About Us Advertise with us Be a Reporter E-Paper

Breaking Newsಪಾಲಿಟಿಕ್ಸ್ಪ್ರಚಲಿತ
Trending

ರಾಹುಲ್‌ನಿಂದ ಪಕ್ಷಕ್ಕೆ ಹೊಸ ಶಕ್ತಿ: ಸೋನಿಯಾ

ದೆಹಲಿ: “ರಾಹುಲ್ ಗಾಂಧಿಯಿಂದ ಪಕ್ಷಕ್ಕೆ ಹೊಸ ಬಲ ಬಂದಂತಾಗಿದೆ. ಆತ ಪಕ್ಷಕ್ಕಾಗಿ ಕಷ್ಟಪಟ್ಟು ದುಡಿಯುತ್ತಿದ್ದಾನೆ” ಎಂದು ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ತಿಳಿಸಿದ್ದಾರೆ.

ಬುಧವಾರ ಕಾಂಗ್ರೆಸ್ ಸಂಸದೀಯ ಪಕ್ಷದ ಸಭೆಯಲ್ಲಿ ಮಾತನಾಡಿದ ಸೋನಿಯಾ ಗಾಂಧಿ, ‘ಹೊಸ ಆತ್ಮವಿಶ್ವಾಸ ಹಾಗೂ ಉತ್ಸಾಹದೊಂದಿಗೆ ನಾವು ಲೋಕಸಭೆ ಚುನಾವಣೆಯನ್ನು ಎದುರಿಸುತ್ತಿರುವುದು ನಮ್ಮ ಅದೃಷ್ಟ. ರಾಜಸ್ಥಾನ, ಮಧ್ಯಪ್ರದೇಶ, ಹಾಗೂ ಛತ್ತೀಸ್‌ಗಡದಲ್ಲಿ ನಮ್ಮ ಗೆಲುವು ಹೊಸ ಭರವಸೆಗಳನ್ನು ನೀಡಿದೆ’ ಎಂದು ಸೋನಿಯಾ ಪಕ್ಷದ ಯಶಸ್ಸನ್ನು ಶ್ಲಾಘಿಸಿದರು.

“ನಮ್ಮ ರಾಜಕೀಯ ವಿರೋಧಿಗಳು ಆರಂಭದಲ್ಲಿ ತಮ್ಮನ್ನು ನಿಯಂತ್ರಿಸುವವರು ಯಾರೂ ಇಲ್ಲ ಎಂದು ಭಾವಿಸುತ್ತಿದ್ದರು. ಆದರೆ ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿ ಜವಾಬ್ದಾರಿ ಹೊತ್ತು, ಲಕ್ಷಾಂತರ ಕಾರ್ಯಕರ್ತರನ್ನು ಒಗ್ಗೂಡಿಸಿ, ತಮ್ಮ ಪರಿಶ್ರಮ ಹಾಕಿದರು. ನಮ್ಮ ಕಾರ್ಯಕರ್ತರು ಸಹ ಅಧ್ಯಕ್ಷರ ಬೆನ್ನಿಗೆ ನಿಂತು ಅವರಿಗೆ ಸಂಪೂರ್ಣ ಬೆಂಬಲ ನೀಡಿದ್ದಾರೆ” ಎಂದು ಸೋನಿಯಾ ಗಾಂಧಿ ತಿಳಿಸಿದರು.

ಪಕ್ಷದ ಅಧ್ಯಕ್ಷರಾಗಿ ರಾಹುಲ್ ಪರಿಶ್ರಮ ಅಪಾರವಾದುದು. ಭಾರತದ ಕುರಿತು ನಮ್ಮ ಪಕ್ಷದ ದ್ಯೇಯೋದ್ದೇಶಗಳನ್ನು ಬೇರೆ ಪಕ್ಷಗಳಿಗೂ ವಿವರಿಸುವ ಪ್ರಯತ್ನ ಮಾಡಿರುವುದು ಉತ್ತಮ ಬೆಳವಣಿಗೆ ಎಂದು ಸೋನಿಯಾ ಪುತ್ರನನ್ನು ಕೊಂಡಾಡಿದರು.

ಮೋದಿ ಸರಕಾರದ ವಿರುದ್ಧ ವಾಗ್ದಾಳಿ
ಸುಳ್ಳು, ನಂಬಿಕೆ ದ್ರೋಹ ಕೇಂದ್ರ ಸರಕಾರದ ಮುಖ್ಯ ಉದ್ದೇಶ. ಮೋದಿ ವರ ಸರಕಾರದಲ್ಲಿ ಪಾರದರ್ಶಕತೆ ಎಂಬುದೇ ಇಲ್ಲ. ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆ ಹಾಗೂ ಜಾತ್ಯತೀತ ವ್ಯವಸ್ಥೆ ಮೋದಿ ಆಡಳಿತದಲ್ಲಿ ಹಾಳಾಗುತ್ತಿದೆ ಎಂದು ಟೀಕಿಸಿದರು. ‘ಸಂವಿಧಾನಿಕ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡು ರಾಜಕೀಯ ಎದುರಾಳಿಗಳನ್ನು ತುಳಿಯುವ ಪ್ರಯತ್ನ ನಡೆಯುತ್ತಿದೆ.

ಪ್ರಶ್ನೆ ಮಾಡಿದವರನ್ನು ಗುರಿಯಾಗಿಸಲಾಗುತ್ತಿದೆ. ವಾಕ್ ಸ್ವಾತಂತ್ರ್ಯ ಸೇರಿದಂತೆ ಎಲ್ಲ ಮೂಲಭೂತ ಹಕ್ಕುಗಳನ್ನು ಕಸಿದುಕೊಳ್ಳಲಾಗುತ್ತಿದೆ. ದೇಶದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಈಶಾನ್ಯ ರಾಜ್ಯಗಳು ಹೊತ್ತಿ ಉರಿಯುತ್ತಿವೆ. ದಲಿತರು, ಆದಿವಾಸಿಗಳು ಮತ್ತು ಅಲ್ಪಸಂಖ್ಯಾತರನ್ನು ಗುರಿಯಾಗಿಸಲಾಗುತ್ತಿದೆ. ರೈತರ ಸಂಕಷ್ಟ ಹೆಚ್ಚಾಗಿದೆ. ಈ ಹಿಂದೆಗಿಂತ ಹೆಚ್ಚು ಪ್ರಮಾಣದಲ್ಲಿ ನಿರುದ್ಯೋಗ ಸೃಷ್ಠಿಯಾಗಿದ್ದು, ಯುವಕರು ಬೇಸತ್ತಿದ್ದಾರೆ’ ಎಂದರು.

Tags

Related Articles

Leave a Reply

Your email address will not be published. Required fields are marked *

Language
Close