಗಳಲ್ಲಿ 1 ರಿಂದ 10ನೇ ತರಗತಿಯ ಸರಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಸುಮಾರು 9.96 ಲಕ್ಷಗಳಷ್ಟು ಕಡಿಮೆ ಆಗಿದೆ. ಸರಕಾರಿ ಶಾಲೆಗಳಲ್ಲಿ 2010-11ರಲ್ಲಿ 54.5 ಲಕ್ಷ ವಿದ್ಯಾರ್ಥಿಗಳು ಅಧ್ಯಯನ ಮಾಡಿದರೆ, 2017-18ರಲ್ಲಿ 44.5 ಲಕ್ಷ ವಿದ್ಯಾರ್ಥಿಗಳು ಅಧ್ಯಯನ ಮಾಡಿದರು. ಸುಮಾರು 9.96ಲಕ್ಷ ವಿದ್ಯಾರ್ಥಿಗಳು ಕಡಿಮೆಯಾಗಿರುವುದಕ್ಕೆ ಕಾರಣವೇನು? ವಿದ್ಯಾರ್ಜನೆ ಸರಿಯಾಗಿ ಆಗುತ್ತಿಲ್ಲ ಎಂದರ್ಥ. ಪಾಲಕರು ಖಾಸಗಿ ಶಾಲೆಗಳತ್ತ ಮುಖ ಮಾಡಿದ್ದಾರೆ. ಮಕ್ಕಳು ಬುದ್ಧಿವಂತರಾಗಬೇಕೆಂಬುದು ಪಾಲಕರ ಆ ಬಯಕೆ ಈಡೇರಿಸಲು ಕುಮಾರಸ್ವಾಮಿ ಪ್ರಯತ್ನ ಮಾಡುತ್ತಿದ್ದಾರೆ. ಎ್ಕಅಅ ವರದಿಯ ಪ್ರಕಾರ ಅದೇ ಅವಧಿಯಲ್ಲಿ ಖಾಸಗಿ ಶಾಲೆಗಳಲ್ಲಿ ಕಲಿಯುವ ವಿದ್ಯಾರ್ಥಿಗಳ ಸಂಖ್ಯೆ ಸುಮಾರು 11 ಲಕ್ಷಗಳಷ್ಟು ಹೆಚ್ಚಿಗೆ ಆಗಿದೆ. ರೈತರು, ದಲಿತರು, ಬಡವರು, ಅಲ್ಪಸಂಖ್ಯಾತರು ಇವರ ಮಕ್ಕಳು ಇಂಗ್ಲಿಷ್ ಕಲಿಯಬೇಕೆಂಬ ಕುಮಾರಸ್ವಾಮಿಯವರ ಬಯಕೆ ಮೆಚ್ಚುವಂಥದ್ದು.

1000 ಸರಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ ಶಾಲೆಗಳನ್ನು ಪ್ರಾರಂಭಿಸಲು ಬಜೆಟ್‌ನಲ್ಲಿ ಘೋಷಣೆ ಮಾಡಿದ್ದಾರೆ. ಜೊತೆಗೆ ಕನ್ನಡ ಮಾಧ್ಯಮವೂ ಇರುತ್ತದೆ. ಇದರ ಅನುಷ್ಠಾನ ಅಷ್ಟು ಉಳ್ಳವರು ತಮ್ಮ ಮಕ್ಕಳನ್ನು ಖಾಸಗಿ ಇಂಗ್ಲಿಷ್ ಮಾಧ್ಯಮ ಶಾಲೆಗಳಿಗೆ ಕಳುಹಿಸಿ ಕನ್ನಡ ರಕ್ಷಣೆಗೋಸ್ಕರ ಹೋರಾಟ ಮಾಡುತ್ತಾರೆ ವಿಪರ್ಯಾಸ ಅಂದರೆ ಇದೇ. 2015ರ ಱಓ್ಞ್ಞ ಔ್ಞಜ್ಠಜಛಿ ಔಛ್ಟ್ಞಿಜ್ಞಿಜ ಅ್ಚಠಿಱ ಪ್ರಕಾರ ರಾಜ್ಯದಲ್ಲಿರುವ ಎಲ್ಲಾ ಶಾಲೆಗಳಲ್ಲಿ ಕನ್ನಡ ಭಾಷೆ ಪ್ರಥಮ, ಅಥವಾ ದ್ವಿತಿಯ ಭಾಷೆಯಾಗಿ ಕಲಿಸುವ ವ್ಯವಸ್ಥೆ ಜಾರಿಗೆ ಬರಬೇಕು. 2018-19ನೇ ಸಾಲಿನಿಂದಲೇ ಜಾರಿಗೆ ಬರಬೇಕಾಗಿದೆ. ಇಆಖಇ/ಐಇಖಇ ಕೇಂದ್ರೀಯ ಶಾಲೆಗಳು ಇದನ್ನು ಹೇಗೆ ಜಾರಿಗೆ ತರುತ್ತವೆ ಎಂಬುದು ಅತಿ ಮುಖ್ಯ.

