About Us Advertise with us Be a Reporter E-Paper

ಸಿನಿಮಾಸ್

ವಿಶ್ವದಾಖಲೆ ಚಿತ್ರಕ್ಕೆ ರಜನಿಕಾಂತ್‌ ಪ್ರಶಂಸೆ

ವಿಶ್ವದಲ್ಲೆ ಮೊಟ್ಟ ಮೊದಲಬಾರಿಗೆ ಐ-ಫೋನ್‌ದಲ್ಲಿ ಎರಡು ಗಂಟೆ ಹದಿನೆಂಟು ಸೆಕೆಂಡ್‌ಗಳಲ್ಲಿ ಚಿತ್ರಿತಗೊಂಡ ಸಿಂಗಲ್ ಶಾಟ್ ಚಿತ್ರ ‘ಸಹಿಷ್ಣು ’ ಗೋಲ್ಡನ್ ಬುಕ್ ಆಫ್ ವರ್ಲ್‌ಡ್ ರೆಕಾರ್ಡ್‌ಸ್ನಲ್ಲಿ ಸ್ಥಾನ ಪಡೆದಿದೆ. ಪ್ರಸ್ತುತ ಭಾರತದಲ್ಲಿ ಏನು ನಡೆಯುತ್ತಿದೆ?. ಮನುಷ್ಯನನ್ನು ಪ್ರೀತಿಸಿ. ವಿಶ್ವಪಥ ಎಂಬ ಕಲ್ಪನೆಯನ್ನು ತೆಗೆದುಕೊಳ್ಳಲಾಗಿದೆ. ಕತೆಯಲ್ಲಿ ನಕರಾತ್ಮಕ ಗುಣವುಳ್ಳವರು ಒಬ್ಬ ವಿಚಾರವಾದಿಯನ್ನು ಅಪಹರಿಸುತ್ತಾರೆ. ಅಲ್ಲಿಗೆ ಸಮಾಜಮುಖಿಯೊಬ್ಬರು ಭೇಟಿ ಮಾಡಿ ಪೆನ್ನು-ಗನ್ನು ನಡುವಿನ ವ್ಯತ್ಯಾಸ. ಪೆನ್ನು ಸರ್ವಶ್ರೇಷ್ಟ, ಅದೇ ಗನ್ನು ನಾಶ ಮಾಡುತ್ತೆ ಎಂಬ ಮಾತುಗಳನ್ನು ಹೇಳಿದಾಗ ಅವರುಗಳು ಮನಸ್ಸು ಬದಲಾಯಿಸಿ ಆತನನ್ನು ಅಲ್ಲಿಯೇ ಬಿಟ್ಟು ಹೋಗುತ್ತಾರೆ. ಪ್ರಕೃತಿ ನಾಶ ಮಾಡಿದರೆ ಮುನಿಸಿಕೊಳ್ಳುತ್ತೆ. ಇದರಿಂದ ಭವಿಷ್ಯದಲ್ಲಿ ತೊಂದರೆ ಅನುಭವಿಸಬೇಕಾಗುತ್ತದೆ. ಮರ ಗಿಡಗಳನ್ನು ನಾಶಮಾಡಿ ಹೋಟೆಲ್‌ಗಳನ್ನು ಕಟ್ಟಿಕೊಂಡಿದ್ದ ಮಡಕೇರಿಯಲ್ಲಿ ನಡೆದ ಅನಾಹುತ ಉದಾಹರಣೆಯಾಗಿದೆ. ಒಂದೇ ಟೇಕ್‌ದಲ್ಲಿ ತೆಗೆಯಬೇಕಾದ ಕಾರಣ ಸಾಕಷ್ಟು ತಾಲೀಮು ನಡೆಸಿ ಮೊಬೈಲ್ ಮುಂದೆ ಕಲಾವಿದರು ನಟನೆ ಮಾಡಿರುವುದು ಸಾಧನೆಯಾಗಿದೆ.

ಕತೆ, ಚಿತ್ರಕತೆ, ಸಂಭಾಷಣೆ, ನಿರ್ದೇಶನ, ನಿರ್ಮಾಣ ಹಾಗೂ ನಾಯಕನಾಗಿ ನಟಿಸಿರುವ ಡಾ.ಸಂಪತ್ ಹೇಳುವಂತೆ ಅರ್ಹತೆ ಆಧಾರದಂತೆ ವಿಶ್ವದಾಖಲೆಗೆ ಆಯ್ಕೆಯಾಗಿತ್ತು. ಅಲ್ಲಿಗೆ ಹೋಗಿ ಪಡೆಯಲು ಲಕ್ಷಾಂತರ ಖರ್ಚು ಆಗುತ್ತದೆ. ಇದಕ್ಕಾಗಿ ಹೆಸರು ಮಾಡಿರುವ ಸಾಧಕರಿಂದ ಪ್ರಮಾಣ ಪತ್ರ ಪಡೆಯಲು ಚಿಂತಿಸಿದೆ. ಆಗ ಕಣ್ಣ ಮುಂದೆ ಬಂದವರು ಕಾಲಿವುಡ್ ಸೂಪರ್ ಸ್ಟಾರ್ ರಜನಿಕಾಂತ್. ಆದರೆ ಅವರನ್ನು ಭೇಟಿ ಮಾಡುವುದು ಅಸಾಧ್ಯ. ಅವರು ವರ್ಷಕ್ಕೆ ಒಮ್ಮೆ ಮನ:ಶಾಂತಿಗಾಗಿ ಹಿಮಾಲಯಕ್ಕೆ ಹೋಗುತ್ತಾರೆಂಬ ಮಾಹಿತಿಯು ದೊರಕಿತು. ವಿಮಾನದ ಮೂಲಕ ಡೆಹರಡನ್ ತಲುಪಿ ಹೃಷಿಕೇಶ್‌ಗೆ ಹೋಗಲಾಯಿತು. ಅಲ್ಲಿಗೆ ಹೋದಾಗ ಸರ್ ಮಿಲ್ಟ್ರೀ ಕ್ಯಾಂಪಸ್ ಕೇಂದ್ರಸ್ಥಾನ ರಾಣಿಕೇತು ಎಂಬ ಸ್ಥಳದಲ್ಲಿ ಧ್ಯಾನದಲ್ಲಿ ಇರುತ್ತಾರೆಂದು ಹೇಳಿದರು. ಕೊನೆಗೂ ಕಷ್ಟಪಟ್ಟು ಸ್ಥಳಕ್ಕೆ ಭೇಟಿ ನೀಡಿ ಬೆಂಗಳೂರಿನಿಂದ ಬಂದವರೆಂದು ಮಾಹಿತಿದಾರರಿಗೆ ತಿಳಿಸಲಾಯಿತು. ಸರ್ ಸೋಜಿಗದಿಂದ ನನ್ನನ್ನು ಆತ್ಮೀಯವಾಗಿ ಬರಮಾಡಿಕೊಂಡು ಬಂದ ವಿಷಯವನ್ನು ಕೇಳಿದರು.

