About Us Advertise with us Be a Reporter E-Paper

Breaking Newsದೇಶಪ್ರಚಲಿತ

ಅಗಸ್ಟಾ ವೆಸ್ಟ್‌‌ಲ್ಯಾಂಡ್: ಸಕ್ಸೇನಾ ನ್ಯಾಯಾಂಗ ವಶಕ್ಕೆ

ದೆಹಲಿ: ಅಗಸ್ಟಾ ವೆಸ್ಟ್‌‌ಲ್ಯಾಂಡ್ ವಿವಿಐಪಿ ಹೆಲಿಕಾಪ್ಟರ್ ಖರೀದಿ ಹಗರಣದ ಆರೋಪಿ ರಾಜೀವ್ ಸಕ್ಸೇನಾರನ್ನು ಫೆ.18ರವರೆಗೆ ನ್ಯಾಯಾಂಗ ವಶಕ್ಕೆ ಒಪ್ಪಿಸಿ ದೆಹಲಿ ಪಾಟಿಯಾಲ ಹೌಸ್ ಕೋರ್ಟ್ ಮಂಗಳವಾರ ಆದೇಶ ನೀಡಿದೆ.

ಏಮ್ಸ್ ನೀಡಿರುವ ರಾಜೀವ ಸಕ್ಸೇನಾರ ವೈದ್ಯಕೀಯ ವರದಿಯನ್ನು ಬುಧವಾರ ಪರಿಶೀಲಿಸುವುದಾಗಿ ನ್ಯಾಯಾಲಯ ತಿಳಿಸಿದೆ. ಈ ಹಗರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ರಾಜೀವ್ ಸಕ್ಸೇನಾ ಮತ್ತು ದೀಪಕ್ ತಲ್ವಾರ್ ಅವರನ್ನು ದುಬೈನಿಂದ ಜ.31ರಂದು ದೆಹಲಿಗೆ ಕರೆತರಲಾಗಿತ್ತು.

ಜಾರಿ ನಿರ್ದೇಶನಾಯಲದ ಅಧಿಕಾರಿಗಳ ತಂಡ, ವಿದೇಶಾಂಗ ಸಚಿವಾಲಯದ ಅಧಿಕಾರಿಗಳು ಹಾಗೂ ರಿಸರ್ಚ್ ಆ್ಯಂಡ್ ಅನಾಲಿಸಿಸ್ ವಿಂಗ್(ರಾ) ಅಧಿಕಾರಿಗಳ ತಂಡ ವಿಶೇಷ ವಿಮಾನದಲ್ಲಿ ಯುಎಇಯಿಂದ ಆರೋಪಿಗಳನ್ನು ಕರೆತಂದಿತ್ತು ₹3,600 ಕೋಟಿ ಮೌಲ್ಯದ ವಿವಿಐಪಿ ಹೆಲಿಕಾಪ್ಟರ್ ಹಗರಣದ ಪ್ರಮುಖ ಆರೋಪಿ ಕ್ರಿಶ್ಚಿಯನ್ ಮಿಷೆಲ್‌ನನ್ನು ಡಿಸೆಂಬರ್‌ನಲ್ಲಿ ದುಬೈನಿಂದ ಭಾರತಕ್ಕೆ ಗಡಿಪಾರು ಮಾಡಲಾಗಿತ್ತು.

ಫೆ. 27ರ ವರೆಗೆ ಮಿಷೆಲ್‌ನನ್ನು ದೆಹಲಿ ನ್ಯಾಯಾಲಯ ನ್ಯಾಯಾಂಗ ವಶಕ್ಕೆ ಒಪ್ಪಿಸಿದೆ. ದುಬೈನ ಐಷಾರಾಮಿ ದ್ವೀಪ ಪಾಮ್ ಜುಮಿರಾದಲ್ಲಿ ನೆಲೆಸಿದ್ದ ಲೆಕ್ಕ ಪರಿಶೋಧಕ ರಾಜೀವ್ ಸಕ್ಸೇನಾಗೆ ಹೆಲಿಕಾಪ್ಟರ್ ಖರೀದಿ ಪ್ರಕರಣದ ತನಿಖೆಯಲ್ಲಿ ವಿಚಾರಣೆಗೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯ(ಇಡಿ) ಹಲವು ಬಾರಿ ಸಮನ್ಸ್‌ ಜಾರಿ ಮಾಡಿತ್ತು. ಆದರೆ ರಾಜೀವ್ ತನಿಖೆಗೆ ಹಾಜರಾಗದೆ ಅಸಹಕಾರ ತೋರಿದ್ದರು.

