About Us Advertise with us Be a Reporter E-Paper

Breaking Newsಪ್ರಚಲಿತರಾಜ್ಯ

ವಕೀಲರ ರಕ್ಷಣಾ ಕಾಯಿದೆ ಜಾರಿಗೆ ಆಗ್ರಹಿಸಿ ಪ್ರತಿಭಟನೆ

ಬೆಂಗಳೂರು: ವಕೀಲರ ರಕ್ಷಣಾ ಕಾಯಿದೆ ಜಾರಿಗೆ ತರುವಂತೆ ಒತ್ತಾಯಿಸಿ ಭಾರತೀಯ ವಕೀಲರ ಪರಿಷತ್ ಕರೆ ನೀಡಿರುವ ರಾಷ್ಟ್ರಾದ್ಯಂತ ಪ್ರತಿಭಟನೆ ಬೆಂಬಲಿಸಿ, ಕೋರ್ಟ್ ಕಲಾಪ ಬಹಿಷ್ಕರಿಸಿ ನಗರದಲ್ಲಿ ವಕೀಲರು ಪ್ರತಿಭಟನೆ ನಡೆಸಿದರು.

ಮೈಸೂರು ಬ್ಯಾಂಕ್ ವೃತ್ತದ ಸಿವಿಲ್ ಕೋರ್ಟ್ ಮುಂಭಾಗ ಬೆಂಗಳೂರು ವಕೀಲರ ಸಂಘ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ವಕೀಲರು, ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಿದರು. ರಾಜ್ಯದ ತಾಲೂಕು ನ್ಯಾಯಾಲಯ ಹಾಗೂ ಹೈಕೋರ್ಟ್‌ನಲ್ಲಿ ಲಕ್ಷಾಂತರ ವಕೀಲರು ಬದುಕಿನ ಪ್ರತಿ ಕ್ಷಣದಲ್ಲೂ ತಮ್ಮ ಜೀವ ಲೆಕ್ಕಿಸದೇ ವೃತ್ತಿ ಮಾಡುತ್ತಿದ್ದಾರೆ. ಕಾನೂನು ಕಾಪಾಡುವ ಶ್ರೇಷ್ಠ ವೃತ್ತಿ ಎಂದು ಭಾವಿಸಿ ವಕೀಲ ವೃತ್ತಿ ಮಾಡುತ್ತಿದ್ದೇವೆ. ಬೇಡಿಕೆಗಳನ್ನು ಈಡೇರಿಸುವಂತೆ ಹಲವು ಬಾರಿ ಕೇಂದ್ರ ಮತ್ತು ರಾಜ್ಯ ಸರಕಾರಕ್ಕೆ ಮನವಿ ಮಾಡಿದರೂ ಯಾವುದೇ ಪ್ರಯೋಜನ ಆಗಿಲ್ಲ.

ವಕೀಲಿಕೆ ಮಾಡಲು ಪದವಿ ಮುಗಿಸಿ ನೋಂದಣಿ ಮಾಡಿಕೊಂಡ ಹೊಸಬರಿಗೆ ಹೆಚ್ಚಿನ ಸಹಾಯಧನ, ವಕೀಲರ ಮೇಲೆ ನಡೆಯುವ ಹಲ್ಲೆ, ಕೊಲೆಗಳಿಗೆ ಪರಿಹಾರ ಮಾರ್ಗೋಪಾಯಗಳು, ವಕೀಲರ ಸಂಘಗಳಿಗೆ ಕನಿಷ್ಟ ಸರಕಾರಿ ಸೌಲಭ್ಯ, ವಕೀಲರ ಕಲ್ಯಾಣ ನಿಧಿ ಹೆಚ್ಚಿಸುವುದು, ರಾಜ್ಯ ವಕೀಲರ ಪರಿಷತ್ತಿಗೆ ಸಹಾಯಧನ ಸೇರಿದಂತೆ ವಿವಿಧ ಬೇಡಿಕೆಗಳ ಕೂಗು ಹೆಚ್ಚುತ್ತಲೇ ಇದೆ, ಅಲ್ಲದೆ ವಾರ್ಷಿಕ ಬಜೆಟ್‌ನಲ್ಲೂ ವಕೀಲರನ್ನು ಕಡೆಗಣಿಸಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

Tags

Related Articles

Leave a Reply

Your email address will not be published. Required fields are marked *

Language
Close