About Us Advertise with us Be a Reporter E-Paper

Breaking Newsಕ್ರೀಡೆಪ್ರಚಲಿತ
Trending

4ನೇ ಟೆಸ್ಟ್ ಪಂದ್ಯ: ಆಸಿಸ್‍ಗೆ ಫಾಲೋ ಆನ್​ ಹೇರಿದ ಟೀಂ ಇಂಡಿಯಾ

ಸಿಡ್ನಿ: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ನಾಲ್ಕನೇ ಮತ್ತು ಕೊನೆಯ ಟೆಸ್ಟ್​ ಪಂದ್ಯದಲ್ಲಿ ಟೀಂ ಇಂಡಿಯಾ, ಕಾಂಗರೂಗಳ ಮೇಲೆ ಬಿಗಿ ಹಿಡಿತ ಸಾಧಿಸಿ ಫಾಲೋ-ಆನ್​ ಹೇರಿದೆ.

ನಾಲ್ಕನೇ ಟೆಸ್ಟ್ ನ ನಾಲ್ಕನೇ ದಿನದಾಟದ ವೇಳೆ ಆತಿಥೇಯ ಆಸ್ಟ್ರೇಲಿಯಾ 300 ರನ್ ಗಳಿಗೆ ಆಲೌಟ್ ಆಯಿತು. ಶನಿವಾರ ದಿನದಾಟದ ಅಂತ್ಯಕ್ಕೆ 236 ರನ್ ಗಳಿಸಿತ್ತು. ಇಂದು ಮತ್ತೆ 64 ರನ್ ಗಳನ್ನು ಗಳಿಸುವಷ್ಟರಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿತು. ಆ ಮೂಲಕ ಭಾರತದ ವಿರುದ್ಧ ಆಸಿಸ್ ತಂಡ 322 ರನ್ ಗಳ ಭಾರಿ ಹಿನ್ನಡೆ ಅನುಭವಿಸಿತು.

ಭಾರತದ ಪರ ಸ್ಪಿನ್ನರ್ ಕುಲದೀಪ್​ ಯಾದವ್ ​5, ಜಡೇಜಾ ಹಾಗೂ ಮಹಮದ್ ಶಮಿ ತಲಾ 2 ಮತ್ತು ಬುಮ್ರಾ 1 ವಿಕೆಟ್ ಪಡೆದು ಮಿಂಚಿದರು. ಇನ್ನು 322 ರನ್ ಗಳ ಹಿನ್ನಡೆ ಅನುಭವಿಸಿರುವ ಆಸ್ಟ್ರೇಲಿಯಾ ತಂಡ ಮೇಲೆ ಫಾಲೋ ಆನ್ ಹೇರಲಾಗಿದ್ದು. ನಾಲ್ಕನೇ ದಿನದ ಚಹಾ ವಿರಾಮದ ವೇಳೆ ಆಸೀಸ್​ ತನ್ನ ಎರಡನೇ ಇನ್ನಿಂಗ್ಸ್​ನಲ್ಲಿ ವಿಕೆಟ್​ ನಷ್ಟವಿಲ್ಲದೆ 6 ರನ್​ ಗಳಿಸಿದೆ.

ಮೊದಲ ಇನ್ನಿಂಗ್ಸ್​ನಲ್ಲಿ ಮೊದಲು ಬ್ಯಾಟ್​ ಮಾಡಿದ ಟೀಂ ಇಂಡಿಯಾ 7 ವಿಕೆಟ್​ ನಷ್ಟಕ್ಕೆ 622 ರನ್ ​ಗಳಿಸಿ ಡಿಕ್ಲೇರ್​ ಮಾಡಿಕೊಂಡಿತ್ತು. ನಂತರದಲ್ಲಿ ಆಸೀಸ್​, ತನ್ನ ಮೊದಲ ಇನ್ನಿಂಗ್ಸ್​ನಲ್ಲಿ 300 ರನ್​ ಗಳಿಸುವಷ್ಟರಲ್ಲಿ ಆಲೌಟ್​ ಆಯಿತು. ಫಾಲೋ-ಆನ್​ ತಪ್ಪಿಸಲು ಬೇಕಾದಷ್ಟು ರನ್​ ಆಸೀಸ್​ ಗಳಿಸಿಲ್ಲವಾದ್ದರಿಂದ, ಇದೀಗ ಟೀಂ ಇಂಡಿಯಾ ಆಸೀಸ್​ ಮೇಲೆ ಫಾಲೋ-ಆನ್​ ಹೇರಿ ಮತ್ತೆ ಎರಡನೇ ಇನ್ನಿಂಗ್ಸ್ ಬ್ಯಾಟ್​ ಮಾಡಲು ಆಹ್ವಾನಿಸಿದ್ದಾರೆ.

Tags

Related Articles

Leave a Reply

Your email address will not be published. Required fields are marked *

Language
Close