ಈ ನಿಟ್ಟಟಿನಲ್ಲಿ ತನಿಖಾ ಸಂಸ್ಥೆ ರಾಜೀವ್ ವಿರುದ್ಧ ಜಾಮೀನು ರಹಿತ ವಾರಂಟ್ ಜಾರಿ ಮಾಡಿತ್ತು. ರಾಜೀವ್ ಸಕ್ಸೇನಾ, ಆತನ ಪತ್ನಿ ಶಿವಾನಿ ಸಕ್ಸೇನಾ ಹಾಗೂ ಅವರಿಗೆ ಸೇರಿದ ದುಬೈ ಮೂಲದ ಸಂಸ್ಥೆಗಳ ಮೂಲಕ ಆರ್ಥಿಕ ಅಪರಾಧಗಳನ್ನು ಎಸಗಿದ್ದಾರೆ ಎಂದು ಇಡಿ ಆರೋಪಿಸಿದೆ. 2017ರಲ್ಲಿ ಚೆನ್ನೈ ವಿಮಾನ ನಿಲ್ದಾಣದಲ್ಲಿ ಶಿವಾನಿ ಸಕ್ಸೇನಾ ಅವರನ್ನು ಬಂಧಿಸಲಾಗಿತ್ತು.

ಪ್ರಸ್ತುತ ಅವರು ಜಾಮೀನಿನ ಮೇಲೆ ಹೊರಗಿದ್ದಾರೆ.  ಪ್ರಧಾನಿ, ಮಾಜಿ ಪ್ರಧಾನಿ, ರಾಷ್ಟ್ರಪತಿ ಹಾಗೂ ಇತರೆ ಗಣ್ಯರ ಪ್ರಯಾಣಕ್ಕಾಗಿ 12 ಐಷಾರಾಮಿ ಹೆಲಿಕಾಪ್ಟರ್‌ಗಳ ಖರೀದಿಗೆ ಯುಪಿಎ ಅವಧಿಯಲ್ಲಿ ಡಾ. ಮನಮೋಹನ್ ಸಿಂಗ್ ನೇತೃತ್ವದ ಕಾಂಗ್ರೆಸ್ ಮೈತ್ರಿ ಸರಕಾರದಲ್ಲಿ ಒಪ್ಪಂದ ಮಾಡಿಕೊಳ್ಳಲಾಗಿತ್ತು.

ಇಟಲಿಯಲ್ಲಿ ಅಗಸ್ಟಾ ವೆಸ್ಟ್‌‌ಲ್ಯಾಂಡ್ ಮಾತೃ ಸಂಸ್ಥೆ ಫಿನ್ಮೆಕಾನಿಕಾ ಮೇಲೆ ಲಂಚದ ಆರೋಪ ಕೇಳಿಬರುತ್ತಿದ್ದಂತೆ 2014ರಲ್ಲಿ ಭಾರತ ಸರಕಾರ ಹೆಲಿಕಾಪ್ಟರ್ ಖರೀದಿ ಒಪ್ಪಂದವನ್ನು ರದ್ದುಗೊಳಿಸಿತ್ತು. ಇದೇ ಪ್ರಕರಣದಲ್ಲಿ ಇತ್ತೀಚೆಗೆ ವಕೀಲ ಗೌತಮ್ ಖೈತಾನ್ ಅವರನ್ನು ಜಾರಿ ನಿರ್ದೇಶನಾಲಯ ಬಂಧಿಸಿತ್ತು.ಈತ ಕಪ್ಪು ಹಣ ಹೊಂದಿರುವ ಮತ್ತು ಅಕ್ರಮ ಹಣ ವರ್ಗಾವಣೆ (ಪಿಎಂಎಲ್ಎ) ಆರೋಪ ಎದುರಿಸುತ್ತಿದ್ದಾನೆ.

Tags

Related Articles

Leave a Reply

Your email address will not be published. Required fields are marked *

Language
Close