ಕನ್ನಡ ನಿಜ, ಕನ್ನಡ ಭಾಷೆ ಯಾರಿಂದ ಕುಸಿಯುತ್ತಿದೆ? ಅಧಿಕಾರಿ, ರಾಜಕಾರಣಿ ಮತ್ತು ರಿಯಲ್ ಎಸ್ಟೇಟ್ ದಂಧೆಯಲ್ಲಿ ತೊಡಗಿರುವವರ ಮಕ್ಕಳು ಪ್ರತಿಷ್ಠಿತ ಇಂಗ್ಲಿಷ್ ಮಾಧ್ಯಮ ಶಾಲೆಗಳಲ್ಲಿ ಕಲಿಯುತ್ತಿದ್ದಾರೆ. ಇವರ ಹತ್ತಿರ ಅನ್ಯ ಮಾರ್ಗಗಳಿಂದ ಸಂಪಾದಿಸಿದ ಹಣ ಇರಬಹುದು! ಪ್ರತಿಷ್ಠಿತ ಖಾಸಗಿ ಶಿಕ್ಷಣ ಸಂಸ್ಥೆಗಳು ಅವರಿಗಾಗಿಯೇ ಹುಟ್ಟಿಕೊಂಡಿವೆ. ಇವರ ಮಕ್ಕಳು ಕೇವಲ 3 ವರ್ಷಗಳಲ್ಲಿ ಇಂಗ್ಲಿಷ್ ಮಾತನಾಡುತ್ತಾರೆ. ರೈತ, ಬಡವ, ದಲಿತ ಮತ್ತು ಅಲ್ಪಸಂಖ್ಯಾತ ಇವರ ಮಕ್ಕಳು ವಯಸ್ಕರಾದರೂ ಇಂಗ್ಲಿಷ್ ಮಾತನಾಡುವುದಿಲ್ಲ. ಒಂದೇ ಅಧ್ಯಯನ, ಒಂದೇ ತೆರನಾದ ಶಾಲೆಗಳು ಏಕೆ ಇಲ್ಲ? ಎಲ್ಲವೂ ಕಾನೂನು ರೂಪಿಸುವವರ ಕೈಯಲ್ಲಿದೆ, ಜನಗಳ ಮಧ್ಯ ಭೇದ ತರುತ್ತಿರುವವರು ಯಾರು? ಅಧಿಕಾರಿ ಮತ್ತು ರಾಜಕಾರಣಿಗಳನ್ನು ದ್ವೇಷಿಸದೇ ಯಾರನ್ನು ದ್ವೇಷಿಸಬೇಕು? ನೀವೇ ಹೇಳಿ..,

