About Us Advertise with us Be a Reporter E-Paper

Breaking Newsದೇಶಪ್ರಚಲಿತ

ಪುಲ್ವಾಮಾ ದಾಳಿ: ಯೋಧರ ಕುಟುಂಬಗಳಿಗೆ ನೆರವಾದ ಕೈದಿಗಳು

ಪಟನಾ: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ಆತ್ಮಾಹುತಿ ದಾಳಿಯಲ್ಲಿ ಹುತಾತ್ಮರಾದ ಯೋಧರ ಕುಟುಂಬಗಳಿಗೆ ಬಿಹಾರದ ಗೋಪಾಲ್‌ಗಂಜ್ ಉಪ ವಿಭಾಗ ಜೈಲಿನ ಕೈದಿಗಳು ಮತ್ತು ಸಿಬ್ಬಂದಿಗಳು ₹50,000 ಧನ ಸಹಾಯ ನೀಡಿದ್ದಾರೆ.

ಆರ್ಮಿ ರಿಲೀಫ್ ಫಂಡ್ (ಎಆರ್‌‌‌‌‌‌ಎಫ್) ಗೆ ಡಿ.ಡಿ. ಮೂಲಕ ಸೋಮವಾರ ಈ ಮೊತ್ತವನ್ನು ಕಳುಹಿಸಲಾಗಿದೆ ಎಂದು ಜೈಲಿನ ಅಧಿಕಾರಿಗಳು ತಿಳಿಸಿದ್ದಾರೆ. ಈ ಜೈಲಿನಲ್ಲಿ 30 ಮಹಿಳಾ ಕೈದಿಗಳು ಸೇರಿದಂತೆ ಒಟ್ಟು 750 ಕೈದಿಗಳಿದ್ದಾರೆ. ಅದೇ ವೇಳೆ ಗಡಿಭಾಗದಲ್ಲಿ ಯುದ್ಧ ನಡೆದರೆ ತಾವು ಕೂಡಾ ದೇಶಕ್ಕಾಗಿ ಹೋರಾಡುತ್ತೇವೆ ಎಂದು 250 ಕೈದಿಗಳ ಸಹಿಯಿರುವ ಪತ್ರವೊಂದನ್ನು ಕೈದಿಗಳು ಪ್ರಧಾನಿ ನರೇಂದ್ರ ಮೋದಿಯವರಿಗೆ ಕಳುಹಿಸಿಕೊಟ್ಟಿದ್ದಾರೆ.

ನಾವು ಈ ಯುದ್ಧದಲ್ಲಿ ಸತ್ತರೆ ಹುತಾತ್ಮರಾಗುವ ಭಾಗ್ಯ ನಮ್ಮದಾಗುತ್ತದೆ. ಒಂದು ವೇಳೆ ಬದುಕುಳಿದರೆ ನಾವು ಈ ಜೈಲಿಗೆ ಮರಳಿ ಇಲ್ಲಿ ಯಾರಿಗೂ ತೊಂದರೆ ಕೊಡದೆ ಇರುತ್ತೇವೆ ಎಂದು ಪತ್ರದಲ್ಲಿ ಬರೆದಿರುವುದಾಗಿ ತಿಳಿದು ಬಂದಿದೆ.

Tags

Related Articles

Leave a Reply

Your email address will not be published. Required fields are marked *

Language
Close