About Us Advertise with us Be a Reporter E-Paper

Breaking Newsಪ್ರಚಲಿತರಾಜ್ಯ

ಹಿಂದೂ ಧರ್ಮ ನಪುಂಸಕತನ ಬೋಧಿಸುವುದಿಲ್ಲ

ಶಿರಸಿ: ಹಿಂದೂ ಧರ್ಮ ನಪುಂಸಕತನ ಬೋಧಿಸುವುದಿಲ್ಲ. ಮೇಲ್ನೋಟಕ್ಕೆ ಧರ್ಮ ಅನ್ನುವ ಪದ ಯಾರಿಗೂ ಅರ್ಥವಾಗದು. ಜೀವನದ ಪದ್ಧತಿಯೇ ಧರ್ಮ. ಸಮೃದ್ಧವಾದ ಸಮಷ್ಠಿಯ ಧರ್ಮ ನಮ್ಮದು ಕೇಂದ್ರ ಕೌಶಲಾಭಿವೃದ್ಧಿ ಸಚಿವ ಅನಂತ ಕುಮಾರ್ ಹೆಗಡೆ ಹೇಳಿದರು.

ಕಾರ್ಯಕ್ರಮವೊಂದರಲ್ಲಿ ಮಾತನಾಡಿ, ಹಿಂದೂಗಳಿಗೆ ಹಲವಾರು ದೇವರಿದ್ದಾರೆ ಯಾಕೆ ಎನ್ನುವುದು ಮೂರ್ಖರ ಪ್ರಶ್ನೆ. ಸಂಸ್ಕೃತ ಕೇವಲ ದೇವರ ಪೂಜೆ ಮಾಡುವ ಮಂತ್ರವಲ್ಲ. ಒಂದು ಭಾಷೆ ಹಾಗೂ ಧರ್ಮಕ್ಕೆ ಸೀಮಿತವಲ್ಲ.

ಯೋಗ್ಯತೆ ಇರುವವರನ್ನು ಪೂಜಿಸುವ ಧರ್ಮ ನಮ್ಮದು. ಗೊಲ್ಲ ಕೃಷ್ಣ ನನ್ನೂ ಕ್ಷತ್ರಿಯ ರಾಮನನ್ನೂ ಪೂಜಿಸುವ ಧರ್ಮವೇ ನಮ್ಮದು. ನಮ್ಮ ವೇದವೇದಾಂಗ ರೂಪವೇ ಶಿವ. ಮಂಗಳಮಯವಾದ ಧನಾತ್ಮಕ ಶಕ್ತಿಯೇ ಶಿವ. ಕಾಲವನ್ನು ಯಾರೂ ಪ್ರಶ್ನೆ ಮಾಡಬಾರದು ಎಂದರು.

Tags

Related Articles

Leave a Reply

Your email address will not be published. Required fields are marked *

Language
Close