About Us Advertise with us Be a Reporter E-Paper

Breaking Newsಪ್ರಚಲಿತರಾಜ್ಯ

ಸಾಹಿತ್ಯ ಸಮ್ಮೇಳನ ಮುಗಿದರೂ ಬಿಡುಗಡೆಯಾಗದ ಹಣ…!

ಧಾರವಾಡ: ಧಾರವಾಡದಲ್ಲಿ ನಡೆದಿದ್ದ 84ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅನುದಾನವನ್ನು ರಾಜ್ಯ ಸರಕಾರ ಇದುವರೆಗೂ ಬಿಡುಗಡೆ ಮಾಡಿಲ್ಲ ಎಂಬ ಆರೋಪ ಕೇಳಿ ಬಂದಿದೆ.

ನಗರದ ಕೃಷಿ ವಿವಿ ಆವರಣದಲ್ಲಿ ಮೂರು ದಿನಗಳು ನಡೆದಿದ್ದ ಅಕ್ಷರ ಜಾತ್ರೆಗೂ ಮುನ್ನ ಸರಕಾರ 8 ಕೋಟಿ ರು. ಅನುದಾನ ಘೋಷಿಸಿತ್ತು. ಸಮ್ಮೇಳನಕ್ಕಾಗಿ 8 ಕೋಟಿ ರು. ಮೀಸಲಿಟ್ಟ ಬಜೆಟ್ ಹಣದಲ್ಲಿ ಮೊದಲ ಹಂತದಲ್ಲಿ 6 ಕೋಟಿ ರು. ಕೊಡುವುದಾಗಿ ಹೇಳಿದ್ದ ಸರಕಾರ, ಸಮ್ಮೇಳನ ಮುಗಿದು ಎರಡು ತಿಂಗಳು ಕಳೆದರೂ ಈವರೆಗೆ ಒಂದು ರುಪಾಯಿ ಅನುದಾನ ಬಿಡುಗಡೆ ಮಾಡಿಲ್ಲ ಎನ್ನಲಾಗಿದೆ.

ಹೀಗಾಗಿ ಸಮ್ಮೇಳನದಲ್ಲಿ ಶಾಮಿಯಾನ ಹಾಕಿದವರು, ಊಟದ ಗುತ್ತಿಗೆ ಪಡೆದವರು ಹಾಗೂ ವಿವಿಧ ಕಾರ್ಯಕ್ರಮ ನೀಡಿದ ಕಲಾವಿದರು ನಿತ್ಯವೂ ಡಿಸಿ ಕಚೇರಿಗೆ ಅಲೆದಾಡುವಂಥ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನು ಈ ಬಗ್ಗೆೆ ಪ್ರತಿಕ್ರಿಯೆ ನೀಡಿರುವ ಜಿಲ್ಲಾಧಿಕಾರಿ ಎಂ.ದೀಪಾ, ಸರಕಾರದಿಂದ ಅನುದಾನ ಬರಲಿದೆ. ಕನ್ನಡ ಸಾಹಿತ್ಯ ಪರಿಷತ್ ಕೂಡ ತಾನು ಕೊಡಬೇಕಿದ್ದ 2 ಕೋಟಿ ರು. ಪೈಕಿ 1 ಕೋಟಿ ರು. ನೀಡಿದೆ. ಸರಕಾರದಿಂದ ಅನುದಾನ ಬರುತ್ತೆ. ಬಂದ ಮೇಲೆ ಕೊಡುತ್ತೇವೆ ಎಂಬ ಭರವಸೆ ನೀಡಿದ್ದಾರೆ.

Tags

Related Articles

Leave a Reply

Your email address will not be published. Required fields are marked *

Language
Close