About Us Advertise with us Be a Reporter E-Paper

Breaking Newsಪ್ರಚಲಿತರಾಜ್ಯ

ಯಡಿಯೂರಪ್ಪ ವಿರುದ್ಧ ಸಿಸಿಬಿಗೆ ದೂರು

ಬೆಂಗಳೂರು: ಆಪರೇಷನ್ ಕಮಲದ ಆಡಿಯೊ ಬಿಡುಗಡೆ ಪ್ರಕರಣದ ಸಂಬಂಧ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ವಿರುದ್ಧ ಬೆಂಗಳೂರು ನಗರ ಯುವ ಕಾಂಗ್ರೆಸ್ ಕಾರ್ಯಕರ್ತರು ಸಿಸಿಬಿ ಹೆಚ್ಚುವರಿ ಆಯುಕ್ತ ಅಲೋಕ್ ಕುಮಾರ್ ಅವರಿಗೆ ದೂರು ನೀಡಿದ್ದಾರೆ.

ಆಡಿಯೋ ಟೇಪ್ ವಿಚಾರ ರಾಜ್ಯಾದಂತ ಸುದ್ದಿಯಾಗಿದೆ. ಸಂವಿಧಾನಾತ್ಮಕವಾಗಿ ರಚನೆಯಾಗಿರುವ ಸರಕಾರ ಅಸ್ಥಿರಗೊಳಿಸಲು ಯತ್ನಿಸುತ್ತಿದ್ದಾರೆ. ಯಡಿಯೂರಪ್ಪ ಅವರು ದೇಶದ ಪ್ರಧಾನಿ ಹೆಸರು ಬಳಸಿರುವುದು ಖಂಡನೀಯ. ಆಡಿಯೊ ಕ್ಲಿಪ್‌ನಲ್ಲಿ 10 ಕೋಟಿ ಹಾಗೂ ಹೆಚ್ಚು ಹಣದ ಬಗ್ಗೆ ಯಡಿಯೂರಪ್ಪ ಮಾತನಾಡಿದ್ದಾರೆ. ಹಣದ ಮೂಲ ಹಾಗೂ ಆಡಿಯೋ ಟೇಪ್ ಸತ್ಯಾಸತ್ಯತೆ ಬಯಲಾಗಬೇಕು ಎಂದು ಬೆಂಗಳೂರು ನಗರ ಯುವ ಕಾಂಗ್ರೆಸ್ ಸಿಸಿಬಿ ಹೆಚ್ಚುವರಿ ಆಯುಕ್ತ ಅಲೋಕ್ ಕುಮಾರ್‌ಗೆ ಮನವಿ ಮಾಡಿದ್ದಾರೆ.

ರಾಜ್ಯ ಉಪಾಧ್ಯಕ್ಷ ಶಿವಕುಮಾರ್ ಮಾತನಾಡಿ, ಆಡಿಯೊ ಬಿಡುಗಡೆ ಪ್ರಕರಣದ ಸಂಬಂಧ ರಾಜ್ಯದ ಎಲ್ಲ ಜಿಲ್ಲಾ ವ್ಯಾಪ್ತಿಯಲ್ಲಿರುವ ಠಾಣಾ ಇನ್ಸ್‌‌ಪೆಕ್ಟರ್‌ಗಳಿಗೆ ಬಿಎಸ್‌ವೈ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ದೂರು ನೀಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.

Tags

Related Articles

Leave a Reply

Your email address will not be published. Required fields are marked *

Language
Close