ಒಂದು ವರದಿಯ ಪ್ರಕಾರ 75,489 ಶಾಲೆಗಳಿವೆ, ಇವುಗಳಲ್ಲಿ ಅಂದಾಜು 27,000 ಶಾಲೆಗಳಲ್ಲಿ ಮೂರಕ್ಕಿಂತ ಕಡಿಮೆ ಕೋಣೆಗಳಿವೆ. 164 ಶಾಲೆಗಳಿಗೆ ಕ್ಲಾಸ್‌ರೂಮ್‌ಗಳೇ ಇಲ್ಲ. 14,064 ಶಾಲೆಗಳಿಗೆ ಎರಡು ಕ್ಲಾಸ್‌ರೂಮುಗಳಿವೆ, 10,591 ಶಾಲೆಗಳಿಗೆ ಕೇವಲ ಮೂರು ಕ್ಲಾಸ್‌ರೂಮುಗಳಿವೆ. ಶೇ.36ರಷ್ಟು ಮೂರು ಮತ್ತು ಮೂರಕ್ಕಿಂತ ಕಡಿಮೆ ಕೋಣೆಗಳಿವೆ. ಸುಮಾರು 28,847 ಸರಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಅತೀ ಕಡಿಮೆ ಇದೆ. ಸಮೀಪವಿರುವ ಶಾಲೆಗಳೊಂದಿಗೆ ವಿಲೀನಗೊಳಿಸಲಾಗುವುದೆಂದು ಸರಕಾರ ಹೇಳಿದೆ. ಸರಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ದಿನೇದಿನೆ ಕಡಿಮೆಯಾಗುತ್ತಿದೆ. ಖಾಸಗಿ, ಸಿಬಿಎಸ್‌ಸಿ ಹಾಗೂ ಇಂಗ್ಲಿಷ್ ಮಾಧ್ಯಮ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಪಾಲಕರ ಭಾವನೆಗಳನ್ನು ಅರ್ಥ ಮಾಡಿಕೊಳ್ಳಬೇಕಾಗಿದೆ. ಮಕ್ಕಳಿಗೆ ಒಳ್ಳೆಯ ಶಿಕ್ಷಣ ಬೇಕು. ಸರಕಾರಿ ಮತ್ತು ಅನುದಾನಿತ ಅದು ಆಗುತ್ತಿಲ್ಲ.

ಬಡವ, ರೈತ, ದಲಿತ, ಅಲ್ಪಸಂಖ್ಯಾತ ಇವರ ಮಕ್ಕಳು ಇಂಗ್ಲಿಷ್ ಕಲಿಯುವಂತಾಗಬೇಕು. ಹೀಗೆ ಯೋಚಿಸಿದ ಮುಖ್ಯಮಂತ್ರಿಗಳ ಕಾಳಜಿಯನ್ನು ಪ್ರಶಂಸಿಸಲೇಬೇಕು. ಮಕ್ಕಳು ಇಂಗ್ಲಿಷ್ ಕಲಿಯಬೇಕೆನ್ನುವ ಮುಖ್ಯಮಂತ್ರಿಗಳ ಚಿಂತನೆಗೆ ಮೊನ್ನೆ ನಡೆದ ಅಖಿಲ ಭಾರತ ಸಾಹಿತ್ಯ ಸಮ್ಮೇಳನದಲ್ಲಿ ಸಂಪೂರ್ಣ ಬೆಂಬಲ ಸಿಗಲಿಲ್ಲ, ಬ್ರೇಕ್ ಹಾಕುವ ಕೆಲಸ ಪ್ರಾರಂಭವಾಯಿತು. ಶಾಶ್ವತ ಆದಾಯ ಇಲ್ಲದೇ ಇರುವ ಎಲ್ಲಾ ವರ್ಗದವರು ಅಭಿವೃದ್ಧಿಯಾಗಲೇಬೇಕು. ಉಳ್ಳವರ ಮಕ್ಕಳ ಹಾಗೆ ಉಳಿದವರ ಮಕ್ಕಳೂ ಮೊದಲ ತರಗತಿಯಿಂದಲೇ ಕನ್ನಡ ಜೊತೆ ಕಲಿಯುವ ವ್ಯವಸ್ಥೆ ಜಾರಿಯಾಗಬೇಕು. ಕಾನೂನುಗಳನ್ನು ರಚಿಸುವ ನಾಯಕರು ಎಲ್ಲರಿಗೂ ಒಂದೇ ವ್ಯವಸ್ಥೆಯನ್ನು ರೂಪಿಸಬೇಕು, ಇದ್ದ ಕಾನೂನುಗಳನ್ನು ಜಾರಿಗೆ ತಂದು ತಪ್ಪಿತಸ್ಥ ಶಾಲೆಗಳ ವಿರುದ್ಧ ಕ್ರಮ ಕೈಗೊಳ್ಳಬೇಕು.

