About Us Advertise with us Be a Reporter E-Paper

Breaking Newsದೇಶಪ್ರಚಲಿತ

ಅನಿವಾಸಿಗಳಿಗೆ ವಿವಾಹ ನೊಂದಣಿ ಕಡ್ಡಾಯ: ಸುಷ್ಮಾ ಸ್ವರಾಜ್

ದೆಹಲಿ: ಭಾರತದಲ್ಲಿ ವಾಸವಿರುವ ಅನಿವಾಸಿಗಳು ಭಾರತೀಯ ಪೌರತ್ವ ಹೊಂದಿದ್ದದಾದರೆ ಅಂತಹ ವ್ಯಕ್ತಿಗಳು ವಿವಾಹ ನೊಂದಣಿ ಮಾಡಿಸುವುದು ಕಡ್ಡಾಯವಾಗಲಿದೆ ಎಂದು ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಹೇಳಿದರು.

ಅನಿವಾಸಿ ಭಾರತೀಯರು ತಾವು ವಿವಾಹವಾಗಿ 30 ದಿನಗಳಲ್ಲಿ ವಿವಾಹ ನೊಂದಣಿ ಮಾಡಿಸದೆ ಹೋದರೆ ಅವರ ಪಾಸ್ ಪೋರ್ಟ್‌ಗಳನ್ನು ಹಿಂಪಡೆಯುವುದಕ್ಕೆ ಕಠಿಣ ಕ್ರಮ ಕೈಗೊಳ್ಳುವದಕ್ಕೆ ಅವಕಾಶವಿದೆ. ಈ ಮಸೂದೆ ಮುಂಬರುವ ಸೋಮವಾರ ರಾಜ್ಯಸಭೆಯಲ್ಲಿ ಮಂಡನೆ ಆಗಲಿದೆ.

ಅನಿವಾಸಿ ಭಾರತೀಯ ವಿವಾಹ ನೋಂದಣಿ ಕಾಯ್ದೆಯ ಪ್ರಮುಖ ಅಂಶಗಳು:
* ಅನಿವಾಸಿಗಳು ಕಾನೂನಿಗೆ ವಿರುದ್ಧವಾಗಿ ನಡೆದುಕೊಂಡಲ್ಲಿ ಅವರ ಚರ ಸ್ಥಿರ ಆಸ್ತಿಗಳನ್ನು ವಶಕೆ ಪಡೆಯಲು ನ್ಯಾಯಾಲಯಕ್ಕೆ ಅವಕಾಶ ಕಲ್ಪಿಸುತ್ತದೆ. ಅಲ್ಲದೆ ಅವರು ಘೋಷಿತ ಅಪರಾಧಿಗಳು ಎಂದು ಘೋಷಿಸಲ್ಪಡುವರು.
*ಕರಡು ಕಾನೂನಿನನ್ವಯ ನ್ಯಾಯಾಲಯಗಳು ಹಾಗೂ ವಿದೇಶಾಂಗ ವ್ಯವಹಾರಗಳ ಸಚಿವಾಲಯಗೊತ್ತುಪಡಿಸಿದ ವೆಬ್ ಸೈಟ್ ಮೂಲಕ ಆರೋಪಿಗಳಿಗೆ ಸಮನ್ಸ್‌ ಮತ್ತು ವಾರೆಂಟ್‌ಗಳನ್ನು ಕಳುಹಿಸಲು ಅವಕಾಶವಿದೆ.
*ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಮೇಲ್ಮನೆಯಲ್ಲಿ ಈ ಮಸೂದೆಯ ಕುರಿತು ತಿಳಿಸಿದ್ದಾರೆ. ಅನಿವಾಸಿ ಭಾರತೀಯರು ಭಾರತೀಯ ಯುವತಿಯರನ್ನು ಮೋಸದಿಂದ ವಿವಾಹವಾಗುವುದನ್ನು ತಪ್ಪಿಸಲು ಅಗತ್ಯ ಕ್ರಮವಾಗುತ್ತದೆ.
*ಮಸೂದೆ ಪ್ರಕಾರ ಅಧಿಕಾರಿಗಳು ಪಾಸ್ ಪೋರ್ಟ್ ಅಥವಾ ಆರೋಪಿಯ ಇನ್ನಾವುದೇ ಪ್ರಯಾಣದ ದಾಖಲೆಗಳನ್ನು ರದ್ದುಗೊಳಿಸಲು ಅಥವಾ ಅನುಮತಿ ನಿರಾಕರಿಸಲು ಪಾಸ್‌ಪೋರ್ಟ್ ಆಕ್‌ಟ್‌ ಹಾಗೂ ಕ್ರಿಮಿನಲ್ ವಿಧಿಯನ್ನು ತಿದ್ದುಪಡಿ ಮಾಡಲಾಗುವುದು.
*ನ್ಯಾಯಾಲಯಗಳು ಅವರ ಆಸ್ತಿಗಳನ್ನು ವಶಕ್ಕೆ ಪಡೆಯಲು ಅವಕಾಶ ಕಲ್ಪಿಸಿಕೊಡಲಾಗುವುದು. ಒಬ್ಬ ಭಾರತೀಯ ನಾಗರಿಕನನ್ನು ಮದುವೆಯಾಗಿದ್ದರೆ, ಸ್ಥಳೀಯ ಕಾನೂನಿನ ಪ್ರಕಾರ ಮದುವೆ ನೋಂದಾಯಿಸಿಕೊಳ್ಳಬೇಕು ಎಂದು ಈ ಮಸೂದೆ ತಿಳಿಸುತ್ತದೆ.
*ಮದುವೆ ವಿದೇಶದಲ್ಲಿ ನಡೆಯುವುದಾದರೆ, ವಿದೇಶಿ ರಾಷ್ಟ್ರಗಳಲ್ಲಿ ನೇಮಕವಾಗಿರುವ ಗೊತ್ತಾದ ಅಧಿಕಾರಿಗಳಲ್ಲಿ ಅದರ ನೋಂದಣಿ ಆಗಬೇಕು. ಪ್ರಸ್ತಾಪಿತ ಕಾನೂನು ಭಾರತೀಯ ಮಹಿಳೆಯರಿಗೆ ಭಾರತದ ಒಳಗೆ ಅಥವಾ ಹೊರಗೆ ಮದುವೆಯಾಗುತ್ತಿರುವ ಎನ್‌ಆರ್‌ಐ ಗಳಿಗೆ ಅನ್ವಯಿಸುತ್ತದೆ.

