50ದಿನದ ನಂತರದ ಪ್ರಧಾನಿ ಭಾಷಣ ನೀರಸ.

Posted In : ರಾಜ್ಯ, ಶಿವಮೊಗ್ಗ

ಶಿವಮೊಗ್ಗ: 50 ದಿನ ಕಾಲಾವಕಾಶ ನೀಡಿ ದೇಶದ ದಿಕ್ಕನ್ನೇ ಬದಲಾಯಿಸಿ ಬಿಡುತ್ತೇನೆ ಎಂದು ಹೇಳಿದ್ದರು, ಅಷ್ಟು ದಿನಗಳ ನಂತರ ಜನಸಾಮಾನ್ಯರು ಚಿಲ್ಲರೆ ಸಮಸ್ಯೆಯಿಂದ ಪರಿತಪಿಸಿ ಕಾದರು, ಹೊಸವರ್ಷಕ್ಕೆ ಶುಭುಕೋರುವ ಭಾಷಣದಲ್ಲಿ ಜನರ ಬಗ್ಗೆ ಏನಾದರೂ ಮಾತನಾಡಬಹುದು ಎಂದು ನಿರೀಕ್ಷೆ ಇಟ್ಟುಕೊಂಡಿದ್ದೆವು. ಅದು ಹುಸಿಯಾಯ್ತು ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತೀ.ನಾ ಶ್ರೀನಿವಾಸ್ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನೋಟ್ ಅಮಾನ್ಯೀಕರಣಗೊಂಡು 50 ದಿನ ಪೂರೈಸಿದೆ. ನೋಟ್ ಬ್ಯಾನ್ ಸಂದರ್ಭದಲ್ಲಿ 50 ದಿನದಲ್ಲಿ ಸಮಸ್ಯೆ ಬಗೆಹರಿಯಲಿದೆ ಎಂದು ಪ್ರಧಾನಿ ಭರವಸೆ ನೀಡಿದ್ದರು. ಆದರೆ ನೀಡಿದ ಭರವಸೆ ಸಂಪೂರ್ಣ ಹುಸಿಯಾಗಿದೆ. ಗ್ರಾಮೀಣ ಭಾಗದ ಜನರು, ಕೂಲಿ ಕಾರ್ಮಿಕರು, ಮಹಿಳೆಯರು ನೋಟ್ ರದ್ಧತಿಯಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಬ್ಯಾಂಕ್ ಮುಂದೆ ಅಪರಾಧಿಗಳಂತೆ ಪ್ರತಿನಿತ್ಯ ನಿಲ್ಲುವಂತಾಗಿದೆ. 100 ಕ್ಕೂ ಹೆಚ್ಚು ಜನ ಸಾವು ಕಂಡಿದ್ದಾರೆ. 2000 ರು. ಗಳಿಗೆ ಚಿಲ್ಲರೆ ದೊರಕುತ್ತಿಲ್ಲ ಎಂದು ದೂರಿದರು.

Leave a Reply

Your email address will not be published. Required fields are marked *

3 × four =

Wednesday, 24.01.2018

ಶ್ರೀಹೇಮಲಂಬಿ, ಉತ್ತರಾಯಣ, ಶಿಶಿರಋತು, ಮಾಘ ಮಾಸ, ಶುಕ್ಲಪಕ್ಷ, ಸಪ್ತಮಿ, ಬುಧವಾರ, ನಿತ್ಯ ನಕ್ಷತ್ರ-ರೇವತಿ, ಯೋಗ-ಸಿದ್ಧಿ, ಕರಣ-ವಣಿಜೆ.

ರಾಹುಕಾಲಗುಳಿಕಕಾಲಯಮಗಂಡಕಾಲ
12.00-01.30 10.30-12.00 07.30-09.00

Read More

 

Wednesday, 24.01.2018

ಶ್ರೀಹೇಮಲಂಬಿ, ಉತ್ತರಾಯಣ, ಶಿಶಿರಋತು, ಮಾಘ ಮಾಸ, ಶುಕ್ಲಪಕ್ಷ, ಸಪ್ತಮಿ, ಬುಧವಾರ, ನಿತ್ಯ ನಕ್ಷತ್ರ-ರೇವತಿ, ಯೋಗ-ಸಿದ್ಧಿ, ಕರಣ-ವಣಿಜೆ.

ರಾಹುಕಾಲಗುಳಿಕಕಾಲಯಮಗಂಡಕಾಲ
12.00-01.30 10.30-12.00 07.30-09.00

Read More

Back To Top