543 ಎನ್‌ಕೌಂಟರ್‌ಗೆ ಸಾಕ್ಷಿಯಾದ ಉತ್ತರ ಪ್ರದೇಶ

Posted In : ದೇಶ

ಆಗ್ರಾ: ಕಳೆದ ಒಂದು ವರ್ಷದ ಅವಧಿಯಲ್ಲಿ ಉತ್ತರ ಪ್ರದೇಶದ ಪೊಲೀಸರು ಕ್ರಿಮಿನಲ್‌ಗಳೊಂದಿಗೆ 543 ಬಾರಿ ಎನ್‌ಕೌಂಟರ್ ನಡೆಸಿದ್ದು 22 ಕುಖ್ಯಾತ ಗ್ಯಾoಗಸ್ಟರ್‌ಗಳನ್ನು ಕೊಂದಿದ್ದಾರೆ.

ಪೊಲೀಸ್ ಸ್ಮರಣಾರ್ಥ ದಿನದಂದು ಈ ಮಾಹಿತಿ ಬಹಿರಂಗ ಮಾಡಿದ ಉತ್ತರ ಪ್ರದೇಶ ಸರಕಾರ ಎನ್‌ಕೌಂಟರ್‌ನಲ್ಲಿ 130 ಮಂದಿ ಮೃತಪಟ್ಟಿದ್ದ 1,405 ಮಂದಿಯನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.

1080 ಮಂದಿಯನ್ನು ಬಂಧಿಸಲು 500ರು ನಿಂದ ಐದು ಲಕ್ಷ ರುವರೆಗೆ ಇನಾಮು ಘೋಷಿಸಲಾಗಿತ್ತು. ಇದೇ ವೇಳೆ 127 ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದು ಏಳು ಮಂದಿ ಹುತಾತ್ಮರಾಗಿದ್ದಾರೆ.

ಪೊಲೀಸರ ತ್ಯಾಗವನ್ನು ಸ್ಮರಿಸಿದ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ‘‘ವಿಪರೀತ ಪರಿಸ್ಥಿತಿಗಳಲ್ಲಿ ಕಾನೂನು ಸುವ್ಯವಸ್ಥೆ ಹಾಗೂ ಕೋಮು ಸೌಹಾರ್ದತೆ ಕಾಪಾಡಲು ಉತ್ತರ ಪ್ರದೇಶ ಪೊಲೀಸರು ಶ್ರಮಪಟ್ಟಿದ್ದಾರೆ. ಇದರಿಂದಾಗಿ ಸಾಮಾನ್ಯ ಜನತೆಯಲ್ಲಿ ವಿಶ್ವಾಸ ವೃದ್ಧಿಯಾಗಿದೆ. ಆದರೆ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಇನ್ನಷ್ಟು ಕೆಲಸವಾಗಬೇಕಿದೆ’’ ಎಂದು ಹೇಳಿದ್ದಾರೆ.

‘‘ಈ ನಿಟ್ಟಿನಲ್ಲಿ ಇನ್ನೂ ಸಾಕಷ್ಟು ಕೆಲಸವಾಗಬೇಕಿದ್ದು ಸವಾಲುಗಳು ಸಾಕಷ್ಟಿವೆ. ಸಮಾಜ ವಿರೋಧಿ ಶಕ್ತಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕಿದೆ. ದೊಡ್ಡ ರಾಜ್ಯವಾದ ಉತ್ತರ ಪ್ರದೇಶ ಭಯೋತ್ಪಾದಕರ ಟಾರ್ಗೆಟ್ ಕೂಡಾ ಆಗಿದೆ. ಈ ವಿಚಾರವಾಗಿ ಭಯೋತ್ಪಾದನಾ ನಿಗ್ರಹ ತರಬೇತಿ ನೀಡಲಾಗಿರುವ ಸ್ವಾತ್ ತಂಡಗಳನ್ನು ರಚಿಸಲಾಗಿದೆ’’ ಎಂದು ಯೋಗಿ ಹೇಳಿದ್ದಾರೆ.

ಕಳೆದ ವರ್ಷ ಇಸ್ಲಾಮಿಕ್ ಸ್ಟೇಟ್‌ನ 19 ಭಯೋತ್ಪಾಾದಕರು, ಬಬ್ಬರ್ ಖಾಲ್ಸಾ, ಅನ್ಸರುಲ್ಲಾ ಬಾಂಗ್ಲಾ ಹಾಗೂ ಹಿಜ್ಬುಲ್ ಮುಜಾಹಿದೀನ್‌ನನ ಭಯೋತ್ಪಾದಕರನ್ನು ಭಯೋತ್ಪಾದಕ ನಿಗ್ರಹ ಪಡೆ ಕೊಂದಿದೆ.

 

 

 

 

Leave a Reply

Your email address will not be published. Required fields are marked *

16 − five =

Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

Thursday, 23.11.2017

ಶ್ರೀಹೇಮಲಂಭಿ, ದಕ್ಷಿಣಾಯನ, ಹೇಮಂತಋತು, ಮಾರ್ಗಶಿರ ಮಾಸ, ಶುಕ್ಲ ಪಕ್ಷ , ಪಂಚಮಿ, ಗುರುವಾರ, ನಿತ್ಯ ನಕ್ಷತ್ರ-ಪೂರ್ವಾ ಷಾಢ, ಯೋಗ-ಗಂಡ, ಕರಣ-ಬವ.

ರಾಹುಕಾಲಗುಳಿಕಕಾಲಯಮಗಂಡಕಾಲ
01.30-03.00 09.00-10.30 06.00-07.30

Read More

 

Thursday, 23.11.2017

ಶ್ರೀಹೇಮಲಂಭಿ, ದಕ್ಷಿಣಾಯನ, ಹೇಮಂತಋತು, ಮಾರ್ಗಶಿರ ಮಾಸ, ಶುಕ್ಲ ಪಕ್ಷ , ಪಂಚಮಿ, ಗುರುವಾರ, ನಿತ್ಯ ನಕ್ಷತ್ರ-ಪೂರ್ವಾ ಷಾಢ, ಯೋಗ-ಗಂಡ, ಕರಣ-ಬವ.

ರಾಹುಕಾಲಗುಳಿಕಕಾಲಯಮಗಂಡಕಾಲ
01.30-03.00 09.00-10.30 06.00-07.30

Read More

Back To Top