ಪತ್ರಿಕೆಗಳಲ್ಲಿ ಪ್ರಕಟವಾಗಿರುವಂತೆ ಮುಖ್ಯಮಂತ್ರಿಗಳ ಹೇಳಿಕೆ ‘ಶಿಕ್ಷಣ ಹಕ್ಕು ಕಾಯ್ದೆ(ಆರ್‌ಟಿಇ)’ ಒಂದು ಬೋಗಸ್ ಕಾರ್ಯಕ್ರಮ. ಇದರಿಂದ ಖಾಸಗಿ ಶಿಕ್ಷಣ ಸಂಸ್ಥೆಗಳು ಯಾವ ಮಟ್ಟದಲ್ಲಿ ಹಣ ಲಪಟಾಯಿಸಿವೆ ಎಂಬುದು ಎಲ್ಲರಿಗೂ ಗೊತ್ತಿದೆ. ಈ ಕುರಿತು ಇಲ್ಲಿ ಪ್ರಸ್ತಾಪ ಮಾಡುವುದಿಲ್ಲ. ಸರಕಾರಿ ಶಾಲೆಗಳ 12,000 ಶಿಕ್ಷಕರಿಗೆ ಜ್ಞಾನ ನೀಡಲು ತೀರ್ಮಾನಿಸಿದ್ದೇವೆ. ಇದರಿಂದ ಸರಕಾರಿ ಶಾಲೆಗಳಲ್ಲಿ ಶಿಕ್ಷಣ ಮಟ್ಟ ಕಳಪೆ ಎಂಬುದು ದೂರವಾಗಿದೆ’. ಇಂಗ್ಲಿಷ್ ಕಲಿಸುವುದರಿಂದ ಕನ್ನಡ ಮಾಧ್ಯಮಕ್ಕೆ ಧಕ್ಕೆಯಾಗುವುದಿಲ್ಲವೆಂದು ಮಾನ್ಯ ಮುಖ್ಯಮಂತ್ರಿಗಳು ಹೇಳಿದ್ದಾರೆ. ಕನ್ನಡಕ್ಕೆ ಪ್ರಥಮ ಆಧ್ಯತೆ ಜೊತೆಗೆ ಒಂದನೇ ತರಗತಿಯಿಂದಲೇ ಇಂಗ್ಲಿಷ್ ಮಾಧ್ಯಮ ಅಗತ್ಯವಿದೆ ಈ ಪ್ರಸ್ತಾಪ ಅವರು ಮಾಡಿದ್ದಾರೆ. ಇದರಿಂದ ಪಾಲಕರ ಮೊಗದಲ್ಲಿ ನಗು ತುಂಬಿದೆ. ಮಕ್ಕಳ ಮಧ್ಯ ಕೀಳರಿಮೆ ಇರಬಾರದು.

ಉಚಿತ ಅಕ್ಕಿಗೋಸ್ಕರ, ಫ್ರೀ ಸೈಕಲ್‌ಗೋಸ್ಕರ ಜನ ಕಚ್ಚಾಡುತ್ತಿದ್ದಾರೆ. ಹೀಗಾಗಬಾರದೆಂದರೆ, ಬಡವ, ದಲಿತ ಮತ್ತು ಅಲ್ಪಸಂಖ್ಯಾತ ಇವರ ಮಕ್ಕಳು ಕನ್ನಡ ಭಾಷೆಯೊಂದಿಗೆ ಇಂಗ್ಲಿಷ್ ಭಾಷೆಯನ್ನೂ ಎಲ್.ಕೆ.ಜಿಯಿಂದಲೇ ಕಲಿಯಬೇಕು. ನೆಲದ ಪ್ರೀತಿ, ಸಂಸ್ಕೃತಿ ಉಳಿಸಲು ಕನ್ನಡ ಕಲಿಯಬೇಕಾದ ಅನಿವಾರ್ಯ ಎಷ್ಟಿದೆಯೋ ಬದುಕು ರೂಪಿಸಿಕೊಳ್ಳಲು ಇಂಗ್ಲಿಷ್ ಕಲಿಕೆಯೂ ಅಷ್ಟೇ ಮುಖ್ಯ. ದೇಶದ ಒಳಿತು ಕೆಡಕುಗಳ ಬಗ್ಗೆ ಅಧ್ಯಯನ ಮಾಡಲು ದೇಶ ವ್ಯಾಪ್ತಿ ಉದ್ಯೋಗ ಅರಸಿ ಹೋಗಲು ಹಿಂದಿ ಭಾಷೆಯೂ ಅಷ್ಟೇ ಮುಖ್ಯ. ಮೊದಲ ತರಗತಿಯಿಂದಲೇ ಕನ್ನಡ, ಹಿಂದಿ, ಇಂಗ್ಲಿಷ್ ಭಾಷಾ ಕಲಿಕೆ ಕಡ್ಡಾಯವಾಗಿ ಎಲ್ಲಾ ಜಾರಿಗೆ ಬರಬೇಕು. ಅಗತ್ಯ ಸಿಬ್ಬಂದಿ ನೇಮಕ ಆಗಬೇಕು. ಸಾಹಿತಿಗಳು, ರಾಜಕಾರಣಿಗಳು, ಅಧಿಕಾರಿಗಳು ಮಾಡಬೇಕಾದ ಕೆಲಸವೇನೆಂದರೆ, ಸಿಬಿಎಸ್ಸಿ ಆಗಿರಲಿ, ಸೆಂಟ್ರಲ್ ಸ್ಕೂಲ್‌ಗಳಾಗಿರಲಿ, ಖಾಸಗಿ ಶಾಲೆಗಳಾಗಿರಲಿ, ಸರಕಾರಿ ಶಾಲೆಗಳೇ ಆಗಿರಲಿ ಎಲ್ಲಾ ಶಾಲೆಗಳಲ್ಲಿ ಮೊದಲ ತರಗತಿಯಿಂದಲೇ ಕನ್ನಡ, ಹಿಂದಿ, ಇಂಗ್ಲಿಷ್ ಕಲಿಕೆ ಆರಂಭವಾಗುವಂತೆ ನೋಡಿಕೊಳ್ಳಬೇಕು. ಹಣವಂತರು ಹೇಳುತ್ತಾರೆ, ಮಕ್ಕಳ ಮೇಲೆ ಅತಿಯಾದ ಒತ್ತಡ ಸರಿಯಲ್ಲ, ಇಂಗ್ಲಿಷ್ ಕಲಿಯಬೇಕಾದರೆ ಒತ್ತಡ ಇಲ್ಲ, ಕನ್ನಡ ಕಲಿಯಬೇಕಾದರೆ ಒತ್ತಡವೇಕೆ?

