About Us Advertise with us Be a Reporter E-Paper

Breaking Newsದೇಶಪ್ರಚಲಿತ

ನಾಳೆ ಮತ್ತೆ ಇಡಿ ಮುಂದೆ ಹಾಜರಾಗಲಿರು ವಾದ್ರ

ಜೈಪುರ: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಸೋನಿಯಾ ಗಾಂಧಿ ಅವರ ಅಳಿಯ, ಉದ್ಯಮಿ ರಾಬರ್ಟ್ ವಾದ್ರಾ ಮತ್ತು ಅವರ ತಾಯಿ ಮೌರೀನ್ ವಾದ್ರಾ ಜೈಪುರದಲ್ಲಿ ನಾಳೆ ಮತ್ತೆ ಜಾರಿ ನಿರ್ದೇಶನಾಲಯದ ಮುಂದೆ ಹಾಜರಾಗಲಿದ್ದಾರೆ. ಇದಕ್ಕಾಗಿ ಇವರಿಬ್ಬರೂ ಸೋಮವಾರ ಮಧ್ಯಾನ್ಹ ಜೈಪುರಕ್ಕೆ ಆಗಮಿಸಿದ್ದಾರೆ.

ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅವರ ಪತಿಯೂ ಆಗಿರುವ ವಾದ್ರಾ ಅವರನ್ನು ಇಡಿ ಈಗಾಗಲೇ ಮೂರು ದಿನಗಳ ಕಾಲ ಸುಮಾರು 24 ಗಂಟೆಗಳ ವಿಚಾರಣೆ ನಡೆಸಿದೆ. ಲಂಡನ್‌ನಲ್ಲಿ ಸುಮಾರು 17 ಕೋಟಿ ರು.ಗಳ ಆಸ್ತಿ ಖರೀದಿಗಾಗಿ ಅಕ್ರಮ ಹಣ ವರ್ಗಾವಣೆ ನಡೆಸಿರುವ ಆರೋಪ ಇವರ ಮೇಲಿದೆ.

ಕಳದೆ ತಿಂಗಳು ರಾಜಸ್ಥಾನ ಹೈಕೋರ್ಟ್ ಇವರಿಬ್ಬರಿಗೂ ಇಡಿ ಮುಂದೆ ಹಾಜರಾಗಲು ಸೂಚಿಸಿತ್ತು. ಬಿಕನೇರ್‌ನಲ್ಲಿ ಸೇನೆಗೆ ಸೇರಿದ ಭೂಮಿಯನ್ನು ನಕಲಿ ದಾಖಲೆಗಳನ್ನು ಸೃಷ್ಟಿಸಿ ಕಡಿಮೆ ದರಕ್ಕೆ ಮಾರಾಟ ಮಾಡಲಾಗಿದೆ. ನಂತರ ಈ ಭೂಮಿಯನ್ನು ವಾದ್ರಾ ಒಡೆತನದ ಸ್ಕೈಲೈಟ್ ಹಾಸ್ಪಿಟಾಲಿಟಿ ಖರೀದಿಸಿದೆ. ಈ ಸಂದರ್ಭದಲ್ಲಿ ಅಕ್ರಮ ಹಣದ ವರ್ಗಾವಣೆ ನಡೆದಿದೆ ಎಂದು ಜಾರಿ ನಿರ್ದೇಶನಾಲಯ ಆರೋಪಿಸಿದೆ.

Tags

Related Articles

Leave a Reply

Your email address will not be published. Required fields are marked *

Language
Close