ಕಾಂಗ್ರೆಸ್ ಗೆ ರಾಜ್ಯದ ಶೇ.50ರಷ್ಟು ಜನತೆ ಬೆಂಬಲ ಖಚಿತ: ಸಿಎಂ ವಿಶ್ವಾಸ

Posted In : ರಾಜ್ಯ

ಮೈಸೂರು: ರಾಜ್ಯದ ಶೇಕಡ ಐವತ್ತು ರಷ್ಟು ಜನ ಆಡಳಿತಾರೂಢ ಕಾಂಗ್ರೆಸ್ ಪಕ್ಷ ವನ್ನು ಬೆಂಬಲಿಸಲು ಮುಂದಾಗಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

‌ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಎಲ್ಲ ಸಮೀಕ್ಷೆಗಳು ಕಾಂಗ್ರೆಸ್ ಪರ ವಾಗಿದೆ. ಎಲ್ಲ ಬಡವರ್ಗದ ಜನರು ಹೆಚ್ಚಾಗಿ ಮಹಿಳೆಯರು ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಮುಂದಾಗಿದ್ದರೆ, ಅದಕ್ಕೆ ನಮ್ಮ ಸರಕಾರ ತಂದ ಹಲವಾರು ಯೋಜನೆಗಳು ಬಡವ ಹಾಗು ಶ್ರೀ ಸಾಮನ್ಯರಿಗೆ ತಲುಪಿದೆ ಎಂದರ್ಥ. ಇಂದು ಸಿಎಂ ಬಾದಾಮಿಯಲ್ಲಿ ನಾಮಪತ್ರ ಸಲ್ಲಿಸಲಿದ್ದಾರೆ.

ಬಿಜೆಪಿ ಪಕ್ಷ ಇತಿಹಾಸ ಗೊತ್ತಿಲ್ಲದವರು, ವರುಣಾ ಕ್ಷೇತ್ರದಲ್ಲಿನ ಬಿಜೆಪಿ ಗೊಂದಲ್ಲಕ್ಕೂ ನಮಗೂ ಸಂಬಂಧವಿಲ್ಲ. ವಂಶ ಪರಂಪರೆ ರಾಜಕಾರಣ ಬಿಜೆಪಿ ಪಕ್ಷದಲ್ಲೂ ಇದೆ. ಕಳೆದ ಬಾರಿಯ ಚುನಾವಣೆಯಲ್ಲಿ ಮೈಸೂರು ಹಾಗು ಚಾಮರಾಜನಗರ ಕ್ಷೇತ್ರಗಳಲ್ಲಿ ಅತೀ ಹೆಚ್ಚು ಸ್ಥಾನ ಪಡೆದಿತ್ತು. ಈ ಬಾರಿ ಅದೇ ಪುನರಾವರ್ತನೆ ಆಗಲಿದೆ. ಮೋದಿ ಹಾಗು ಆಮೀತ್ ಶಾ ಎಷ್ಷು ಸಾರಿ ಬಂದು ಪ್ರಚಾರ ನಡೆಸಿದರೂ, ಕಾಂಗ್ರೆಸ್ ಆಧಿಕಾರ ಹಿಡಿಯುವುದು ಸ್ಪಷ್ಟ ಎಂದು ತಿಳಿಸಿದರು.

Leave a Reply

Your email address will not be published. Required fields are marked *

eight − 7 =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

 
Back To Top