ಹೊಸ ಶಿಕ್ಷಣ ನೀತಿ ಕರಡು ಪ್ರತಿ ಗಮನಕ್ಕೆ ಸಧ್ಯದಲ್ಲಿಯೇ ತರಲಾಗುವುದೆಂದು ಕೇಂದ್ರ ಸಚಿವ ಪ್ರಕಾಶ ಜಾವಡೇಕರ್ ಹೇಳಿದ್ದಾರೆ. ಅವರು ಮೂರು ಭಾಷೆಗಳ ಪಠ್ಯಕ್ರಮ ಅನುಷ್ಠಾನಗೊಳಿಸುವ ಉದ್ದೇಶ ಹೊಂದಿದ್ದಾರೆ. ದೇಶಾದ್ಯಂತ ವಿಜ್ಞಾನ ಮತ್ತು ಗಣಿತ ಒಂದೇ ಪಠ್ಯಕ್ರಮ ಇರುವುದೂ ಒಳಿತು ಎನ್ನುವುದಾಗಿದೆ. ಇದನ್ನು ಎಲ್ಲರೂ ಬೆಂಬಲಿಸಬೇಕಾಗಿದೆ. ಹಳ್ಳಿಗಳಲ್ಲಿ ಸ್ಥಾಪಿತವಾಗಿರುವ ಸರಕಾರಿ ಶಾಲೆಗಳಲ್ಲಿ ಐದು-ಆರನೇ ಕ್ಲಾಸಿಗೆ ಇಂಗ್ಲಿಷ್ ಪ್ರಾರಂಭ. ಸಿಬಿಎಸ್‌ಸಿ ಶಾಲೆಗಳಲ್ಲಿ ಆರನೇ ಕ್ಲಾಸಿಗೆ ಕನ್ನಡ ಪ್ರಾರಂಭ, ಅದೂ ಕಡ್ಡಾಯ ಇಲ್ಲ.

