lakshmi-electricals

ಇರಾಕ್ ನಲ್ಲಿ 45 ಉಗ್ರರ ಹತ್ಯೆ

Posted In : Others

ಬಾಗ್ಧಾದ್: ಇರಾಕ್ ನ ಮೋಸುಲ್ ನಗರದ ಸೇನಾ ನೆಲೆಗಳ ಮೇಲೆ ಐಎಸ್ ಉಗ್ರರು ದಾಳಿ ಮಾಡಿದ್ದು, ಈ ವೇಳೆ ಕನಿಷ್ಠ 45 ಉಗ್ರರನ್ನು ಹತ್ಯೆ ಮಾಡಲಾಗಿದೆ ಎಂದು ಸೇನಾಧಿಕಾರಿ ಬುಧವಾರ ಹೇಳಿದ್ದಾರೆ.

ಕಯ್ಯಾರ ಬಳಿ ಹಲವಾರು ಉಗ್ರರು ಮಂಗಳವಾರ ಇರಾಕಿ ಸೇನಾ ನೆಲೆಗಳ ಮೇಲೆ ದಾಳಿ ನಡೆಸಿದ್ದವು ಎಂದು ಅಧಿಕಾರಿ ಹೇಳಿರುವುದಾಗಿ ವರದಿಯಾಗಿದೆ

'ಅಮೆರಿಕಾ ಸಹಭಾಗಿತ್ವದ ನಮ್ಮ ಪಡೆಗಳು, ಪ್ರತಿ ವಾಯು ದಾಳಿಯನ್ನು ನಡೆಸಿ, ಸುಮಾರು ಘಂಟೆಗಳ ಕಾಲ ಘರ್ಷಣೆ ಜಾರಿಯಲ್ಲಿತ್ತು' ಎಂದು ಮತ್ತೊಬ್ಬ ಅಧಿಕಾರಿ ಹೇಳಿದ್ದಾರೆ.

ಈ ಘರ್ಷಗಳಲ್ಲಿ ಐವರು ಭದ್ರತಾ ಸಿಬ್ಬಂದಿ ಕೂಡ ಮರಣ ಹೊಂದಿದ್ದಾರೆ ಎಂದು ಅವರು ತಿಳಿಸಿದ್ದಾರೆ.  ಪವಿತ್ರ ರಂಜಾನ್ ತಿಂಗಳಲ್ಲೂ ಕೂಡ ಐ ಎಸ್ ಉಗ್ರರು ದಾಳಿಯನ್ನು ಮುಂದುವರೆಸಿದ್ದಾರೆ.

Leave a Reply

Your email address will not be published. Required fields are marked *

2 + 14 =

 
Back To Top