About Us Advertise with us Be a Reporter E-Paper

Breaking Newsಕ್ರೀಡೆದೇಶಪ್ರಚಲಿತ

“ದಿ ವಾಲ್‌” ಕನ್ನಡಿಗ ರಾಹುಲ್ ದ್ರಾವಿಡ್​ಗೆ ಇಂದು 46 ಹುಟ್ಟು ಹಬ್ಬದ ಸಂಭ್ರಮ

ಬೆಂಗಳೂರು: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ, ಭಾರತೀಯ ಟೆಸ್ಟ್ ಇತಿಹಾಸದಲ್ಲಿ ಸದಾ ಅಗ್ರಸ್ಥಾನದಲ್ಲೇ ಬರುವ ಹಾಗೂ ಜಂಟಲ್​ಮ್ಯಾನ್ ಗೇಮ್​ನ ಪರ್ಫೆಕ್ಟ್​ ಜಂಟಲ್​ಮ್ಯಾನ್​ ಕನ್ನಡಿಗ ರಾಹುಲ್ ದ್ರಾವಿಡ್​ಗೆ ಇಂದು 46 ಹುಟ್ಟು ಹಬ್ಬದ ಸಂಭ್ರಮ.

ರಾಹುಲ್‌ ದ್ರಾವಿಡ್‌ ಅವರಿಗೆ ಸ್ಯಾಂಡಲ್‌ವುಡ್‌, ಹಾಲಿ ಮತ್ತು ಮಾಜಿ ಕ್ರಿಕೇಟಿಗರು ಸೇರಿದಂತೆ ಅವರ ಕೋಟ್ಯಂತರ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಹುಟ್ಟು ಹಬ್ಬದ ಶುಭಾಷಯಗಳನ್ನು ಕೋರಿದ್ದಾರೆ. ಮತ್ತು ಅವರ ಸರಳತೆ, ವ್ಯಕ್ತಿತ್ವ, ಸಾಧನೆಗಳನ್ನು ಕೊಂಡಾಡಿದ್ದಾರೆ.

164 ಟೆಸ್ಟ್ ಪಂದ್ಯಗಳಲ್ಲಿ 52.31 ಸರಾಸರಿಯಲ್ಲಿ  13288 ರನ್ ದ್ರಾವಿಡ್ ಸಿಡಿಸಿದ್ದಾರೆ. ಇದರಲ್ಲಿ 36 ಶತಕ ಹಾಗೂ 63 ಅರ್ಧ ಶತಕ ಸೇರಿವೆ. 344 ಏಕದಿನ ಪಂದ್ಯಗಳಲ್ಲಿ 39.16 ಸರಾಸರಿಯಲ್ಲಿ 10889 ರನ್ ಬಾರಿಸಿದ್ದಾರೆ. ಏಕದಿನದಲ್ಲಿ ಶತಕಗಳ ಸಂಖ್ಯೆ 12 ಹಾಗೂ ಅರ್ಧ ಶತಕ 83. ಮೂರನೇ ಕ್ರಮಾಂಕದ ಈ ಅತ್ಯುತ್ತಮ ಆಟಗಾರ ನಿರ್ಮಿಸಿರುವ ಒಂದಷ್ಟು ಕುತೂಹಲಕಾರಿ ರೆಕಾರ್ಡ್​ ಇಲ್ಲಿದೆ.

Tags

Related Articles

Leave a Reply

Your email address will not be published. Required fields are marked *

Language
Close