About Us Advertise with us Be a Reporter E-Paper

ಅಂಕಣಗಳು

ಈ ದುರಂತ ಹೇಯ

ವಿಶ್ವದಲ್ಲೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶಗಳಲ್ಲಿ ಒಂದಾಗಿರುವ ಭಾರತದಲ್ಲಿ, ಮನುಷ್ಯನ ಜೀವಕ್ಕೆ ಬೆಲೆ ಇಲ್ಲವೇ ಎಂಬ ಅನುಮಾನ ಆಗಾಗ ಮೂಡುವುದು ಸಹಜ. ಉತ್ತರ ಪ್ರದೇಶ ಮತ್ತು ಉತ್ತರಖಂಡ ರಾಜ್ಯಗಳಲ್ಲಿ ಕಳೆದ ವಾರ ನಡೆದ ಕಳ್ಳಭಟ್ಟಿ ದುರಂತದಲ್ಲಿ 116 ಜನ ಸತ್ತಿದ್ದು, ಪ್ರತಿದಿನ ಈಗಲೂ ನಾಲ್ಕಾರು ಮರಣದ ಸುದ್ದಿಗಳು ಬರುತ್ತಲೇ ಇರುವುದು ಭೀಕರ ಎನಿಸಿದೆ. ಸಮಾರಂಭವೊಂದರಲ್ಲಿ ಮದ್ಯ ಸೇವಿಸಿದವರ ಪೈಕಿ ಇನ್ನೂರಕ್ಕೂ ಹೆಚ್ಚು ಜನರು ದಾರುಣವಾಗಿ ಮೃತ ಪಟ್ಟಿದ್ದು, ಕಳ್ಳಬಟ್ಟಿ ಸೇವನೆಯ ಭಾರಿ ದುರಂತಕ್ಕೆ ಈ ಎರಡು ರಾಜ್ಯಗಳು ಸಾಕ್ಷಿಯಾಗಿವೆ.

The dead man’s body. Focus on hand

ಈ ನಡುವೆ ಈ ಭೀಕರ ದುರ್ಘಟನೆಯು ರಾಜಕೀಯ ಕೆಸರಾಟಕ್ಕೆ ದಾರಿ ಮಾಡಿಕೊಟ್ಟಿರುವುದು ಒಂದು ವಿಪರ್ಯಾಸ. ನೂರಕ್ಕೂ ಹೆಚ್ಚು ಜನರು ಸತ್ತಿದ್ದು, ಇನ್ನೂ ಹಲವು ಜನರು ಆಸ್ಪತ್ರೆಯಲ್ಲಿ ಜೀವನ ಮತ್ತು ಮರಣಗಳ ನಡುವೆ ಹೋರಾಡುತ್ತಿರುವಾಗಲೇ, ಆಡಳಿತ ಪಕ್ಷ ಮತ್ತು ಪ್ರತಿಪಕ್ಷಗಳು ಪರಸ್ಪರ ಆರೋಪ ನಡೆಸುತ್ತಿರುವುದು ಸಮಂಜಸ ಎನಿಸುತ್ತಿಲ್ಲ. ದುರಂತಕ್ಕೆ ಕಾರಣವಾದ ಕಳ್ಳಬಟ್ಟಿಯು ಬಿಹಾರದಿಂದ ಸರಬರಾಜು ಆಗಿರಬಹುದು, ಅದನ್ನು ಸರಬರಾಜು ಮಾಡಿದ ವ್ಯಕ್ತಿಯ ಹಿನ್ನೆಲೆ ಇಂಥದ್ದೇ ಇರಬಹುದು, ತಪ್ಪು ಮಾಡಿದ ಯಾರನ್ನೇ ಆಗಲಿ, ಅವರು ಯಾವ ಪಕ್ಷದವರೇ ಆಗಿರಲಿ, ಅವರನ್ನು ಹಿಡಿದು ಶಿಕ್ಷಿಿಸಲಾಗುವುದು ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಹೇಳಿದರು. ಇದಕ್ಕೆ ಪ್ರತಿಯಾಗಿ, ಅಲ್ಲಿನ ವಿರೋಧಪಕ್ಷಗಳು ಮುಖ್ಯಮಂತ್ರಿಗಳೇ ಈ ದುರಂತಕ್ಕೆ ಹೊಣೆಯಾಗಿದ್ದು ಅವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕೆಂದು ಒತ್ತಾಯಿಸಲು ಆರಂಭಿಸಿದ್ದಾರೆ.

