About Us Advertise with us Be a Reporter E-Paper

Breaking Newsದೇಶಪ್ರಚಲಿತ

ಅನಾರ್ಕಲಿ ಖ್ಯಾತಿಯ ಮಧುಬಾಲಾ 86ನೇ ಜನ್ಮದಿನಕ್ಕೆ ಗೂಗಲ್ ಡೂಡಲ್ ಗೌರವ

ದೆಹಲಿ: ಬಾಲಿವುಡ್‍ನ ಎವರ್ ಗ್ರೀನ್ ನಾಯಕ ನಟಿ, ಅನಾರ್ಕಲಿ ಖ್ಯಾತಿಯ ಮಧುಬಾಲಾ ಅವರ 86ನೆ ಜನ್ಮ ದಿನಕ್ಕೆ ಖ್ಯಾತ ಸರ್ಚ್ ಎಂಜಿನ್ ಗೂಗಲ್ ವಿಶೇಷ ಉಡುಗೊರೆ ನೀಡಿದೆ.

ಗೂಗಲ್ ತನ್ನ ವಿಶೇಷವಾದ ಡೂಡಲ್ ಮೂಲಕ ಮಧುಬಾಲಾ ಅವರಿಗೆ ಜನ್ಮದಿನದ ಶುಭಾಶಯ ಕೋರಿದೆ. ಹಿಂದಿ ಚಿತ್ರರಂಗದ ಹಳೆಯ ನಾಯಕಿಯರಲ್ಲಿ ಮಧುಬಾಲಾ ಅಪ್ರತಿಮ ಸುಂದರಿ ಎಂದೇ ಖ್ಯಾತಿ ಗಳಿಸಿದ್ದಾರೆ.

1933ರ ಫೆಬ್ರವರಿ 14 ರಂದು ದೆಹಲಿಯಲ್ಲಿ ಜನಿಸಿದ್ದ ಮಧುಬಾಲ, 1942ರಲ್ಲಿ ಚಿತ್ರರಂಗ ಪ್ರವೇಶ ಮಾಡಿದ್ದರು. ಬರ್ಸಾತ್ ಕಿ ರಾತ್, ಮೊಘಲ್ ಏ ಅಜಂ ನಂತಹ ಅನೇಕ ಚಿತ್ರಗಳಲ್ಲಿ ನಟಿಸಿ, ಹಿಂದಿ ಚಿತ್ರರಂಗದಲ್ಲಿ ಅಚ್ಚಳಿಯದೆ ಉಳಿದ ನಟಿ ಮಧುಬಾಲಾ.

ಅಪ್ರತಿಮ ಸುಂದರಿಯಾಗಿಯೂ ಮಧುಬಾಲಾ ಸಿನಿ ರಸಿಕರ ಮನಗೆದ್ದಿದ್ದರು. ತಮ್ಮ ಮೋಹಕ ನೋಟ, ನಟನಾ ಸಾಮಥ್ರ್ಯ, ನೃತ್ಯದಿಂದ 1942ರಿಂದ 1962ರವರೆಗೆ ಬಹುಬೇಡಿಕೆಯ ನಟಿಯಾಗಿ ಜಗತ್ತಿನ ಗಮನ ಸೆಳೆದವರು ಇವರು.

ಕಡಿಮೆ ಅವಧಿಯಲ್ಲಿಯೇ ಮಿಂಚಿದ ಮಧುಬಾಲಾ ಸಣ್ಣ ವಯಸ್ಸಲ್ಲೇ ಸಾವನ್ನಪ್ಪಿದ್ದು ದುರಂತ. 36ರ ಹರೆಯದಲ್ಲಿ ಸಾವನ್ನಪ್ಪಿದ ಮಧುಬಾಲಾ, ಚಲ್ತಿಕಾ ನಾಮ್ ಗಾಡಿ, ಮುಘಲ್ ಎ ಆಜಮ್‍ನಂತಹ ಚಿತ್ರಗಳಿಂದ ಬೆಳ್ಳಿತೆರೆಯಲ್ಲಿ ಇತಿಹಾಸ ಬರೆದವರು.

1969 ಫೆಬ್ರವರಿ 23ರಂದು ಮುಂಬೈನಲ್ಲಿ ಮಧುಬಾಲ ಅಕಾಲಿಕ ಮರಣವನ್ನಪ್ಪಿದ್ದರು. 2017ರ ಆಗಸ್ಟ್‌ನಲ್ಲಿ ದೆಹಲಿಯ ಮೆಡಮ್ ಟುಸ್ಸಾಡ್ಸ್‌ನಲ್ಲಿ ಮಧುಬಾಲಾರ ಮೇಣದ ಪ್ರತಿಮೆ ಅನಾವರಣ ಮಾಡಲಾಗಿದೆ.

Tags

Related Articles

Leave a Reply

Your email address will not be published. Required fields are marked *

Language
Close