ಶಿಕ್ಷಣ ವ್ಯವಸ್ಥೆ ತಾರತಮ್ಯದಿಂದ ಕೂಡಿದೆ ತಾರತಮ್ಯ ವೇದಿಕೆಗಳು ಬಳಕೆಯಾಗಲಿ. ಆರ್ಥಿಕ ಮತ್ತು ಸಾಮಾಜಿಕ ಸಮಾನತೆ ಸೃಷ್ಟಿಯಾಗದೇ ಇರುವುದೂ ಶಿಕ್ಷಣ ವ್ಯವಸ್ಥೆಯಲ್ಲಿ ತಾರತಮ್ಯ ಆಗುವುದಕ್ಕೆ ಕಾರಣವೆಂದರೆ ತಪ್ಪಾಗುವುದಿಲ್ಲ. ಶಿಕ್ಷಣದಲ್ಲಿ ಸಮಾನತೆ ಸ್ಥಾಪಿಸಲು ಸಾಧ್ಯವಿದೆ, ಯೋಗ್ಯ ಕಾನೂನುಗಳನ್ನು ರೂಪಿಸಬೇಕು, ಅದಕ್ಕೆ ರಾಜಕಾರಣಿಗಳು ಬೆಂಬಲ ಬೇಕು. ಭಾಷಾ ಪ್ರೇಮಿಗಳು ಮತ್ತು ಸಾಹಿತಿಗಳು ತುಂಬಾ ಒತ್ತಡ ಹೇರಬಾರದು. 1000 ಸರಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ ಪ್ರಾರಂಭ ಈ ಯೋಜನೆ ವಿಳಂಬ ಆಗಬಾರದು. ಇದರಿಂದ ಬಡವ, ರೈತ, ದಲಿತ ಮತ್ತು ಅಲ್ಪಸಂಖ್ಯಾತ ಇವರ ಇಂಗ್ಲಿಷ್ ಕಲಿಯಲು ಪ್ರೋತ್ಸಾಹ ಸಿಗುತ್ತದೆ. ನನ್ನ ಮಗ ಐಎಎಸ್, ಐಪಿಎಸ್, ರಾಜಕಾರಣಿ, ದೊಡ್ಡ ಅಧಿಕಾರಿ, ಬಿಜಿನೆಸ್‌ಮೆನ್ ಆಗಬೇಕೆಂಬುದು ಪ್ರತಿ ತಂದೆ-ತಾಯಿ ಕನಸು ಕಾಣುತ್ತಾರೆ. ಪ್ರಜಾಪ್ರಭುತ್ವದ ತಳಹದಿಯ ಮೇಲೆ ಸ್ಥಾಪಿತವಾದ ಈ ದೇಶದಲ್ಲಿ ತಾರತಮ್ಯಕ್ಕೆ ಅವಕಾಶ ಕೊಡಬಾರದು. ಪ್ರಜೆಗಳ ಬೇಡಿಕೆಗಳಿಗೆ ಸ್ಪಂದಿಸುವುದು ಅಧಿಕಾರಿ ಮತ್ತು ರಾಜಕಾರಣಿಗಳ ಕರ್ತವ್ಯ. ಜನರ ಕಲ್ಯಾಣಕ್ಕಾಗಿ ಮತ್ತು ಪ್ರತಿ ಕುಟುಂಬದ ಆರ್ಥಿಕ ಅಭಿವೃದ್ಧಿಗಾಗಿ ವೇದಿಕೆಗಳು ಉಪಯೋಗ ಆಗಲಿ.

