About Us Advertise with us Be a Reporter E-Paper

Breaking Newsಪ್ರಚಲಿತರಾಜ್ಯ

ಮಾಸಾಶನ ನಿರಾಕರಣೆ: ದಿವ್ಯಾಂಗ ಆತ್ಮಹತ್ಯೆಗೆ ಶರಣು

ತುಮಕೂರು: ಕೋರಾ ನಾಡಕಚೇರಿ ವ್ಯಾಪ್ತಿಯ ಲಿಂಗಯ್ಯನಪಾಳ್ಯ ಗ್ರಾಮದ ದಿವ್ಯಾಂಗ ಯುವಕನೊಬ್ಬ ಮಾಸಾಶನ ಸೌಲಭ್ಯ ನೀಡಲು ತಹಸೀಲ್ದಾರ್ ನಿರಾಕರಿಸಿದ್ದಾರೆ ಎಂದು ಆರೋಪಿಸಿ, ಇಲಿ ಪಾಶಾಣ ಸೇವಿಸಿ ಆತ್ಮಹತ್ಯೆೆಗೆ ಶರಣಾಗಿದ್ದಾನೆ.

ಧರಣೇಂದ್ರ (22) ಆತ್ಮಹತ್ಯೆೆಗೆ ಶರಣಾದ ಯುವಕ. ಮಾಸಾಶನ ಬಿಡುಗಡೆ ಮಾಡುವಂತೆ ಧರಣೇಂದ್ರ ಹಲವು ದಿನಗಳಿಂದ ಪೂರಕ ದಾಖಲೆಗಳೊಂದಿಗೆ ತಹಸೀಲ್ದಾರ್ ಪರಮೇಶ್ ಬಳಿ ಮನವಿ ಮಾಡಿಕೊಂಡಿದ್ದಾರೆ. ಆದರೆ ವಾರ್ಷಿಕ ಆದಾಯ ರು. 15 ಸಾವಿರ ಇದೆ ಎಂದು ತಹಸೀಲ್ದಾರ್ ನಿರಾಕರಿಸಿದ್ದಾರೆ. ಗ್ರಾಮೀಣ ಭಾಗದಲ್ಲಿ 12 ಸಾವಿರ ರು ಆದಾಯ ಪ್ರಮಾಣ ಪತ್ರದವಿದ್ದರೆ ಮಾಸಾಶನ ಲಭಿಸುತ್ತದೆ.

ಮಾಹಿತಿ ಕೊರತೆಯಿಂದ ಈ ಘಟನೆ ನಡೆದಿದೆ. ಅಧಿಕಾರಿ ಕಡೆಯಿಂದ ತಪ್ಪಾಗಿದ್ದರೆ ಕ್ರಮ ತೆಗೆದುಕೊಳ್ಳಲಾಗುವುದು. ಇದಕ್ಕ ಸಂಬಂಧಿಸಿ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಜಿಲ್ಲಾಾಧಿಕಾರಿ ರಾಕೇಶ್ ಕುಮಾರ್ ಹೇಳಿದರು.
ದಿವ್ಯಾಾಂಗ ಮಾಸಾಶನ 18 ವರ್ಷದವರೆಗೆ ಸ್ಥಗಿತಗೊಳ್ಳುತ್ತದೆ.

18 ವರ್ಷ ಆದ ನಂತರ ಪ್ರತ್ಯೇಕವಾದ ಅರ್ಜಿ ಹಾಕಬೇಕಿದೆ. ಅದರಂತೆ ಧರಣೇಂದ್ರ ತನಗೆ 18 ವರ್ಷ ಆದ ಹಿನ್ನೆಲೆ ಅರ್ಜಿ ಹಾಕಿದ್ದಾನೆ. ಅದರ ಬಗ್ಗೆ ಮಾಹಿತಿ ಕೂಡ ಬಂದಿದೆ. ಆತ ಹಾಕಿದ್ದ ಅರ್ಜಿ ತಿರಸ್ಕೃತವಾಗಿಲ್ಲ. ಇದಕ್ಕೆ ಸಂಬಂಧಿಸಿದಂತೆ ಎಸಿ ನೇತೃತ್ವದ ಸಮಿತಿಗೆ ತನಿಖೆ ನಡೆಸಿ ವರದಿ ನೀಡುವಂತೆ ಸೂಚಿಸಿದ್ದೇನೆ ಎಂದರು.

Tags

Related Articles

Leave a Reply

Your email address will not be published. Required fields are marked *

Language
Close