About Us Advertise with us Be a Reporter E-Paper

Breaking Newsದೇಶಪ್ರಚಲಿತ

ಲೋಕಸಭೆಯಲ್ಲೂ ಆಡಿಯೊ ವಿವಾದ

ದೆಹಲಿ: ಕರ್ನಾಟಕ ರಾಜ್ಯ ರಾಜಕೀಯದಲ್ಲಿ ಭಾರಿ ಸಂಚಲನ ಮೂಡಿಸಿರುವ ಆಪರೇಷನ್ ಕಮಲದ ಆಡಿಯೊ ಕ್ಲಿಪ್ ಪ್ರಕರಣ ಸೋಮವಾರ ಲೋಕಸಭೆಯಲ್ಲಿ ಸದ್ದು ಮಾಡಿತು.

ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ಕರ್ನಾಟಕದಲ್ಲಿನ ಆಪರೇಷನ್ ಕಮಲದ ವಿಷಯ ಪ್ರಸ್ತಾಪಿಸಿದರು. ನಂತರ ಲೋಕಸಭೆ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೂಡ ಈ ವಿಚಾರವಾಗಿ ಮಾತನಾಡಿ ಬಿಜೆಪಿ ವಿರುದ್ಧ ಹರಿಹಾಯ್ದರು.

ಮೊದಲು ಮಾತನಾಡಿದ ದೇವೇಗೌಡರು, ‘2009ರಲ್ಲಿ ಆಪರೇಷನ್ ಕಮಲ ಕರ್ನಾಟಕದಲ್ಲಿ ಆರಂಭವಾಯಿತು. ಆ ಒಂದು ಪ್ರಕ್ರಿಯೆ ನಡೆಯಬಾರದಿತ್ತು. ಆದರೂ ನಡೆಯಿತು. 10 ಸಚಿವರು ರಾಜೀನಾಮೆ ನೀಡಿದ ಪರಿಣಾಮ ಸರಕಾರ ಪತನವಾಯಿತು’ ಎಂದು ವಿವರಿಸಿದರು.

ಈ ಮಧ್ಯೆ ಮಾತನಾಡಿದ ಕೇಂದ್ರ ಸಚಿವ ಸದಾನಂದ ಗೌಡ, ‘ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವೆ ಭಿನ್ನಮತವಿದೆ. ಇವರು ತಮ್ಮ ಮನೆಗಳನ್ನು ಸರಿಯಾಗಿ ಸಂಭಾಳಿಸಲು ಸಾಧ್ಯವಾಗದೇ ಬಿಜೆಪಿ ಮೇಲೆ ವಿನಾಕಾರಣ ಆರೋಪ ಮಾಡುತ್ತಿದ್ದಾರೆ. ಖರ್ಗೆ ಹಾಗೂ ದೇವೇಗೌಡರು ಸುಳ್ಳು ಹೇಳುತ್ತಿದ್ದಾರೆ’ ಎಂದು ಪ್ರತಿವಾದ ಮಾಡಿದರು.

ಆಗ ಮಾತು ಆರಂಭಿಸಿದ ಮಲ್ಲಿಕಾರ್ಜುನ ಖರ್ಗೆ ಅವರು, ‘ಕರ್ನಾಟಕದಲ್ಲಿ ಗುರುಮಿಟ್ಕಲ್ ಶಾಸಕನಿಗೆ 50 ಕೋಟಿ ಹಣದ ಆಮಿಷ ನೀಡಲಾಗಿದೆ. ಈ ಕುರಿತ ಆಡಿಯೋ ಕೂಡ ಬಿಡುಗಡೆಯಾಗಿದೆ’ ಎಂದು ಹೇಳಿದಾಗ ಬಿಜೆಪಿ ನಾಯಕರು ಗದ್ದಲ ಎಬ್ಬಿಸಿದರು. ಈ ವೇಳೆ ಆಡಿಯೋದಲ್ಲಿ ಮಾತನಾಡಿರುವ ನಾಯಕನ ಹೆಸರು ಹೇಳಿದಾಗ ಸ್ಪೀಕರ್ ಅವರು ಆ ಹೆಸರನ್ನು ಕಡತಗಳಿಂದ ತೆಗೆಯುವಂತೆ ಸೂಚಿಸಿದರು. ನಂತರ ಖರ್ಗೆ ಅವರು ಆಡಿಯೋ ಕ್ಲಿಪ್‌ನ ಸಂಭಾಷಣೆಯನ್ನು ಸದನದಲ್ಲಿ ಓದಿದರು.

Tags

Related Articles

Leave a Reply

Your email address will not be published. Required fields are marked *

Language
Close