ನನ್ನ ಮಗನೂ ಇಂಗ್ಲಿಷ್ ಮಾತನಾಡಬೇಕೆಂದು ರೈತ ಬಯಸುವುದಿಲ್ಲವೇ? ಮಗನೂ ಇಂಗ್ಲಿಷ್ ಮಾತನಾಡಬೇಕೆಂದು ಬಡವ, ದಲಿತ ಮತ್ತು ಅಲ್ಪಸಂಖ್ಯಾತರು ಬಯಸುವುದಿಲ್ಲವೇ? ಒಬ್ಬ ಸ್ವಾಮಿ ವಿವೇಕಾನಂದ ಅಮೇರಿಕ ಮತ್ತು ಲಂಡನ್‌ಗೆ ಹೋಗಿ ಇಂಗ್ಲಿಷ್ ಪಾಂಡಿತ್ಯದಲ್ಲಿ (ಭಾರತೀಯತೆ) ಜಾಣ್ಮೆಯನ್ನು ತೋರಿಸಿ ಜಗತ್ಪ್ರಸಿದ್ದರಾದರು. ಇವರು ನಾಡಿನ ಆರಾಧ್ಯ ದೇವರು. ಮಹಾತ್ಮಾ ಗಾಂಧೀಜಿ ಮತ್ತು ಮಹಮ್ಮದ ಅಲಿ ಜಿನ್ಹಾ ಇವರ ಇಂಗ್ಲಿಷ್ ಭಾಷಣಕ್ಕೆ ಬ್ರಿಟೀಷರೇ ಬೆರಗಾದರು. ಇಂಗ್ಲಿಷ್ ಪಾಂಡಿತ್ಯ ಮತ್ತು ಅಘಾದವಾದ ಜ್ಞಾನ ತುಂಬಿಕೊಂಡ ಡಾ. ಬಿ.ಆರ್ ಅಂಬೇಡ್ಕರ್ ಸಂವಿಧಾನವನ್ನೇ ರಚಿಸಿದರು. ಪ್ರತಿಯೊಬ್ಬ ತಂದೆ-ತಾಯಿ ಮಕ್ಕಳೂ ಹೀಗೇ ಆಗಬೇಕೆಂದು ಬಯಸುತ್ತಾರೆ. ಕೋರ್ಟ ವಿಚಾರಗಳನ್ನು ತಿಳಿದುಕೊಳ್ಳಲು, ವ್ಯವಹಾರ ವೃದ್ಧಿಗೆ, ಬೇರೆ ದೇಶಗಳಿಗೆ ಹೋಗಿ ಒಳ್ಳೆಯ ಸಂಬಳಕ್ಕಾಗಿ ಕೆಲಸ ಮಾಡಲು ಇಂಗ್ಲಿಷ್ ಬೇಕೆಬೇಕು. ಹಳ್ಳಿಯಲ್ಲಿರುವ ತಂದೆ-ತಾಯಿಗೆ ಆಸರೆ ಆಗಲು, ಜಮೀನಿನಲ್ಲಿ ಸಮೃದ್ಧ ಉತ್ಪನ್ನ ತೆಗೆಯಲು ಇಂಗ್ಲಿಷ್ ಬೇಕೆಬೇಕು. ಪ್ರತಿಷ್ಠಿತ ರಾಜಕಾರಣಿಗಳು, ಅಧಿಕಾರಿಗಳು, ನ್ಯಾಯಾಧೀಶರು ಎಲ್ಲರೂ ಇಂಗ್ಲಿಷ್ ಕಲಿತೇ ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ.

ಕನ್ನಡ ಇದು ಮಾತೃಭಾಷೆ, ಕನ್ನಡವನ್ನು ಅಮ್ಮ, ತಂದೆ, ಗೆಳೆಯ, ನೆರೆಹೊರೆಯವರು ಎಲ್ಲರೂ ಕಲಿಸುತ್ತಾರೆ. ಎಲ್ಲಾ ಕನ್ನಡ ಕಲಿಕೆ ಆರಂಭದಿಂದಲೇ ಕಡ್ಡಾಯವಾಗಲಿ. ಜೊತೆಗೆ ಇಂಗ್ಲಿಷ, ಹಿಂದೀ ಕಲಿಯಬೇಕೆಂಬುದೇ ನಮ್ಮ ಬಯಕೆ. ವ್ಯವಸ್ಥೆ ಹೀಗೆಯೇ ಮುಂದುವರೆದರೆ ಬಡವ, ರೈತ, ದಲಿತ ಮತ್ತು ಅಲ್ಪಸಂಖ್ಯಾತ ಇವರ ಮಕ್ಕಳು ಮುಂದೆ ಬರುವುದಿಲ್ಲ. ಬೇರೆ ದೇಶದ ಪ್ರಜೆಗಳು ನಮ್ಮ ದೇಶವನ್ನು ಆಧ್ಯಾತ್ಮದ ತವರೂರು ಎಂದು ಕರೆಯುತ್ತಿದ್ದಾರೆ. ಭಾರತಕ್ಕೆ ಬಂದು ಕಲಿಯಬೇಕೆನ್ನುವ ಆಸಕ್ತಿ ಅವರಿಗೆ ಇದೆ. ನಮ್ಮಲ್ಲಿರುವವರನ್ನು ನಾವ್ಯಾಕೆ ಜ್ಞಾನಿಗಳನ್ನಾಗಿ ಮಾಡಬಾರದು? ರೈತನ ಬೆಳೆಗೆ ಕನಿಷ್ಠ ದರ ಸಿಗಬೇಕೆಂದರೆ, ಬಡವರಿಗೆ ಶಾಶ್ವತ ಆದಾಯ ಮಾರುಕಟ್ಟೆ ಆಧಾರಿತ ಬೆಳೆಗಳನ್ನು ಬೆಳೆಯಲು ಆಸಕ್ತಿ ವಹಿಸಬೇಕಾದರೆ, ಜ್ಞಾನಿಗಳ ದೇಶ ಆಗಬೇಕಾದರೆ ಮಕ್ಕಳಿಗೆ ಹೆಚ್ಚು ಹೆಚ್ಚು ಭಾಷೆಗಳನ್ನು ಕಲಿಸುವ ಅಗತ್ಯ ಇದೆ. ಮುಖ್ಯಮಂತ್ರಿ ಕುಮಾರಸ್ವಾಮಿ ರೈತಮಿತ್ರ. ಇವರು ಒಳ್ಳೆಯ ವಿಚಾರ ಎತ್ತಿಕೊಂಡಿದ್ದಾರೆ. ಅವರಿಗೆ ಪ್ರೋತ್ಸಾಹ ನೀಡಬೇಕಾದದ್ದು ನಮ್ಮೆಲ್ಲರ ಕರ್ತವ್ಯ. ಕನ್ನಡ ಭಾಷೆ ಉಳಿಸಲು ಮತ್ತು ಬೆಳೆಸಲು ಮೊದಲ ತರಗತಿಯಿಂದಲೇ ರಾಜ್ಯದಲ್ಲಿ ಸ್ಥಾಪಿತವಾದ ಎಲ್ಲಾ ಶಾಲೆಗಳಲ್ಲಿ ಕನ್ನಡ ಜೊತೆಗೆ ಇಂಗ್ಲಿಷ್ ಕಲಿಕೆ ಪ್ರಾರಂಭ ಆಗಬೇಕು.

