Breaking Newsದೇಶಪ್ರಚಲಿತ
ಸುಳ್ಳುಸುದ್ದಿ ಪತ್ತೆಗೆ ಫೆಸ್ಬುಕ್ ಸಮಿತಿ

ದೆಹಲಿ: ಕೆಲವೇ ವಾರಗಳಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಸುಳ್ಳುಸುದ್ದಿಗಳು ಹಬ್ಬುವುದನ್ನು ನಿಯಂತ್ರಿಸಲು ಮತ್ತು ಅಂತಹವುಗಳ ಪರಿಶೀಲನೆ ನಡೆಸಲು ಫೇಸ್ಬುಕ್ ಬಾಹ್ಯ ಸಂಸ್ಥೆಗಳ ನೆರವು ಪಡೆಯಲು ಮುಂದಾಗಿದೆ.
ಇಂಡಿಯಾ ಟುಡೇ ಗ್ರೂಪ್, ವಿಶ್ವಾಸ್ ಡಾಟ್ ನ್ಯೂಸ್, ನ್ಯೂಸ್ ಮೊಬೈಲ್, ಫ್ಯಾಕ್ಟ್ ಕ್ರೆಸೆಂಡೊ ಸಂಸ್ಥೆಗಳ ಜತೆ ಫೇಸ್ಬುಕ್ ಕೈಜೋಡಿಸಿದೆ. ಸ್ವತಂತ್ರವಾಗಿ ಕಾರ್ಯ ನಿರ್ವಹಿಸುವ ಈ ಸಂಸ್ಥೆಗಳು ಸತ್ಯಾಸತ್ಯತೆ ಪರಿಶೀಲನೆಯಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಮಾಣೀಕೃತ ಸಂಸ್ಥೆಗಳಾಗಿವೆ. ಸೋಮವಾರದಿಂದಲೇ ಕಾರ್ಯಾರಂಭ ಮಾಡಿರುವ ಈ ಸಂಸ್ಥೆಗಳು ಫೇಸ್ಬುಕ್ನಲ್ಲಿ ಪ್ರಕಟವಾಗುವ ಸುದ್ದಿಗಳನ್ನು ಪರಿಶೀಲನೆ ನಡೆಸಿ, ಅವುಗಳ ಸತ್ಯಾಸತ್ಯತೆಯ ಮಟ್ಟವನ್ನು ನಿಗಧಿಪಡಿಸಲಿವೆ’ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಇಂಗ್ಲಿಷ್, ಹಿಂದಿ, ಮರಾಠಿ, ಬಂಗಾಳಿ, ತೆಲುಗು, ಮಲಯಾಳಂ ಭಾಷೆಗಳಲ್ಲಿ ಪ್ರಕಟವಾಗುವ ಮಾಹಿತಿಗಳನ್ನೂ ಫೇಸ್ಬುಕ್ ಪರಿಶೀಲಿಸಲಾಗುತ್ತದೆ. ಫೊಟೊ ಮತ್ತು ವಿಡಿಯೊಗಳ ಸತ್ಯಾಸತ್ಯತೆ ಪರಿಶೀಲಿಸುವ ಕೆಲವು ಟೂಲ್ಗಳನ್ನು ಫೇಸ್ಬುಕ್ ಅಳವಡಿಸಿಕೊಂಡಿದೆ.