About Us Advertise with us Be a Reporter E-Paper

Breaking Newsಪ್ರಚಲಿತರಾಜ್ಯ

ಬಿಜೆಪಿ, ಆರ್‌ಎಸ್‌ಎಸ್ ಪರಿವಾರ ಸಂವಿಧಾನ ವಿರೋಧಿಗಳು

ಹುಬ್ಬಳ್ಳಿ: ಬಿಜೆಪಿ ಹಾಗೂ ಆರ್‌ಎಸ್‌ಎಸ್ ಪರಿವಾರ ಸಂವಿಧಾನ ವಿರೋಧಿಯಾಗಿದೆ. ಸಂವಿಧಾನ ತಿದ್ದುವ ಹಾಗೂ ಸುಡುವ ಕೆಟ್ಟ ಮನಸ್ಥಿತಿ ಕೇವಲ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಅವರಲ್ಲಿ ಅಷ್ಟೇ ಅಲ್ಲದೆ, ಬಿಜೆಪಿ ಸಂಘ ಪರಿವಾರದವರೆಲ್ಲರೂ ಅನಂತನ ಮನಸ್ಥಿತಿ ಹೊಂದಿದವರೇ ಆಗಿದ್ದಾರೆ ಎಂದು ಕೆಪಿಸಿಸಿ ಪ.ಜಾತಿ, ಪ.ಪಂಗಡದ ರಾಜ್ಯಾಟಧ್ಯಕ್ಷ ಎಫ್.ಎಚ್.ಜಕ್ಕಪ್ಪನವರ ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೇಂದ್ರದ ಜುಟ್ಟು ಆರ್‌ಎಸ್‌ಎಸ್ ಬಳಿ ಎನ್ನುವುದಕ್ಕೆ ಕೇಂದ್ರ ಸರಕಾರ ಸಂವಿಧಾನದ ಕಲಂ 46ರಂತೆ ಆಡಳಿತ ನಡೆಸದಿರುವುದೇ ಸಾಕ್ಷಿಯಂತಿದೆ. ಕೇಂದ್ರ ಸರಕಾರ ಎಲ್ಲ ಕಡೆ ದಲಿತ ವಿರೋಧಿ ನೀತಿ ಅನುಸರಿಸುತ್ತಿದೆ.

ದಲಿತರಿಗೆ ನ್ಯಾಯ ಒದಗಿಸುವಲ್ಲಿ ಪ್ರಧಾನಿ ಮೋದಿ ಅವರು ಪ್ರಾಮಾಣಿಕ ಪ್ರಯತ್ನ ಮಾಡುತ್ತಿಲ್ಲ ಎಂದು ಆರೋಪಿಸಿದರು. ದೇಶದಲ್ಲಿರುವ 18 ಕೋಟಿ ಪರಿಶಿಷ್ಟ ಜನಾಂಗಕ್ಕೆ ರು. 76,801 ಕೋಟಿ ಬಜೆಟ್ ನೀಡಿದ್ದಾರೆ. ಆದರೆ ಈ ಹಿಂದಿನ ಯುಪಿಎ ಸರಕಾರ 80,000 ಕೋಟಿ ನೀಡಿತ್ತು ಎಂದರು.

Tags

Related Articles

Leave a Reply

Your email address will not be published. Required fields are marked *

Language
Close