About Us Advertise with us Be a Reporter E-Paper

Breaking Newsಪ್ರಚಲಿತರಾಜ್ಯ

ಮಲ್ಲಿಕಾ ಘಂಟಿ ಅಧಿಕಾರಾವಧಿ ವಿಸ್ತರಣೆ

ಬೆಂಗಳೂರು: ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಮಲ್ಲಿಕಾ ಎಸ್. ಘಂಟಿ ಅವರ ಅಧಿಕಾರಾವಧಿಯನ್ನು ಮತ್ತೆ ಒಂದು ತಿಂಗಳು ವಿಸ್ತರಣೆಯಾಗಿದೆ.

ಫೆ.9ರಿಂದ ಜಾರಿಗೆ ಬರುವಂತೆ ಕುಲಪತಿ ಘಂಟಿ ಅವರ ಅಧಿಕಾರದ ಅವಧಿಯನ್ನು ಒಂದು ತಿಂಗಳು ವಿಸ್ತರಿಸಿ ರಾಜ್ಯಪಾಲರು ಆದೇಶಿಸಿದ್ದಾರೆ. ಸೋಮವಾರ ಮಧ್ಯಾಹ್ನ ಆದೇಶ ಪ್ರತಿ ಕೈ ಸೇರಿದೆ’ ಎಂದು ಕುಲಸಚಿವ ಅಶೋಕ ಕುಮಾರ ರಂಜೇರೆ ತಿಳಿಸಿದ್ದಾರೆ. ಈ ಮೂಲಕ ಮಲ್ಲಿಕಾ ಘಂಟಿ ಅವರ ಅಧಿಕಾರಾವಧಿ ಮೂರನೇ ಬಾರಿಗೆ ವಿಸ್ತರಣೆಗೊಂಡಿದೆ.

2018ರ ಸೆ.8ರಂದು ಘಂಟಿ ಅವರ ಅಧಿಕಾರಾವಧಿ ಪೂರ್ಣಗೊಂಡಿತ್ತು. ನಂತರ ರಾಜ್ಯಪಾಲರು ನಾಲ್ಕು ತಿಂಗಳವರೆಗೆ ವಿಸ್ತರಣೆ ಮಾಡಿದ್ದರು. ಅವಧಿ ಜ.7ರಂದು ಕೊನೆಗೊಂಡಿತ್ತು. ಮತ್ತೆ, ಜ.9ರಿಂದ ಅನ್ವಯವಾಗುವಂತೆ ಒಂದು ತಿಂಗಳ ಕಾಲ ಸೇವಾ ಅವಧಿ ವಿಸ್ತರಿಸಿ ರಾಜ್ಯಪಾಲರು ಆದೇಶಿಸಿದ್ದರು. ಎರಡನೇ ಬಾರಿಯ ವಿಸ್ತರಣೆ ಫೆ.8ಕ್ಕೆ ಕೊನೆಗೊಂಡಿತ್ತು. ಇದೀಗ ಮತ್ತೆ ಒಂದು ತಿಂಗಳೂ ವಿಸ್ತರಿಸಿ ರಜ್ಯಪಾಲರು ಆದೇಶಿಸಿದ್ದಾರೆ.

Tags

Related Articles

Leave a Reply

Your email address will not be published. Required fields are marked *

Language
Close