About Us Advertise with us Be a Reporter E-Paper

Breaking Newsದೇಶಪ್ರಚಲಿತ

ಅಣ್ಣನಿಗೆ ಮದುವೆಯಾಗಿಲ್ಲ ಅದಕ್ಕೆ ತಂಗಿ ಆಗಮನ: ಶಾ

ಅಹಮದಾಬಾದ್: ಕಾಂಗ್ರೆಸ್‌ನಲ್ಲಿ ಒಂದು ಕುಟುಂಬಕ್ಕೆ ಮಾತ್ರ ಪ್ರಧಾನಮಂತ್ರಿ ಹುದ್ದೆೆ ಮೀಸಲಿಡಲಾಗಿದೆ. ಹೀಗಾಗಿ ಸಹೋದರನಿಗೆ ಮದುವೆಯಾಗಿಲ್ಲ ಎಂದು ಸಹೋದರಿ ಅಖಾಡಕ್ಕೆ ಇಳಿದಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಟೀಕಿಸಿದ್ದಾರೆ.

ಗುಜರಾತಿನಲ್ಲಿ ಪಕ್ಷದ ‘ಮೇರಾ ಪರಿವಾರ್ ಭಾಜಪ ಪರಿವಾರ್’ (ನನ್ನ ಕುಟುಂಬ ಬಿಜೆಪಿ ಕುಟುಂಬ) ಕಾರ್ಯಕ್ರಮಕ್ಕೆ ಚಾಲನೆ ನೀಡಿ ಕಾರ್ಯಕರ್ತರನ್ನು ಉದ್ದೇಶಿ ಮಾತನಾಡಿದ ಅಮಿತ್ ಶಾ, ಇತ್ತೀಚೆಗೆ ರಾಜಕೀಯಕ್ಕೆ ಪ್ರಿಯಾಂಕ ಗಾಂಧಿ ಅವರ ರಾಜಕೀಯ ಪ್ರವೇಶವನ್ನು ಟೀಕಿಸಿದ್ದಾರೆ.

‘ಜಾಗತಿಕ ಮಟ್ಟದಲ್ಲಿ ಭಾರತ ಶಕ್ತಿಶಾಲಿ ರಾಷ್ಟ್ರವಾಗಿ ಬೆಳೆಯುವ ನಿಟ್ಟಿನಲ್ಲಿ ಮುಂಬರುವ ಲೋಕಸಭಾ ಚುನಾವಣೆ ಮಹತ್ವದ್ದಾಗಿದೆ. ನಾನು ರಾಷ್ಟ್ರದ ಯಾವುದೇ ಪ್ರದೇಶಕ್ಕೆ ಪ್ರವಾಸ ಮಾಡಿದಾಗಲೂ ಅಲ್ಲಿನ ಜನರ ಕಣ್ಣಲ್ಲಿ ಮೋದಿ ಬಗೆಗಿನ ಪ್ರೀತಿ ಎದ್ದು ಕಾಣುತ್ತಿದೆ. ವಿರೋಧ ಪಕ್ಷಗಳ ಮಹಾಗಠಬಂಧನ ಪ್ರದೇಶಿಕ ಪಕ್ಷಗಳ ಮೈತ್ರಿಯಾಗಿದ್ದು, ಇದು ಬಿಜೆಪಿ ಮತಕ್ಕೆ ಅಡ್ಡಿಯಾಗುವುದಿಲ್ಲ’ ಎಂದು ತಿಳಿಸಿದ್ದಾರೆ. ಇನ್ನು ಮಹಾಗಠಬಂಧನ ಪಕ್ಷಗಳಿಗೆ ಸವಾಲು ಹಾಕಿದ ಶಾ, ‘ಪ್ರಧಾನಿ ಅಭ್ಯರ್ಥಿಯನ್ನು ಘೋಷಿಸಿ’ ಎಂದು ಆಗ್ರಹಿಸಿದರು.

Tags

Related Articles

Leave a Reply

Your email address will not be published. Required fields are marked *

Language
Close