ಅನಿವಾಸಿ ಭಾರತೀಯರ ಮೇಲಿರುವ ದೂರುಗಳು
ಎನ್‌ಆರ್‌ಐ ಪುರುಷರು ತಮ್ಮ ಮಡದಿಯನ್ನು ವಿದೇಶಕ್ಕೆ ಕರೆದೊಯ್ದು ಅಲ್ಲಿ ಕೈಬಿಡುವ ಪ್ರಕರಣಗಳು ಸಾಕಷ್ಟು ಸಂಖ್ಯೆಯಲ್ಲಿ ನಡೆಯುತ್ತಿದೆ. ಗಂಡಂದಿರು ತಮ್ಮ ಹೆಂಡತಿಯನ್ನು ಮಾನಸಿಕ ಮತ್ತು ದೈಹಿಕ ಹಿಂಸೆಗೆ ಗುರಿಪಡಿಸುತ್ತಾರೆ. ಈ ಸಂಬಂಧ ಅನೇಕ ದೂರುಗಳನ್ನು ವಿದೇಶಾಂಗ ಸಚಿವಾಲಯ ಸ್ವೀಕರಿಸಿದೆ ಎಂದು ವಿದೇಶಾಂಗ ಕೇಂದ್ರ ತಿಳಿಸಿದೆ.

ಅನಿವಾಸಿ ಭಾರತೀಯ ಪತಿಯನ್ನು ಬಿಟ್ಟ ಭಾರತೀಯ ಮಹಿಳೆಯರ ಸಂಖ್ಯೆೆ 2015 ಜನವರಿಯಿಂದ 2017 ನವೆಂಬರ್‌ವರೆಗೆ 3,328 ಹೆಚ್ಚಾಗಿದೆ. ಭಾರತೀಯ ಮಹಿಳೆಯರು ತಮ್ಮ ಅನಿವಾಸಿ ಪತಿಯಿಂದ ಬೇರಾಗಿರುವ, ಕಿರುಕುಳಕ್ಕೀಡಾಗಿರುವ ಅನೇಕ ದೂರು ಬಂದ ಹಿನ್ನೆಲೆಯಲ್ಲಿ ಈ ಮಸೂದೆ ಜಾರಿ ಅನಿವಾರ್ಯವಾಗಿದೆ ಎಂದು ಸುಷ್ಮಾ ಸ್ವರಾಜ್ ತಿಳಿಸಿದ್ದಾರೆ.

Tags

Related Articles

Leave a Reply

Your email address will not be published. Required fields are marked *

Language
Close