About Us Advertise with us Be a Reporter E-Paper

ಸಿನಿಮಾಸ್

ಕಾಲಬ್ರಹ್ಮದಲ್ಲಿ ಮನೋಹರವಾದ ಹಾಡುಗಳು

ನಾವುಗಳು ಔಟ್‌ಡೇಟಡ್ ಆಗಿಲ್ಲ ವಿ.ಮನೋಹರ್
ಇತ್ತೀಚೆಗೆ ಚಿತ್ರರಂಗಕ್ಕೆ ಹೊಸಬರು ಬರುತ್ತಿರುವುದು ಆರೋಗ್ಯಕರ ಬೆಳವಣಿಗೆ. ಆದರೆ ನಮ್ಮಂಥರನ್ನು ಹಳಬರು, ಔಟ್‌ಡೇಟೆಡ್ ಎಂದು ಅವಕಾಶಗಳನ್ನು ನೀಡಲು ನಿರಾಕರಿಸುತ್ತಾರೆ. ಮುಂದೆ ಫಲಿತಾಂಶ ಏನೆಂದು ತಿಳಿಯುತ್ತದೆ. ಕೆಲವರು ನಮ್ಮ ಚಿತ್ರ ಈ ರೀತಿ ಬರುತ್ತದೆ. ಸೂಪರ್ ಹಿಟ್ ಆಗಲಿದೆ ಅಂತ ಕೆಲಸವನ್ನು ಚೆನ್ನಾಗಿ ತೆಗೆಸಿಕೊಳ್ಳುತ್ತಾರೆ. ಸಿನಿಮಾ ನೋಡದಾಗ ಇಂಥ ಕೆಲಸ ಮಾಡಿದ್ದು ಹಾಳಾಯಿತಲ್ಲಾ ಎಂದು ಕೋಪ ಬರುತ್ತದೆ’ ಎಂದು ಹಿರಿಯ ಸಂಗೀತ ನಿರ್ದೇಶಕ ವಿ.ಮನೋಹರ್ ಬೇಸರವನ್ನು ಹೊರಹಾಕಿದರು. ಅವರು ಸಂಗೀತ, ಸಾಹಿತ್ಯ ಒದಗಿಸಿರುವ ಕಾಲಬ್ರಹ್ಮ ಸಿನಿಮಾದ ಆಡಿಯೋ ಸಿಡಿ ಬಿಡುಗಡೆ ಸಮಾರಂಭದಲ್ಲಿ ಮನಸ್ಸಿನಲ್ಲಿದ್ದ ಭಾವನೆಗಳನ್ನು ವ್ಯಕ್ತಪಡಿಸುತ್ತಿದ್ದರು. ಮಾತು ಮುಂದುವರೆಸುತ್ತಾ ಬೇರೆ ರಾಜ್ಯದಲ್ಲಿ ಸಾವಿರಾರು ಚಿತ್ರಮಂದಿರಗಳು ಇವೆ. ನಮ್ಮಲ್ಲಿ ಕೇವಲ 600 ಇದೆ. ವರ್ಷಕ್ಕೆ 200 ಕ್ಕೂ ಹೆಚ್ಚು ಸಿನಿಮಾಗಳು ಬಂದರೆ ಟಾಕೀಸು ಕೊರತೆ ಬರುತ್ತದೆ. ಇದಕ್ಕೆ ವಾಣಿಜ್ಯ ಮಂಡಳಿಯು ಹಾಕಬೇಕು. ಕನ್ನಡದಲ್ಲೂ ಯಾವ ಭಾಷೆಗೆ ಕಡಿಮೆ ಇಲ್ಲದಂತೆ ನಿರ್ದೇಶಕರು ಬರುತ್ತಿದ್ದಾರೆಂದು ಹೇಳಿದರು.

ಸೂರ್ಯವರ್ಧನ್ ಕತೆಯನ್ನು ಚಿತ್ರ ಮಾಡಬೇಕೆಂಬ ಬಯಕೆ ಉಂಟಾಯಿತು. ಇದಕ್ಕೆ ತಕ್ಕಂತೆ ನಿರ್ಮಾಪಕರು, ನಿರ್ದೇಶಕರು ಸಿಕ್ಕರು. ಅನಿವಾರ್ಯ ಕಾರಣದಿಂದ ಇಬ್ಬರು ಹಿಂದಕ್ಕೆ ಹೋದಾಗ ಅದರ ಜವಬ್ದಾರಿಯನ್ನು ತೆಗೆದುಕೊಳ್ಳಬೇಕಾಯಿತು. ಸಹ ಕಲಾವಿದನಾಗಿ ಸಾಕಷ್ಟು ಚಿತ್ರಗಳಲ್ಲಿ ಅಭಿನಯಿಸಿದ್ದೇನೆ. ದೊಡ್ಡಬಳ್ಳಾಪುರ, ಮುಳಬಾಗಿಲು, ಕೋಲಾರ ಕಡೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ತಾಯಿ ಮಗನ ಸಂಬಂದ ಮುಖ್ಯವಾಗಿ ಕತೆಯಲ್ಲಿ ಬರಲಿದೆ. ಮೂಡ ನಂಬಿಕೆ ವಿರುದ್ದ ಹೋರಾಡುವಾಗ ತಪ್ಪಿಗೆ ನಾನು ಬಲಿಪಶುಯಾಗ ಬೇಕಾಗುತ್ತದೆ. ಅಂತಹ ಸುಳಿಗೆ ಸಿಲುಕಿಕೊಂಡು ಹೇಗೆ ಹೂರಗೆ ಬರುತ್ತೆನೆಂಬ ಪಾತ್ರದಲ್ಲಿ ನಟಿಸಿದ್ದೇನೆಂದು ಚಿತ್ರಕತೆ ರಚಿಸಿ ನಾಯಕನಾಗಿ ಅಭಿನಯಿಸಿರುವ ಪ್ರತಾಪ್‌ನೆನಪು ವ್ಯಾಖ್ಯಾನವನ್ನು ಬಿಚ್ಚಿಟ್ಟರು.

ನಾಯಕನಿಗೆ ಪ್ರೋತ್ಸಾಹ ನೀಡುವ ಬೇಲೂರಿನ ಸಹನ ನಾಯಕಿ. ಮೂಕತಾಯಿಯಾಗಿ ರಂಜಿತಾ ಸೂರ್ಯವಂಶಿ ಪಾತ್ರದ ಪರಿಚಯ ಮಾಡಿಕೊಂಡರು. ಕರ್ನಾಟಕ ವಾಣಿಜ್ಯ ಮಂಡಳಿ ಅಧ್ಯಕ್ಷ ಎಸ್.ಎ.ಚಿನ್ನೆಗೌಡ, ಕಾರ್ಯದರ್ಶಿ ಬಾ.ಮಾ.ಹರೀಶ್, ಉಪಾಧ್ಯಕ್ಷ ಕರಿಸುಬ್ಬು ಮುಂತಾದವರು ತಂಡಕ್ಕೆ ಶುಭ ಹಾರೈಸಲು ಆಗಮಿಸಿದ್ದರು. ಇದೇ ಸಂದರ್ಭದಲ್ಲಿ ಚಿತ್ರದ ಮೇಕಿಂಗ್, ಹಾಡುಗಳನ್ನು ತೋರಿಸಲಾಯಿತು.

Tags

Related Articles

Leave a Reply

Your email address will not be published. Required fields are marked *

Language
Close