ಕಾರಣವನ್ನು ತಿಳಿಸಿದಾಗ, ಸಂತಸಗೊಂಡು ಐದು ನಿಮಿಷ ಚಿತ್ರದ ತುಣುಕುಗಳನ್ನು ವೀಕ್ಷಿಸಿದರು. ವಿದೇಶದಿಂದ ಬಂದ ಕವರ್‌ನ್ನು ತಾವೇ ಹರಿದು, ಅದರಲ್ಲಿದ್ದ ಪ್ರಮಾಣಪತ್ರವನ್ನು ನೀಡಿ, ಫಲಕವನ್ನು ಕುತ್ತಿಗಿಗೆ ಹಾಕಿ ಸಹಾಯಕನಿಗೆ ಚೆನ್ನಾಗಿ ಫೋಟೋ ತೆಗೆಯಲು ಹೇಳಿದರು. ಬೀಳ್ಕೋಡುವಾಗ ಮತ್ತೆ ಹೆಗಲ ಮೇಲೆ ಕೈ ಹಾಕುತ್ತಾ ಇನ್ನೆನಾದರೂ ಬೇಕಿತ್ತಾ ಅಂತ ಅಭಿಮಾನ ತೋರಿಸಿದರು. ನಿಮ್ಮ ಆರ್ಶಿವಾದ ಇದ್ದರೆ ಸಾಕು ಬೇರೆ ಏನು ಬೇಡ ಎಂದಾಗ ನಗುತ್ತಾ ಹೋಗಿಬನ್ನಿ ಒಳ್ಳೆಯದಾಗಲಿ ಅಂತ ಬಾಗಿಲ ತನಕ ಹರಿಸಿದರು. ಇವಿಷ್ಟು ನಡೆದ ಘಟನೆಯನ್ನು ಡಾ.ಸಂಪತ್ ಮಾದ್ಯಮದ ಮುಂದೆ ಸಾದ್ಯಂತದಿಂದ ನೆನಪುಗಳನ್ನು ಖುಷಿಯಿಂದ ಹಂಚಿಕೊಂಡಿದ್ದಾರೆ.

ಸೆನ್ಸಾರ್‌ನವರು ಎರಡು ಸೂಕ್ಷ ಅಂಶಗಳಿಗೆ ಕತ್ತರಿ ಹಾಕಿ ಯು ಪ್ರಮಾಣಪತ್ರ ನೀಡಿ ಶುಭ ಹಾರೈಸಿದ್ದಾರೆ. ಇದರ ಮಧ್ಯೆ ನಿರ್ದೇಶಕರು ಸಿನಿಮಾ ಮತ್ತು ಡಿಜಿಟೆಲ್ ಏರಾ ಕುರಿತ ವರದಿಯನ್ನು ಸಿದ್ದಗೊಳಿಸಿದ್ದರಿಂದ ಚಿನ್ನದ ಪದಕದೊಂದಿಗೆ ಪಿಹೆಚ್‌ಡಿ ಪದವಿಯನ್ನು ಪಡೆದು ಡಾಕ್ಟರೇಟ್ ಗೌರವಕ್ಕೆ ಪಾತ್ರರಾಗಿದ್ದಾರೆ. ಉಳಿದ ಪಾತ್ರದಲ್ಲಿ ಹಿರಿಯ ನಟ ವಿಶ್ವನಾಥ್, ಮೂವರು ರಂಗಭೂಮಿ ಕಲಾವಿದರಿಗೆ ಅವಕಾಶ ಇಷ್ಟೆಲ್ಲಾ ಹೆಸರು ಮಾಡಿರುವ ಸಿನಿಮಾವನ್ನು ಆದಷ್ಟು ಬೇಗನೆ ಜನರಿಗೆ ತೋರಿಸಲು ನಿರ್ಮಾಪಕರು ಯೋಜನೆ ಹಾಕಿಕೊಂಡಿದ್ದಾರೆ.

Tags

Related Articles

Leave a Reply

Your email address will not be published. Required fields are marked *

Language
Close