ಕುಟುಂಬದ ಆರ್ಥಿಕ ಸ್ಥಿತಿ ಸುಧಾರಿಸಲು, ಕನಸುಗಳನ್ನು ನನಸು ಮಾಡಲು ‘ಮೊದಲ ತರಗತಿಯಿಂದಲೇ ಕನ್ನಡ, ಹಿಂದಿ, ಇಂಗ್ಲಿಷ್ ಭಾಷೆ ಕಡ್ಡಾಯ’ ಈ ಯೋಜನೆ ಜಾರಿಗೆ ಬರಬೇಕು. ಸಿಬಿಎಸ್‌ಸಿ, ಸೆಂಟ್ರಲ್ ಸ್ಕೂಲ್, ಇಂಗ್ಲಿಷ್ ಮಾಧ್ಯಮ ಶಾಲೆ, ಸರಕಾರಿ ಶಾಲೆ ಎಲ್ಲಾ ಶಾಲೆಗಳ ಪಠ್ಯಪುಸ್ತಕಗಳು ಒಂದೇ ರೀತಿಯಾಗಿರಬೇಕು. ಶಿಕ್ಷಣ ರಾಷ್ಟ್ರೀಕರಣಗೊಳ್ಳಬೇಕು. ಅಧಿಕಾರದಲ್ಲಿರುವವರು ಸೂಕ್ತ ಕಾನೂನುಗಳನ್ನು ಜಾರಿಗೆ ತರಬೇಕು. ರೈತ-ಬಡವ-ದಲಿತ-ಅಲ್ಪಸಂಖ್ಯಾತ ಇವರ ಮೇಲೆ ಮಮತೆ ಇರಲಿ, ಅವರೂ ಇಂಗ್ಲಿಷ್ ಕಲಿಯಲಿ. ಕುಮಾರಸ್ವಾಮಿಯವರಿಗೆ ಒಂದು ಮನವಿ, ಎಲ್ಲಾ ಸಾಹಿತಿಗಳ ಅಭಿಪ್ರಾಯ ಒಂದೇ ರೈತ, ಬಡವ, ದಲಿತ, ಅಲ್ಪಸಂಖ್ಯಾತ ಇವರ ಬಯಕೆಗಳು ನಿಮಗೆ ಗೊತ್ತಿವೆ. ಒಳ್ಳೆಯ ಯೋಜನೆಯಿಂದ ಹಿಂದೆ ಸರಿಯಬೇಡಿ. ಉಳ್ಳವರ ಮಕ್ಕಳ ಹಾಗೆ ಉಳಿದವರ ಮಕ್ಕಳೂ ಕಲಿಯಲಿ.

Tags

Related Articles

Leave a Reply

Your email address will not be published. Required fields are marked *

Language
Close