About Us Advertise with us Be a Reporter E-Paper

Breaking Newsಪ್ರಚಲಿತವಿದೇಶ

ಪ್ರಯಾಣಿಕರ ಆರೋಗ್ಯದಲ್ಲಿ ಏರುಪೇರಾದ: ತುರ್ತು ಭೂಸ್ಪರ್ಶ ಮಾಡಿದ ವಿಮಾನ

ಮಸ್ಕತ್‌: ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರ ಆರೋಗ್ಯದಲ್ಲಿ ಏರುಪೇರು ಉಂಟಾದ ಕಾರಣ ಮಸ್ಕತ್‌ನಿಂದ ಕೇರಳದ ಕೋಯಿಕ್ಕೋಡ್‌ಗೆ ಹೊರಟಿದ್ದ ಏರ್ ಇಂಡಿಯಾ ಎಕ್ಸ್‌‌ಪ್ರೆಸ್ ವಿಮಾನ ಮತ್ತೆ ಮಸ್ಕತ್ ವಿಮಾನ ನಿಲ್ದಾಣಕ್ಕೆ ಬಂದು ಇಳಿದ ಘಟನೆ ನಡೆದಿದೆ.

ಭಾನುವಾರ ಮಧ್ಯಾಹ್ನ ಈ ವಿಮಾನ ಮಸ್ಕತ್‌ನಿಂದ ಹೊರಟಿತ್ತು. ನಾಲ್ವರು ಪ್ರಯಾಣಿಕರಿಗೆ ಮೂಗಿನಲ್ಲಿ ರಕ್ತ ಸ್ರಾವ ಉಂಟಾಗಿದ್ದು, ಇನ್ನು ಕೆಲವರಿಗೆ ತೀವ್ರ ತಲೆನೋವು ಕಾಣಿಸಿಕೊಂಡಿತ್ತು. ಮಸ್ಕತ್ ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಿದ್ದಂತೆ ಪ್ರಯಾಣಿಕರನ್ನು ವೈದ್ಯರು ತಪಾಸಣೆ ನಡೆಸಿದರು. ವಿಳಂಬವಾಗಿ ಹೊರಟ ವಿಮಾನ ಸಂಜೆ ತಡವಾಗಿ ಕೋಯಿಕ್ಕೋಡ್ ತಲುಪಿತು. ಮಕ್ಕಳು ಸೇರಿದಂತೆ 185 ಪ್ರಯಾಣಿಕರು ಈ ವಿಮಾನದಲ್ಲಿದ್ದರು.

Tags

Related Articles

Leave a Reply

Your email address will not be published. Required fields are marked *

Language
Close