ಈ ರೀತಿಯ ಆರೋಪ ಪ್ರತ್ಯಾಾರೋಪಗಳ ಆರ್ಭಟದ ಬದಲು, ಈ ಘಟನೆಗೆ ನಿಜವಾದ ಕಾರಣವನ್ನು ಹುಡುಕುವುದು ಮತ್ತು ಅಂತಹ ಘಟನೆಗಳು ದೇಶದ ಯಾವುದೇ ಭಾಗದಲ್ಲಿ ಮರುಕಳಿಸದಂತೆ ಕ್ರಮ ಕೈಗೊಳ್ಳುವುದು ಇಂದಿನ ಆದ್ಯತೆ. ಸಾವಿರಾರು ಜನರು ಸೇವಿಸುವಷ್ಟು ಮದ್ಯವನ್ನು ತಯಾರಿಸುವ ಸಾಮರ್ಥ್ಯವನ್ನು ಮತ್ತು ಅದನ್ನು ರಾಜಾರೋಷವಾಗಿ ಸರಬರಾಜು ಮಾಡುವ ದಾರ್ಷ್ಟ್ಯವನ್ನು ‘ಕಳ್ಳಭಟ್ಟಿ ಉದ್ಯಮ’ ಹೊಂದಿದೆ ಎನ್ನುವ ವಿಚಾರವೇ ಗಾಬರಿ ಹುಟ್ಟಿಸುತ್ತಿದೆ. ಕಳ್ಳಭಟ್ಟಿಯನ್ನು ನಿಯಂತ್ರಿಸಲು ಇರುವ ಕಾನೂನಿನ ಕಣ್ಣು ತಪ್ಪಿಿಸಿ ಇಂತಹ ಚಟುವಟಿಗಳು ಆಗಾಗ ನಡೆಯುತ್ತಲೇ ಇದ್ದು, ಈ ರೀತಿಯ ದುರಂತಗಳಿಗೆ ಕಾರಣವಾಗುತ್ತಿದೆ ಎಂಬ ವಿಚಾರ ಹೇಯ ಮತ್ತು ನಾಚಿಕೆ ಹುಟ್ಟಿಸುವಂತಹದ್ದು. ಮೇ 2008ರಲ್ಲಿ ಬೆಂಗಳೂರು, ಕೋಲಾರ ಮತ್ತು ಕೃಷ್ಣಗಿರಿ ಜಿಲ್ಲೆಗಳಲ್ಲಿ ಕಳ್ಳಭಟ್ಟಿ ಸೇವಿಸಿ 180 ಕ್ಕೂ ಹೆಚ್ಚು ಜನರು ಮೃತರಾದ ಘಟನೆಯೂ ಕಹಿ ನೆನಪಾಗಿ ಉಳಿದಿದೆ.

ಕಳ್ಳಭಟ್ಟಿ ಸೇವನೆಯಿಂದ ಇಂತಹ ದುರ್ಘಟನೆಗಳು ನಮ್ಮ ದೇಶದಲ್ಲಿ ಮರುಕಳಿಸದಂತೆ ಎಚ್ಚರ ವಹಿಸುವುದು ಕಾನೂನು ಪಾಲಕರ ಮತ್ತು ಅಧಿಕಾರ ಹಿಡಿದಿರುವವರ ಆದ್ಯತೆಯಾಗಬೇಕು ಎಂಬುದರಲ್ಲಿ ಎರಡು ಮಾತಿಲ್ಲ.

Tags

Related Articles

Leave a Reply

Your email address will not be published. Required fields are marked *

Language
Close