ನ.8 ರಿಂದ 4,200 ಕೋಟಿ ಕಪ್ಪುಹಣ ಪತ್ತೆ

Posted In : ದೇಶ

ದೆಹಲಿ: ನೋಟು ಅಮಾನ್ಯವನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವ ಆದಾಯ ತೆರಿಗೆ ಇಲಾಖೆ ಕಪ್ಪುಹಣವನ್ನು ಬಿಳಿಯಾಗಿಸುತ್ತಿರುವ ಕುಳಗಳಿಗೆ ಐದು ಸಾವಿರ ನೋಟೀಸು ಜಾರಿಗೊಳಿಸಿದ್ದು, ರು.4200 ಕೋಟಿ ನಗದನ್ನು ಪತ್ತೆ ಮಾಡಿದೆ. ನ.8 ರಿಂದ ದೇಶಾದ್ಯಂತ ಕನಿಷ್ಠ ಒಂದು ಸಾವಿರ ಸರ್ವೇ ನಡೆದಿದ್ದು, ಡಿ.22 ರಿಂದ 28 ರವರೆಗೆ 200 ದಾಳಿಗಳು ನಡೆದಿವೆ ಎಂದು ಇಲಾಖೆ ದತ್ತಾಂಶ ತಿಳಿಸಿದೆ.
458 ಕೋ.ರು.ಗಳಲ್ಲಿ 105 ಕೋ .ರು ಗಳು ಹೊಸ ನೋಟುಗಳಲ್ಲಿ ಐನೂರು ಮತ್ತು ಎರಡು ಸಾವಿರ ಮುಖಬೆಲೆಯ ನೋಟು ಒಳಗೊಂಡಿದೆ. ಇದರಲ್ಲಿ ಬ್ಯಾಂಕು ಸಿಬ್ಬಂದಿ ಪಾತ್ರವೇ ಹೆಚ್ಚು. ಠೇವಣಿಯಾದ ನಗದಿನಿಂದ ಹಿಡಿದು ಚಿನ್ನಾಭರಣ ಕೊಳ್ಳುವಿಕೆವರೆಗೆ ಪ್ರತಿಯೊಂದು ಅಂಶವನ್ನು ವಿಭಾಗದ ಅಧಿಕಾರಿಗಳು ನ.8 ರ ನಂತರ ಗಮನಿಸಿದ್ದಾರೆ.
ನಗದನ್ನು ಕಾಪಿಡುವಿಕೆ ಎಂಬುದು ಕಪ್ಪು ಹಣದ ಭಾಗವಾಗಿದೆ. ಈ ಮೂಲಕ ಬೇನಾಮಿ ಆಸ್ತಿಯ ಸೃಷ್ಟಿ ಮತ್ತು ಚಿನ್ನದ ಹಾಗೂ ರಿಯಲ್ ಏಸ್ಟೇಟ್ ಮೇಲಿನ ಹೂಡಿಕೆ ಮಾಡಬಹುದಾಗಿದೆ. ನ.8 ನಂತರ, ಜಾರಿ ನಿರ್ದೇಶನಾಲಯ ಹಾಗೂ ಸಿಬಿಐ ಕಚೇರಿಗಳಲ್ಲಿ 500 ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಮುಖ್ಯವಾಗಿ, 547 ಬ್ಯಾಂಕ್ ಶಾಖೆಗಳ ಮೇಲೆ ಐಟಿ ವಿಭಾಗ ಕಣ್ಣಿಡಲಿದೆ. ಜಾರಿ ನಿರ್ದೇಶನಾಲಯವು ಹತ್ತು ಬ್ಯಾಂಕುಗಳ 50 ಶಾಖೆಗಳ ಪ್ರಕರಣಗಳ ತನಿಖೆ ನಡೆಸುತ್ತಿವೆ ಎಂದು ಮೂಲಗಳು ತಿಳಿಸಿವೆ.

Leave a Reply

Your email address will not be published. Required fields are marked *

two × 4 =

Wednesday, 24.01.2018

ಶ್ರೀಹೇಮಲಂಬಿ, ಉತ್ತರಾಯಣ, ಶಿಶಿರಋತು, ಮಾಘ ಮಾಸ, ಶುಕ್ಲಪಕ್ಷ, ಸಪ್ತಮಿ, ಬುಧವಾರ, ನಿತ್ಯ ನಕ್ಷತ್ರ-ರೇವತಿ, ಯೋಗ-ಸಿದ್ಧಿ, ಕರಣ-ವಣಿಜೆ.

ರಾಹುಕಾಲಗುಳಿಕಕಾಲಯಮಗಂಡಕಾಲ
12.00-01.30 10.30-12.00 07.30-09.00

Read More

 

Wednesday, 24.01.2018

ಶ್ರೀಹೇಮಲಂಬಿ, ಉತ್ತರಾಯಣ, ಶಿಶಿರಋತು, ಮಾಘ ಮಾಸ, ಶುಕ್ಲಪಕ್ಷ, ಸಪ್ತಮಿ, ಬುಧವಾರ, ನಿತ್ಯ ನಕ್ಷತ್ರ-ರೇವತಿ, ಯೋಗ-ಸಿದ್ಧಿ, ಕರಣ-ವಣಿಜೆ.

ರಾಹುಕಾಲಗುಳಿಕಕಾಲಯಮಗಂಡಕಾಲ
12.00-01.30 10.30-12.00 07.30-09.00

Read More

Back To Top